ಹಾವೇರಿ: ಅಪ್ರಾಪ್ತೆ ಮೇಲೆ ಯುವಕರು ಲೈಂಗಿಕ ದೌರ್ಜನ್ಯ ಎಸಗಿರುವ ಪ್ರಕರಣ ನಡೆದಿದೆ.
ಲೈಂಗಿಕ ದೌರ್ಜನ್ಯ ಎಸಗಿದ ಇಬ್ಬರು ಆರೋಪಿಗಳು ಹಾಗೂ ರಾಜಿ ಪಂಚಾಯತಿ ಮಾಡಿದ ಇಬ್ಬರನ್ನು ಜಿಲ್ಲೆಯ ಶಿಗ್ಗಾಂವಿ ತಾಲೂಕಿನ ಬಂಕಾಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಗಳನ್ನು ಗೋಣಿರುದ್ರಾ ಶಿಗ್ಗಟ್ಟಿ (24), ಮಂಜುನಾಥ ಶಿಗ್ಗಟ್ಟಿ (23) ಲಕ್ಷ್ಮಣ ಕಬನೂರ್ ಮತ್ತು ಮಾರುತಿ ಶಿಗಟ್ಟಿ ಎಂದು ಗುರುತಿಸಲಾಗಿದೆ. ಪ್ರಕರಣದಲ್ಲಿ ಬಂಧನಕ್ಕೊಳಗಾದ ನಾಲ್ವರಲ್ಲಿ ಮೂವರು ದೌರ್ಜನ್ಯ ಎಸಗಿದ ಆರೋಪಿ ಹಾಗೂ ಸಂತ್ರಸ್ತೆಯ ಕುಟುಂಬದ ಜೊತೆ ರಾಜಿ ಪಂಚಾಯತಿ ಮಾಡಿಸಿದ್ದರು. ದೌರ್ಜನ್ಯ ಎಸಗಿದ ಆರೋಪಿ ಸೇರಿದಂತೆ ನಾಲ್ವರ ವಿರುದ್ಧ ಪೋಕ್ಸೋ ಪ್ರಕರಣ ದಾಖಲಾಗಿದೆ. ಅಪ್ರಾಪ್ತೆ ಮೇಲೆ ಯುವಕರು ಲೈಂಗಿಕ ದೌರ್ಜನ್ಯ ಎಸಗಿರುವ ಬಗ್ಗೆ ಆಕೆಯ ತಾಯಿ ಬಂಕಾಪುರ ಠಾಣೆಯಲ್ಲಿ ಜೂನ್ 2ರಂದು ದೂರು ನೀಡಿದ್ದರು. ಅತ್ಯಾಚಾರ ಹಾಗೂ ಪೋಕ್ಸೋ ಕಾಯ್ದೆಯಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು.