ಓಟಿ ಗೋಸ್ಕರ ಗ್ಯಾರಂಟಿ ಕೊಡುತ್ತಿದ್ದೀರಾ?ಅಥವಾ ಜನ ಬದುಕಲು ಕೊಡುತ್ತೀರಾ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಜನತೆ ನಿಮ್ಮ ಗ್ಯಾರಂಟಿ ಭಾಗ್ಯ ಬರುವ ಮೊದಲೇ ಉತ್ತಮ ಜೀವನವನ್ನು ನಡೆಸುತ್ತಾ ಬಂದಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯು ಬೆಂಗಳೂರು ಜಿಲ್ಲೆಯ ಬಳಿಕ ಎರಡನೆಯ ಅತಿ ದೊಡ್ಡ ಜಿಡಿಪಿ ರೇಟಿಂಗ್ ಹೊಂದಿರುವ ಜಿಲ್ಲೆಯಾಗಿದೆ.
ನಿಮ್ಮ ಗ್ಯಾರೆಂಟಿ ಭಾಗ್ಯದಿಂದಲೇ ಜನ ಬದುಕುತ್ತಿದ್ದಾರೆ ಎಂದು ನೀವು ತಿಳಿದುಕೊಂಡರೆ ನಿಮ್ಮಂತ ಮೂರ್ಖರು ಇಲ್ಲ.
ಈಗೇನಾದ್ರು ಚುನಾವಣೆ ಆದ್ರೆ 20 ಸೀಟು ಪಡೆಯುದೆ ಕಷ್ಟ ಎಂದು ರಾಜ್ಯದ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರಿಗೆ ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕ ಡಾಕ್ಟರ್ ಭರತ್ ಶೆಟ್ಟಿ ತಿರುಗೇಟು ನೀಡಿದ್ದಾರೆ.

ಕಾರ್ಯಕ್ರಮ ಒಂದರಲ್ಲಿ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹೆಚ್ಚಿನ ಜನತೆ ಗ್ಯಾರಂಟಿ ಭಾಗ್ಯವನ್ನು ಅನುಭವಿಸುತ್ತಿದ್ದಾರೆ.
ಆದರೆ ಚುನಾವಣೆ ಬಂದಾಗ ಮುಖವನ್ನು ಬೇರೆ ಕಡೆಗೆ ತಿರುಗಿಸುತ್ತಾರೆ ಎಂದು ಜಿಲ್ಲೆಯ ಜನತೆಯ ಬಗ್ಗೆ
ವೋಟ್ ಬ್ಯಾಂಕಿನ ಆಧಾರದಲ್ಲಿ ಕೇವಲವಾಗಿ ಮಾತನಾಡಿದ್ದು ಇದಕ್ಕೆ ಶಾಸಕರಾದ ಡಾಕ್ಟರ್ ಭರತ್ ಶೆಟ್ಟಿ ಪ್ರತಿಕ್ರಿಯಿಸಿದ್ದಾರೆ.

ಗ್ಯಾರಂಟಿ ಭಾಗ್ಯವನ್ನು ಜನತೆ ನಿಮ್ಮ ಬಳಿಬಂದು ಕೇಳಿಲ್ಲ.
ವೋಟು ಪಡೆಯಲು ಜನಪ್ರಿಯ ಪ್ರಣಾಳಿಕೆ ಘೋಷಿಸಿ ಇದೀಗ ಜನರ ವಿರುದ್ಧವೇ ಮಾತನಾಡುವುದು ನಿಮ್ಮ ಪಕ್ಕ ಓಟು ಡೀಲಿಂಗ್ ಮನಸ್ಥಿತಿಯನ್ನ ತೋರಿಸುತ್ತಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಗ್ಯಾರಂಟಿ ಭಾಗ್ಯವನ್ನು ಪಡೆಯುವ ಪ್ರಜೆಗಳು ಹೊಟ್ಟೆಗಿಲ್ಲದೆ ತೆಗೆದುಕೊಳ್ಳುತ್ತಿದ್ದಾರೆ ಎಂದು ಅಂದುಕೊಳ್ಳುವ ಅಗತ್ಯವಿಲ್ಲ. ನಿಮ್ಮ ಗ್ಯಾಂರಂತಟಿ ಗಳು ಸಿಗುವುದೇ ಮೂರ್ನಾಲ್ಕು ತಿಂಗಳಿಗೊಮ್ಮೆ,
ಅದೂ ಕೂಡ
ಸರಕಾರ ಜನರ ತೆರಿಗೆಯಿಂದಲೇ ಸೌಲಭ್ಯವನ್ನು ವಾಪಸ್ ಜನರಿಗೆ ನೀಡುತ್ತದೆ. ಇದರ ನಡುವೆ ಉದ್ಯೋಗ ಸೃಷ್ಟಿ ಮಾಡಿಲ್ಲ, ಐಟಿ ಕಂಪನಿ ತರಲು ಶಕ್ತಿಯಿಲ್ಲ.ಅಭಿವೃಡ್ಡಿ ಸರಕಾರದಿಂದ ಸಾಧ್ಯ ಆಗ್ತಿಲ್ಲ.ಅಪರಾಧ, ಕೊಲೆ ಹೆಚ್ಚುತ್ತಿದೆ. ವೈಫಾಲ್ಯಾದಿಂದ ಹತಾಶೆವಾಗಿರುವ ಇವರು ಏನೇನೋ ಹೇಳಿಕೆ ಕೊಡುತ್ತಿದ್ದಾರೆ.
ಸರಕರವೇ
ಗ್ಯಾರಂಟಿ ಕೊಟ್ಟು ಇದನ್ನು ಪಡೆಯುವ ಮತದಾರನ್ನು ಮತ ಹಾಕಿತ್ತಿಲ್ಲ ಎಂದು ಜಿಲ್ಲೆಯ ಜನರನ್ನು ಕೀಳು ದೃಷ್ಟಿಯಿಂದ ನೋಡುವ ಅಗತ್ಯವಿಲ್ಲ ಎಂದು ಹೇಳಿದ್ದಾರೆ.