ಆಪರೇಶನ್‌ ಸಿಂಧೂರ: ಟಾರ್ಗೆಟ್ ಗುರುತಿಸಿದ್ದು ಹೇಗೆ?

ಉಗ್ರವಾದಕ್ಕೆ ಅಂತ್ಯವಾಡುವ ಸಲುವಾಗಿ ಭಾರತ ಬಹಳ ಕೇರ್‌ಫುಲ್ ಆಗಿ ಟಾರ್ಗೆಟ್‌ಗಳನ್ನು ಸೆಲೆಕ್ಟ್ ಮಾಡಿದೆ. ಲಷ್ಕರೆ ಹಾಗೂ ಜೈಶೆ ಮೊಹಮದ್ ಸಂಘಟನೆಯ ಹಿರಿಯ ಲೀಡರ್‌ಗಳನ್ನು ಗುರಿಯಾಗಿಸಿ ಭಾರತ ದಾಳಿ ನಡೆಸಿದೆ. ಈ ವೇಳೆ ಪಾಕಿಸ್ತಾನದ ಯಾವುದೇ ಮಿಲಿಟರಿ ನೆಲೆಗಳಿಗೆ, ನಾಗರಿಕರಿಗೆ ಹಾನಿ ಆಗದಂತೆ ಎಚ್ಚರಿಕೆ ವಹಿಸಲಾಗಿತ್ತು. ದಾಳಿ ಉಗ್ರರ ನೆಲೆಗಳನ್ನು ಮಾತ್ರ ಕೇಂದ್ರಿಕರೀಸಿತ್ತು. ದಾಳಿಯ ಎಫೆಕ್ಟ್‌ನ ವ್ಯಾಪ್ತಿ ಹಾಗೂ ಪರಿಣಾಮ ಹೆಚ್ಚಾಗದಂತೆ ನೋಡಿಕೊಳ್ಳಲಾಗಿತ್ತು. ಬುಧವಾರ ನಸುಕಿನ ಜಾವ ೧.೪೪ಕ್ಕೆ ಸೇನಾ ದಾಳಿ ನಡೆದಿದ್ದು, ಆಪರೇಷನ್ ಸಿಂಧೂರಕ್ಕೆ ಭಾರತೀಯ ಸೇನೆ, ನೌಕಾಪಡೆ ಮತ್ತು ವಾಯುಪಡೆಯನ್ನು ಬಳಸಲಾಗಿದೆ ಎಂದು ತಿಳಿದುಬಂದಿದೆ. 1971ರ ಯುದ್ಧದ ಬಳಿಕ ಪಾಕ್ ವಿರುದ್ಧ ಮೂರು ಸೇನೆಗಳನ್ನು ಭಾರತ ರಣರಂಗಕ್ಕೆ ಇಳಿಸಿರುವುದು ಇದೇ ಮೊದಲು ಎನ್ನಲಾಗಿದೆ. ಈ ಸ್ಟ್ರೈಕ್‌ಗಳಿಗೆ ಭಾರತ, ಸ್ಟಾರ್ಮ್ ಸ್ಯಾಡೋ ಅಂದ್ರೇ ಸ್ಕಾಲ್ಪ್ ಮಿಸೈಲ್, ಹ್ಯಾಮರ್ ಸ್ಮಾರ್ಟ್ ಬಾಂಬ್ ಹಾಗೂ ಕಾಮಿಕೇಜ್ ಡ್ರೋನ್‌ಗಳನ್ನು ಬಳಸಿದ್ದು, ಇವುಗಳು ಚಲಿಸುವ ಮದ್ದುಗುಂಡುಗಳಾಗಿದ್ದು, ವಾರ್‌ಹೆಡ್‌ಗಳನ್ನು ಹೊತ್ತ ಇವು ಟಾರ್ಗೆಟ್ ಅನ್ನು ನಿಖರವಾಗಿ ಮುಟ್ಟಿವೆ. ಇದು ಭಾರತದ ಮೊದಲ ಹಂತದ ಕಾರ್ಯಾಚರಣೆಯಾಗಿದ್ದು, ಮುಂದೆ ಪಾಕಿಸ್ತಾನದ ಪ್ರತಿಕ್ರಿಯೆಯನ್ನು ನೋಡಿ ಮತ್ತಷ್ಟು ದಾಳಿ ನಡೆಯುವ ಸಾಧ್ಯತೆ ಇದೆ.