ಗದಗ : ಯುಗಾದಿ ಸಂಭ್ರಮದಲ್ಲಿರುವಾಗಲೇ ಇಲ್ಲಿಯ ರೇಲ್ವೇ ಸ್ಟೇಶನ್ ಮಾರ್ಗದಲ್ಲಿರುವ ಇಲೆಕ್ಟ್ರಾನಿಕ್ ಗುದಾಮು, ಬಟ್ಟೆ ಅಂಗಡಿಗಳಿಗೆ ಶಾರ್ಟ ಸರ್ಕ್ಯೂಟ್‌ನಿಂದ ಬೆಂಕಿ ತಗಲಿ ಲಕ್ಷಾಂತರ ರೂಪಾಯಿ ಮೌಲ್ಯದ ವಸ್ತುಗಳು ಅಗ್ನಿಗಾಹುತಿಯಾಗಿವೆ.
ಈ ಬೆಂಕಿ ಅಪಘಾತದಲ್ಲಿ ಫ್ರೀಜ್,ವಾಷಿಂಗ್ ಮಶೀನ,ಸ್ಪೀಕರಗಳು ಸೇರಿದಂತೆ ಸುಮಾರು ಮೂವತ್ತು ಲಕ್ಷಕ್ಕೂ ಮಿಕ್ಕಿ ಹಾನಿಯಾಗಿದೆಯೆಂದು ಅಂದಾಜು ಮಾಡಲಾಗಿದೆ. ಅಗ್ನಿಶಾಮಕ ಪಡೆ ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಶಹರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.