ನವದೆಹಲಿ: ಇಂಗ್ಲೆಂಡ್ ಪ್ರವಾಸಕ್ಕಾಗಿ ಭಾರತದ U19 ತಂಡವನ್ನು BCCI ಆಯ್ಕೆ ಮಾಡಿ ವೇಳಾಪಟ್ಟಿಯನ್ನು ಪ್ರಕಟಿಸಿದೆ.
ಜೂನ್ 24 ರಿಂದ ಜುಲೈ 23 ರವರೆಗೆ ಇಂಗ್ಲೆಂಡ್ ಪ್ರವಾಸ ನಡೆಯಲಿದೆ. ಇದರಲ್ಲಿ 50 ಓವರ್‌ಗಳ ಅಭ್ಯಾಸ ಪಂದ್ಯ, ಐದು ಯೂತ್ ODI ಸರಣಿ ಮತ್ತು ಇಂಗ್ಲೆಂಡ್ U-19 ವಿರುದ್ಧ ಎರಡು ಪಂದ್ಯಗಳು ನಡೆಯಲಿವೆ. ಭಾರತೀಯ ಅಂಡರ್ -19 ತಂಡದ ನಾಯಕನಾಗಿ ಚೆನ್ನೈ ಸೂಪರ್ ಕಿಂಗ್ಸ್ (CSK) ತಂಡದ 17 ವರ್ಷದ ಬ್ಯಾಟ್ಸ್‌ಮನ್ ಆಯುಷ್ ಮ್ಹಾತ್ರೆ ಆಯ್ಕೆ ಆಗಿದ್ದಾರೆ. ಇನ್ನುಳಿದಂತೆ ವೈಭವ್ ಸೂರ್ಯವಂಶಿ, ವಿಹಾನ್ ಮಲ್ಹೋತ್ರಾ, ಮೌಲ್ಯರಾಜ್‌ಸಿನ್ಹ್ ಚಾವ್ಡಾ, ರಾಹುಲ್ ಕುಮಾರ್, ಅಭಿಗ್ಯಾನ್ ಕುಂದು (ಉಪನಾಯಕ ಮತ್ತು WK), ಹರ್ವಂಶ್ ಸಿಂಗ್ (WK), ಆರ್‌ಎಸ್ ಅಂಬ್ರಿಶ್, ಕಾನಿಷ್ಕ್ ಚೌಹಾಣ್, ಖಿಲಾನ್ ಗುಲಾನ್ ಪಟೇಲ್, ಪ್ರವ್ಹಾ ಪಟೇಲ್, ಪ್ರವ್ಹಾವ್ ಪಟೇಲ್, ಹೆಂತ್ ಮೊಹಮ್ಮದ್ ಎನಾನ್, ಆದಿತ್ಯ ರಾಣಾ, ಅನ್ಮೋಲ್ಜೀತ್ ಸಿಂಗ್ ತಂಡದಲ್ಲಿ ಆಡಲಿದ್ದಾರೆ, ಇನ್ನು ಸ್ಟ್ಯಾಂಡ್‌ಬೈ ಆಟಗಾರರಾಗಿ ನಮನ್ ಪುಷ್ಪಕ್, ಡಿ ದೀಪೇಶ್, ವೇದಾಂತ್ ತ್ರಿವೇದಿ, ವಿಕಲ್ಪ್ ತಿವಾರಿ, ಅಲಂಕೃತ್ ರಾಪೋಲ್ (WK) ಆಯ್ಕೆ ಆಗಿದ್ದಾರೆ.