ಲಂಡನ್: ಜೂ.20ರಿಂದ ಆರಂಭಗೊಳ್ಳಲಿರುವ ಇಂಗ್ಲೆಂಡ್ ಮತ್ತು ಭಾರತ ನಡುವಿನ ಟೆಸ್ಟ್ ಸರಣಿಯ ಹೆಸರು ಬದಲಾವಣೆ ಮಾಡಲಾಗಿದೆ.
ಭಾರತ – ಇಂಗ್ಲೆಂಡ್ ಟೆಸ್ಟ್ ಸರಣಿ “ತೆಂಡುಲ್ಕರ್-ಆ್ಯಂಡರ್ಸನ್ ಟ್ರೋಫಿ’ ಹೆಸರಿನಲ್ಲಿ ನಡೆಯಲಿದೆ, ಇಂಗ್ಲೆಂಡ್ ಮತ್ತು ನ್ಯೂಜಿಲೆಂಡ್ ನಡುವಣ ಟೆಸ್ಟ್ ಸರಣಿಗೆ ಮಾಜಿ ಕ್ರಿಕೆಟಿಗರಾದ ಮಾರ್ಟಿನ್ ಕ್ರೋವ್ (ನ್ಯೂಜಿಲೆಂಡ್) ಹಾಗೂ ಗ್ರಾಹಮ್ ಥಾರ್ಪ್ (ಇಂಗ್ಲೆಂಡ್) ಗೌರವಾರ್ಥ ‘ಕ್ರೋವ್ – ಥಾರ್ಪ್ ಟ್ರೋಫಿ’ ಎಂದು ಕಳೆದ ವರ್ಷ ಹೆಸರಿಡಲಾಗಿತ್ತು. ಇಫಿಕರ್ ಅಲಿ ಖಾನ್ ಪಟೌಡಿ ಅವರು ಉಭಯ ತಂಡಗಳ ಪರ ಟೆಸ್ಟ್ ಆಡಿದ ಏಕೈಕ ಕ್ರಿಕೆಟಿಗ ಎನಿಸಿದ್ದರು. ಅವರ ಮೊಮ್ಮಗ ಮನ್ಸೂರ್ ಅಲಿ ಖಾನ್ ಪಟೌಡಿ ಅವರು ಭಾರತ ತಂಡದ ನಾಯಕರಾಗಿದ್ದರು. ಅವರ ಸ್ಮರಣಾರ್ಥ ಸ್ಥಾಪಿಸಲಾಗಿದ್ದ ‘ಪಟೌಡಿ ಟ್ರೋಫಿ’ಗಾಗಿ ಈ ಎರಡೂ ತಂಡಗಳು ಈವರೆಗೆ ನಡೆಸಿದ್ದವು. ಇನ್ನು ಮುಂದೆ ಭಾರತ – ಇಂಗ್ಲೆಂಡ್ ಟೆಸ್ಟ್ ಸರಣಿ “ತೆಂಡುಲ್ಕರ್-ಆ್ಯಂಡರ್ಸನ್ ಟ್ರೋಫಿ’ ಹೆಸರಿನಲ್ಲಿ ನಡೆಯಲಿದೆ. ಭಾರತದ ದಿಗ್ಗಜ ಬ್ಯಾಟರ್ ಸಚಿನ್ ತೆಂಡುಲ್ಕರ್ ಮತ್ತು ಇಂಗ್ಲೆಂಡ್‌ನ ದಿಗ್ಗಜ ವೇಗಿ ಜೇಮ್ಸ್ ಆ್ಯಂಡರ್ಸನ್‌ಗೆ ಗೌರವಾರ್ಥವಾಗಿ ಪಂದ್ಯಗಳ ಟೆಸ್ಟ್ ನಡೆಯಲಿದೆ.