ಮಾಡಬಾರದ ಕೆಲಸ ಮಾಡಿ ದರೆ ಆಗಬಾರದ್ದು ಆಗುತ್ತದೆ. ಈಗ ನೋಡಿ ಇಂಥದ್ದೇ ಮಾಡಿ ಅವನು ಪತ್ತೆ ಇಲ್ಲದ ಹಾಗೆ ಓಡಿ ಹೋಗಿದ್ದಾನೆ… ಎಲ್ಲಿ ಹೋಗಿದ್ದಾನೆ? ಹೇಗೆ ಹೋಗಿದ್ದಾನೆ? ನಡೆದುಕೊಂಡು ಹೋದನಾ? ಓಡಿ ಹೋದನಾ ಇವೆಲ್ಲದರ ಕುರಿತು ಪತ್ತೆ ಹಚ್ಚಿರಿ ಅಂಥವರಿಗೆ ಕರೆದು ಶಬ್ಬಾಷ್ ಅಂತ ಹೇಳುತ್ತೇನೆಂದು ಸೋದಿ ಮಾಮಾರು ಹೇಳಿದ್ದಾರೆ ಎಂದು ಖಾಸಗಿ ಚಾನಲ್‌ನ ನಿರೂಪಕಿ ಕಿವುಡನುಮಿ ಒದರುತ್ತ… ಅರೆ… ನಾನೇ ಪತ್ತೆ ಹಚ್ಚುತ್ತೇನೆ… ಅವರನ್ನು ಕೇಳುತ್ತೇನೆ.. ನಾ ಕೇಳಿದರೆ ಯಾರೂ ಇಲ್ಲ ಅನ್ನಲ್ಲ ಎಂದು ಮದ್ರಾಮಣ್ಣನವರಿಗೆ ಕರೆ ಮಾಡಿ… ಅಣ್ಣೋರೆ ಆ ಅಧ್ಯಕ್ಷ ಏನೋ ಪತ್ತೆ ಇರಲಾರದೇ ಓಡಿ ಹೋದನಂತೆ ನಿಮಗೇನಾದರೂ ಕಂಡನಾ ಎಂದಳು. ಅದಕ್ಕೆ ಮದ್ರಾಮಣ್ಣ. ಊಂ ಕಣವ್ವ ರಾತ್ರಿ ಧಕಧಕ ಅಂತ ಓಡಿದಂಗಾತು ಅಂದರು. ಓಕೆ ಅಂದು ಸುಮಾರಣ್ಣನವರಿಗೆ ಕರೆ ಮಾಡಿ… ಸುಮಾರಣ್ಣ ಅಧ್ಯಕ್ಷ ಓಡಿ ಹೋಗಿದಾನಂತೆ ಅಂದಾಗ… ನೋಡಿ ಸಿಸ್ಟರ್… ನಾನು ರಾತ್ರಿ ಸೀರಿಯಲ್ ನೋಡಿಕೊಂಡು ಕುಳಿತಿದ್ದೆ… ನಮ್ಮನೆ ಹಿಂದೆ… ಹಾ…ಹೂಂ ಅಂದಂಗೆ ಆಯಿತು ಅಪ್ಪಾರ್ ಗೆ ಒಂದು ಮಾತು ಕೇಳಿ ಅಂದರು. ಲೇವೇಗೌಡರಿಗೆ ಮಾಡಿದರೆ… ಗೆಟ್ ಕಾಸ್ಟ್ ಅಂದರು… ಅರೆ ಒಬ್ರೂ ಹೇಳವಲ್ಲರು… ಅಂದು ಗುಮೀರ್ ಗಿಡ್ಡಣ್ಣನಿಗೆ ಕಾಲ್ ಮಾಡಿದರೆ.. ಔದೌದು… ನಮ್ ನೀರಿನ ಟ್ಯಾಂಕರ್ ನಲ್ಲಿ ಕುಂತಾನೆ ಅಂದ… ಹರ‍್ರಾ ಅಂದ ಕಿವುಡನುಮಿ ಕಾಲ್ ಕಟ್ ಮಾಡಿ…. ಸೋದಿ ಮಾಮಾಗೆ ಕಾಲಮಾಡಿ ಮಾಮೋರೆ.. ಮಾಮೋರೆ… ನಂಗೆ ಅಧ್ಯಕ್ಷ ಸಿಕ್ಕಾನೆ… ಟ್ಯಾಂಕರ್… ಬಂಕರ್.. ಅಂದ.. ಅಲ್ಲಿ ಕುತಾನೆ… ಅಲ್ಲಿ ಕೂತಾನೆ…. ಅಂದ… ಹಾಂ… ಶಬ್ಬಾಷ್… ಶಬ್ಬಾಷ್ ಅಂದರು.