ಯಾದಗಿರಿ: ಎಂಎಲ್ಸಿ ಸ್ಥಾನ ಕೊಟ್ಟರು ನಾನು ತೆಗೆದುಕೊಳ್ಳುವುದಿಲ್ಲ, ಮುಂದಿನ ಸಲ ನಾನು ಹೆಚ್ಚಿನ ವೋಟ್ ಪಡೆದು ಗೆದ್ದು ನಾನು ರಾಜ್ಯದ ಉಪಮುಖ್ಯಮಂತ್ರಿಯಾಗುತ್ತೇನೆ ಎಂದು ನಿಜಶರಣ ಅಂಬಿಗರ ಚೌಡಯ್ಯ ನಿಗಮದ ಅಧ್ಯಕ್ಷ ಹಾಗೂ ಮಾಜಿ ಸಚಿವ ಬಾಬುರಾವ್ ಚಿಂಚನಸೂರು ಹೇಳಿದ್ದಾರೆ.
ಜಿಲ್ಲೆಯ ಗುರುಮಠಕಲ್ ಪಟ್ಟಣದಲ್ಲಿ ಮಾತನಾಡಿರುವ ಅವರು ನಾನು ಯುದ್ದ ಭೂಮಿಯಲ್ಲಿ ಸೋತಿದ್ದೇನೆ, ಮತ್ತೆ ಯುದ್ದ ಭೂಮಿಯಲ್ಲಿ ಗೆದ್ದು ಎಂಎಲ್ಎ ಆಗುತ್ತೇನೆ ಹೊರತು ನಾನು ಎಂಎಲ್ಸಿ ಆಗುವನು ಅಲ್ಲ, ಮತ್ತೆ ಯುದ್ದ ಭೂಮಿಯಲ್ಲಿ ಗೆದ್ದು ಎಂಎಲ್ಎ ಆಗುತ್ತೇನೆ, ನಾನು ಹೇಡಿಯಾಗಿ ಹಿಂದಿನ ಬಾಗಿಲು ಮೂಲಕ ಎಂಎಲ್ಸಿ ಆಗುವುದಿಲ್ಲ, ಮುಂದಿನ ಸಲ ನಾನು ಹೆಚ್ಚಿನ ವೋಟ್ ಪಡೆದು ಗೆದ್ದು ನಾನು ರಾಜ್ಯದ ಉಪಮುಖ್ಯಮಂತ್ರಿಯಾಗುತ್ತೇನೆ, ಎಂಎಲ್ಸಿ ಸ್ಥಾನ ಕೊಟ್ಟರು ನಾನು ತೆಗೆದುಕೊಳ್ಳುವುದಿಲ್ಲ, ಜನರು ಸುಮ್ಮನೆ ಹವಾ ಎಬ್ಬಿಸುತ್ತಾರೆ, ನಾನು ಯುದ್ಧ ಭೂಮಿಯಲ್ಲಿ ಸೋತಿದ್ದೇನೆ, ನಾನು ಸ್ವತ: ಶೂರನಿದ್ದೇನೆ, ವೀರನಿದ್ದೇನೆ, ತಾಕತ್ ಇದೆ, ಬಲಿಷ್ಠ ಇದ್ದೇನೆ, ಮತ್ತೆ ಯುದ್ದ ಭೂಮಿಯಲ್ಲಿ ಗೆದ್ದು ಉಪಮುಖ್ಯಮಂತ್ರಿಯಾಗಿ ಗುರುಮಠಕಲ್‌ಗೆ ಬರುತ್ತೇನೆಂದರು.