ಆತ್ಮಹತ್ಯೆ: ನೇಕಾರ ಕುಟುಂಬಕ್ಕೆ ನೆರವು

ಪತಿ-ಪತ್ನಿಯಾಗುವ ಸಂದರ್ಭ ಮದುವೆ ಮನೆಯ ಸಂಭ್ರಮ. ನೂರಾರು ಸಂಬಂಧಿಕರು ಭೆಟ್ಟಿಯ ಸಂತಸದ ಮಧ್ಯೆಯೂ ಈಚೆಗೆ ಆರ್ಥಿಕ ಸಂಕಷ್ಟದಿಂದ ಆತ್ಮಹತ್ಯೆ ಮಾಡಿಕೊಂಡ ಸಂಗಮೇಶ ಮುರಗೋಡ ಕುಟುಂಬಕ್ಕೆ ಇಲ್ಲೊಂದು ಮದುವೆ ಮಂಟಪ ಸಹಾಯ ಮಾಡುವ ಮೂಲಕ ಮಾನವೀಯತೆ ಮೆರೆಯುವಲ್ಲಿ ಕಾರಣವಾಯಿತು.

ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ಬನಹಟ್ಟಿಯ ಮಾಲಾಪುರ ಹಾಗು ಬೆಳಗಲಿ ಕುಟುಂಬದ ಮದುವೆ ಸಮಾರಂಭದಲ್ಲಿ ಆತ್ಮಹತ್ಯೆ ಮಾಡಿಕೊಂಡ ಕುಟುಂಬಕ್ಕೆ 5 ಸಾವಿರ ರೂ.ಗಳಷ್ಟು ಆರ್ಥಿಕ ಸಹಾಯ ಮಾಡುವ ಮೂಲಕ ಸಂಕಷ್ಟದ ಕುಟುಂಬಕ್ಕೆ ನೆರವಾಗಿ ನಿಮ್ಮೊಂದಿಗೆ ನಾವಿದ್ದೇವೆಂಬ ಸಂದೇಶದ ಮೂಲಕ ಇತರರಿಗೂ ಮದುವೆ ಸಮಾರಂಭಗಳಿಗೆ ಮಾದರಿಯಾಗುವಲ್ಲಿ ಕಾರಣವಾಯಿತು.

ಲಕ್ಷಾಂತರ ರೂ.ಗಳ ದುಂದು ವೆಚ್ಚದಲ್ಲಿ ನಡೆಯುತ್ತಿರುವ ಮದುವೆ ಸಮಾರಂಭಗಳಲ್ಲಿ ಇಂತಹ ಮಾನವೀಯ ಕಳಕಳಿಯ ಕಾರ್ಯಕ್ರಮ ನಡೆದಲ್ಲಿ ಸಮಾಜದಲ್ಲಿ ಸಂಕಷ್ಟಕ್ಕೀಡಾದ ಕುಟುಂಬಗಳಿಗೆ ನೆರವಾಗುವ ಮೂಲಕ ಇತರರ ಪ್ರೇರಣೆಗೆ ಕಾರವಾಗಲಿದೆ