ಆಲಮಟ್ಟಿ ಜಲಾಶಯದ ಎಲ್ಲ 26 ಗೇಟ್ ಓಪನ್

ವಿಜಯಪುರ(ಆಲಮಟ್ಟಿ): ಮಹಾರಾಷ್ಟ್ರದಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಭಾರಿ ಪ್ರಮಾಣದ ನೀರು ಆಲಮಟ್ಟಿ ಜಲಾಶಯಕ್ಕೆ ಹರಿದು ಬರುತ್ತಿದೆ. ಮುಂಜಾಗ್ರತಾ ಕ್ರಮವಾಗಿ ಈ ವರ್ಷ ಇದೇ ಮೊದಲ ಬಾರಿಗೆ ಆಲಮಟ್ಟಿ ಜಲಾಶಯದ ಎಲ್ಲ 26 ಗೇಟ್‌ಗಳನ್ನು ತೆರೆದು, ವಿದ್ಯುತ್ ಘಟಕ ಸೇರಿ ೯೦ ಸಾವಿರ ಕ್ಯುಸೆಕ್ ನೀರು ಹೊರ ಬಿಡಲಾಗುತ್ತಿದೆ.
ಶುಕ್ರವಾರ ಬೆಳಗ್ಗೆ ೭೦,೦೦೦ ಸಾವಿರ ಕ್ಯೂಸೆಕ್ ಇದ್ದ ಹೊರಹರಿವು ಸಾಯಂಕಾಲ ೯೦,೦೦೦ ಸಾವಿರ ಕ್ಯೂಸೆಕ್ ಸೇರಿಸಲಾಯಿತು. ೨೬ ಗೇಟ್‌ಗಳ ಮೂಲಕ ೪೫,೦೦೦ ಹಾಗೂ ವಿದ್ಯುತ್ ಘಟಕದ ಮೂಲಕ ೪೫,೦೦೦ ಸೇರಿ ೯೦,೦೦೦ ಕ್ಯೂಸೆಕ್ ನೀರನ್ನು ಜಲಾಶಯದಿಂದ ಹೊರಬಿಡಲಾಗುತ್ತಿದೆ. ಜಲಾಶಯಕ್ಕೆ ಮುಂದಿನ ಎರಡು ಮೂರು ದಿನಗಳಲ್ಲಿ ಒಂದು ಲಕ್ಷ ಕ್ಯೂಸೆಕ್‌ಗೂ ಅಧಿಕ ನೀರು ಹರಿದು ಬರುವ ಸಾಧ್ಯತೆಯಿದ್ದು, ಮುಂಜಾಗ್ರತೆಯ ಕ್ರಮವಾಗಿ ಎಲ್ಲ ೨೬ ಗೇಟ್‌ಗಳನ್ನು ತೆರೆಯಲಾಗಿದೆ.