ಟೆಹ್ರಾನ್: ಇಸ್ರೇಲ್ ಮೇಲೆ ಗುರುವಾರ ೩೦ ಕ್ಷಿಪಣಿಗಳನ್ನು ಇರಾನ್ ಹಾರಿಬಿಟ್ಟಿದೆ. ದಕ್ಷಿಣ ಇಸ್ರೇಲ್‌ನ ಸೊರೊಕೊದಲ್ಲಿನ ಬೀರ್‌ಶೆಬಾ ಆಸ್ಪತ್ರೆಯ ಮೇಲೂ ಇರಾನ್ ಕ್ಷಿಪಣಿ ಬಿದ್ದಿದ್ದು, ಇದರಲ್ಲಿ ೭೦ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ. ಆ ಭಾಗದಲ್ಲಿ ಇದೇ ದೊಡ್ಡ ಆಸ್ಪತ್ರೆಯಾಗಿದೆ. ಆಸ್ಪತ್ರೆಯ ಕಟ್ಟಡಕ್ಕೆ ಭಾರಿ ಹಾನಿಯುಂಟಾಗಿದೆ. ಸೊರೊಕೊ ಮಾತ್ರವಲ್ಲದೆ ಮಧ್ಯ ಇಸ್ರೇಲ್‌ನ ಹೊಲೊನ್ ಮತ್ತು ರಮತ್ ಗನ್ ಮೇಲೂ ದಾಳಿ ನಡೆದಿದೆ. ದಾಳಿಗಳಲ್ಲಿ ೨೪೦ ಜನ ಗಾಯಗೊಂಡಿದ್ದಾರೆ. ಈ ಪೈಕಿ ೬ ಜನರ ಪರಿಸ್ಥಿತಿ ಗಂಭೀರವಾಗಿದೆ.
ರೋಗಿಗಳು ಮತ್ತು ವೈದ್ಯ ಸಿಬ್ಬಂದಿ ಶೆಲ್ಟರ್‌ನಲ್ಲಿದ್ದು, ಸ್ಫೋಟದ ಆಘಾತದಿಂದ ಹಲವರಿಗೆ ಗಾಯಗಳಾಗಿವೆ ಎಂದು ಆಸ್ಪತ್ರೆಯ ಮಹಾ ನಿರ್ದೇಶಕರು ಹೇಳಿದ್ದಾರೆ. ಈ ಕ್ಷಿಪಣಿಯನ್ನು ಪಕ್ಕದ ಮಿಲಿಟರಿ ನೆಲೆಗಳನ್ನು ಗುರಿಯನ್ನಾಗಿಸಿಕೊಂಡು ಹಾರಿಸಲಾಗಿತ್ತು. ಅದು ಗುರಿ ತಪ್ಪಿ ಆಸ್ಪತ್ರೆ ಮೇಲೆ ಬಿದ್ದಿದೆ ಎಂದು ಹೇಳಲಾಗುತ್ತಿದೆ.
ಆದರೆ ಆಸ್ಪತ್ರೆಯನ್ನೇ ಗುರಿಯನ್ನಾಗಿಸಿಕೊಂಡು ದಾಳಿ ನಡೆಸಲಾಗಿದೆ. ಆ ರೀತಿ ಮಾಡುವಂತೆ ಇಸ್ರೇಲ್ ನಾಯಕ ಖಮೇನಿ ಆದೇಶ ನೀಡಿದ್ದಾರೆ ಎಂದು ಇಸ್ರೇಲ್ ಸೇನೆ ಆರೋಪಿಸಿದೆ.