ಗದಗ : ನೂರಾ ಒಂದು ಬಾವಿ, ನೂರಾ ಒಂದು ದೇವಾಲಯಗಳನ್ನೊಳಗೊಂಡು ಜೈನ, ವೈಷ್ಣವ, ಶೈವ ವಾಸ್ತುಶೈಲಿಯ ವಿಶಿಷ್ಟ ವಾಸ್ತುಶಿಲ್ಪವನ್ನು ಹೊಂದಿರುವ ಐತಿಹಾಸಿಕ ಲಕ್ಕುಂಡಿಯ ಇತಿಹಾಸವನ್ನು ಇನ್ನಷ್ಟು ಬೆಳಕಿಗೆ ತರಲು ಲಕ್ಕುಂಡಿ ಅಭಿವೃದ್ದಿ ಪ್ರಾಧಿಕಾರದಾಶ್ರಯದಲ್ಲಿಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಹಾಲಿನಲ್ಲಿ ಕೈ ತೊಳೆದು ಬೆಳ್ಳಿ ಗಾರೆಯಿಂದ ಉತ್ಖನನಕ್ಕೆ ಚಾಲನೆ ನೀಡಿದರು.
ಲಕ್ಕುಂಡಿಯಲ್ಲಿ ನೂರಾ ಒಂದು ದೇವಾಲಯ,ಭಾವಿಗಳಿರುವ ಬಗ್ಗೆ ಉಲ್ಲೇಖವಿದ್ದರೂ ಸಹ ಇದೀಗ ಕೇವಲ ೫೦ ದೇವಾಲಯ, ೩೦ ಬಾವಿಗಳು ಮಾತ್ರ ಉಳಿದಿವೆ. ಬಹುತೇಕ ದೇವಾಲಯಗಳು, ಬಾವಿಗಳು ಒಂದೋ ಸಾರ್ವಜನಿಕರ ಅತೀಕ್ರಮಣದಿಂದಲೋ ಇಲ್ಲವೇ ಕಾಲಾಂತರದಲ್ಲಿ ಭೂಮಿಯಲ್ಲಿ ಹುದುಗಿಹೋಗಿವೆ. ಉತ್ಖನನದ ಮೂಲಕ ಲಕ್ಕುಂಡಿಯ ಭೂಮಿಯಲ್ಲಿ ಅಡಗಿರುವ ಅಪರೂಪದ ಶಿಲ್ಪಕಲೆಗಳನ್ನು ಅನ್ವೇಷಿಸಲುದ್ದೇಶಿಸಲಾಗಿದೆ.
ಲಕ್ಕುಂಡಿಯಲ್ಲಿನ ಅಪರೂಪದ ಶಿಲ್ಪಕಲೆಗಳ ಸೊಬಗನ್ನು ಅಂತರಾಷ್ಟ್ರೀಯ ಪ್ರವಾಸಿಗರು ಸವಿಯಬೇಕು. ಲಕ್ಕುಂಡಿಯಲ್ಲಿ ಪ್ರವಾಸೋದ್ಯಮ ಬೆಳೆಯಬೇಕೆಂಬ ಉತ್ಕಟೇಚ್ಛೆಯಿಂದ ಲಕ್ಕುಂಡಿಯಲ್ಲಿ ಸುಮಾರು ೨೫೦೦ ಕ್ಕೂ ಹೆಚ್ಚು ಪ್ರಾಚೀನ ಕಲಾಕೃತಿಗಳು,ಅಪರೂಪದ ವಸ್ತುಗಳನ್ನು ವಿಶೇಷ ಪಲ್ಲಕ್ಕಿ ಮೂಲಕ ಲಕ್ಕುಂಡಿಯ ಮನೆ ಮನೆಗಳಿಗೆ ತೆರಳಿ ಪ್ರಾಚೀನ ಅವಶೇಷಗಳನ್ನು ಸಂಗ್ರಹಿಸಿ ಇಲಾಖೆಯ ಸುಪರ್ದಿಗೆ ತೆಗೆದುಕೊಂಡು ಕೋಟೆ ವೀರಭದ್ರೇಶ್ವರ ದೇವಾಲಯದ ಆವರಣದಲ್ಲಿ ಸಂಗ್ರಹಿಸಿರುವ ಶಿಲ್ಪಗಳನ್ನು ವಿಕ್ಷಿಸಿದರು.
ಪ್ರವಾಸೋದ್ಯಮ ಸಚಿವ ಡಾ.ಎಚ್.ಕೆ.ಪಾಟೀಲ, ಪೌರಾಡಳಿತ ಸಚಿವ ರಹೀಂಖಾನ,ವಿಧಾನ ಪರಿಷತ್ ಸದಸ್ಯ ಪ್ರೊ.ಎಸ್.ವಿ.ಸಂಕನೂರ,ಸಲೀಂ ಅಹ್ಮದ,ಶಾಸಕ ಜಿ.ಎಸ್.ಪಾಟೀಲ,ಲಕ್ಕುಂಡಿ ಅಭಿವೃದ್ದು ಪ್ರಾಧಿಕಾರದ ಸದಸ್ಯ ಸಿದ್ದಲಿಂಗೇಶ್ವರ ಪಾಟೀಲ ಮುಖ್ಯಮಂತ್ರಿಗಳಿಗೆ ಸಾಥ್ ನೀಡಿದರು.ನರಗುಂದ ಶಾಸಕ ಸಿ.ಸಿ.ಪಾಟೀಲ ಅಧ್ಯಕ್ಷತೆವಹಿಸಿದ್ದರು.