ಚನ್ನಗಿರಿ: ಅತ್ತೆ-ಅಳಿಯ ಪರಾರಿ ಪ್ರಕರಣದಲ್ಲಿ ಅತ್ತೆ ಮನೆಗೆ ಮರಳಿದ್ದು, ಅಳಿಯ ಇನ್ನೂ ನಾಪತ್ತೆಯಾಗಿದ್ದಾನೆ. ಈ ಪ್ರಕರಣ ಅನೇಕ ಹೊಸ ತಿರುವುಗಳನ್ನು ಪಡೆದಿದ್ದು, ಅತ್ತೆ ಮನೆಗೆ ಹೋದಾಗ ಮಗಳ ನಡುವೆ ಮಾರಾಮಾರಿ ಉಂಟಾಗಿದೆ.
ತಾಲೂಕಿನ ಮುದ್ದೇನಹಳ್ಳಿಯಲ್ಲಿ ನಾಗರಾಜ ಅವರ ಎರಡನೇ ಪತ್ನಿ ಶಾಂತ ತಮ್ಮ ಮಗಳು ಹೇಮಾಳ ಗಂಡನೊಂದಿಗೆ ಪರಾರಿಯಾಗಿದ್ದ ಪ್ರಕರಣ ಎಲ್ಲೆಡೆ ಸದ್ದು ಮಾಡಿತ್ತು.
ಈಗ ಅತ್ತೆ ಶಾಂತ ಮುದ್ದೇನಹಳ್ಳಿಯ ಗ್ರಾಮಕ್ಕೆ ಮರಳಿದ್ದಾರೆ. ಈ ವೇಳೆ ಶಾಂತ ಮತ್ತು ಹೇಮಾ ನಡುವೆ ರಸ್ತೆಯಲ್ಲಿ ಮಾರಾಮಾರಿ ಉಂಟಾಗಿದೆ. ಒಬ್ಬನೊಬ್ಬರು ಕೈ ಕೈ ಮಿಲಾಯಿಸಿಕೊಂಡು ರಣರಂಗದಂತೆ ಜಗಳ ಮಾಡಿಕೊಂಡಿದ್ದಾರೆ.
ಈ ಘಟನೆಯಿಂದ ಹೇಮಾ ಕೈಗೆ ಗಾಯ, ಶಾಂತಳಿಗೂ ಗಾಯಗಳಾಗಿದ್ದು, ಇವರಿಬ್ಬರು ಚನ್ನಗಿರಿಯ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ.
ಅಳಿಯ ಜೊತೆ ಓಡಿ ಹೋಗಿಲ್ಲ, ಶಾಂತ ಊರಿಗೆ ಮರಳಿದಾಗ ನಾಗರಾಜ ಕುಟುಂಬದೊಂದಿಗೆ ಜಗಳವಾಗಿದೆ. ಈ ವೇಳೆ ನಾನು ಅಳಿಯನೊಂದಿಗೆ ಓಡಿ ಹೋಗಿಲ್ಲ. ಎಲ್ಲರೂ ಕಟ್ಟು ಕಥೆ ಕಟ್ಟಿದ್ದಾರೆ ಎಂದು ಹೇಳಿದ್ದಾರೆ.
ಮದುವೆಗೆ ನನ್ನಿಂದ ಸಾಲ ಮಾಡಿಸಿ, ಸಾಲ ವಾಪಸ್ಸು ಮಾಡದೇ ಹೀಗೆ ಹಿಂಸೆ ನೀಡಿದ್ದಾರೆ ಎಂದು ಶಾಂತ ಹೊಸ ವರಸೆ ಪ್ರಾರಂಭಿಸಿದ್ದಾರೆ. ಮಾಧ್ಯಮಕ್ಕೆ ಸುದ್ದಿ ನೀಡಿದ್ದಕ್ಕೆ ಸಾಲಗಾರರನ್ನು ಕರೆದುಕೊಂಡು ಬಂದು ಮಲತಾಯಿ ಶಾಂತ ಹಲ್ಲೆ ಮಾಡಿದ್ದಾರೆ ಎಂದು ಹೇಮಾ ಆರೋಪಿಸಿದ್ದಾರೆ.
ಈ ನಡುವೆ ನಾಗರಾಜ್ ಅವರು ನನ್ನ ಪತ್ನಿ ಶಾಂತ ಉದ್ದೇಶಪೂರ್ವಕವಾಗಿ ಸಾಲಗಾರರನ್ನು ಬಿಟ್ಟು ಮನೆಗೆ ಬೀಗ ಹಾಕಿಸಿದ್ದಾಳೆ. ಮನೆಯನ್ನು ಬಿಡಿಸಿಕೊಡಿ ಎಂದು ಪೊಲೀಸರಿಗೆ ಮೊರೆ ಹೋಗಿದ್ದಾರೆ ಎಂದು ಹೇಳಲಾಗಿದೆ.
ಮುದ್ದೇನಹಳ್ಳಿಯ ನಾಗರಾಜ್ ಅವರ ಎರಡನೇ ಪತ್ನಿ ಶಾಂತ ಅಳಿಯ ಗಣೇಶನೊಂದಿಗೆ ನಾಪತ್ತೆಯಾಗಿದ್ದ ಬಗ್ಗೆ ಚನ್ನಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಸುದ್ದಿ ರಾಜ್ಯದೆಲ್ಲೆಡೆ ಭಾರಿ ಸುದ್ದಿ ಮಾಡಿತ್ತು. ಈ ಸುದ್ದಿಯಾದ ಬಳಿಕ ಅತ್ತೆ ಶಾಂತ ಮರಳಿದ್ದಾರೆ. ಅವರೊಂದಿಗೆ ನಾಪತ್ತೆಯಾಗಿದ್ದ ಅಳಿಯ ಗಣೇಶ ಇನ್ನೂ ಬಂದಿಲ್ಲ.