ಚನ್ನಗಿರಿ: ಅತ್ತೆಯೊಂದಿಗೆ ಅಳಿಯ ಪರಾರಿಯಾಗಿರುವ ಘಟನೆ ಮುದ್ದೇನಹಳ್ಳಿಯಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ತನ್ನ ಗಂಡ ಮತ್ತು ತಾಯಿಯನ್ನು ಹುಡುಕಿಕೊಂಡುವಂತೆ ಮಹಿಳೆ ಪೊಲೀಸ್ ಠಾಣೆಯ ಮೆಟ್ಟಲೇರಿದ್ದಾರೆ. ಈ ಘಟನೆಯಿಂದ ಗ್ರಾಮವೇ ಶಾಕ್ ಆಗಿದೆ. ಎಲ್ಲೋ ಕೇಳಿದ್ದ ಪ್ರಸಂಗ ತಮ್ಮ ಊರಿನಲ್ಲಿ ನಡೆಯಿತು ಅನ್ನುವ ಆಶ್ಚರ್ಯದ ಮಾತುಗಳು ವ್ಯಾಪಕವಾಗಿ ಕೇಳಿ ಬಂದಿವೆ.
ಮುದ್ದೇನಹಳ್ಳಿಯ ಶಾಂತ (55) ಮತ್ತು ಮರವಂಜಿ ಗ್ರಾಮದ ಗಣೇಶ್ (25) ಇವರಿಬ್ಬರು ಅತ್ತೆ ಮತ್ತು ಅಳಿಯ ಆಗಿದ್ದಾರೆ.
ಶಾಂತ ತನ್ನ ಮಗಳು ಹೇಮಾ ಅವರನ್ನು ಗಣೇಶ್‌ನಿಗೆ ಕೊಟ್ಟು ಎರಡು ತಿಂಗಳ ಹಿಂದೆ ಮದುವೆ ಮಾಡಿದ್ದರು. ಕಳೆದ ತಿಂಗಳು ಚನ್ನಗಿರಿ ಬಸ್ ನಿಲ್ದಾಣದಲ್ಲಿ ಗಣೇಶ್ ತನ್ನ ಹೆಂಡತಿ ಹೇಮಾಳನ್ನು ಬಿಟ್ಟು ಅತ್ತೆ ಶಾಂತಳೊಂದಿಗೆ ಪರಾರಿಯಾಗಿದ್ದಾನೆ.
ಶಾಂತಾ ಮುದ್ದೇನಹಳ್ಳಿ ಗ್ರಾಮದ ನಾಗರಾಜ್ ಅವರ ಎರಡನೇ ಪತ್ನಿ. ಕಳೆದ 13 ವರ್ಷದ ಹಿಂದೆ ಮದುವೆಯಾಗಿ ಇಲ್ಲಿಗೆ ಬಂದಿದ್ದರು. ನಾಗರಾಜ್ ಅವರ ಮೊದಲ ಪತ್ನಿಗೆ ಇಬ್ಬರು ಹೆಣ್ಣು ಮಕ್ಕಳು, ಓರ್ವ ಪುತ್ರ ಇದ್ದಾರೆ. ನಾಗರಾಜನ ಮೊದಲ ಪತ್ನಿಯ ಮಗಳು ಹೇಮಾ ಅವರೊಂದಿಗೆ ಗಣೇಶನ ಮದುವೆಯನ್ನು ಶಾಂತ ಮಾಡಿಸಿದ್ದರು.
ಪೊಲೀಸರ ಮೊರೆ
ಮೊದಲಿನಿಂದಲೂ ಶಾಂತಾ ಹಾಗೂ ಗಣೇಶ್ ನಡುವೆ ಸಲುಗೆಯೂ ಇತ್ತು ಎಂದು ಹೇಳಲಾಗುತ್ತಿದೆ. ಗಣೇಶ್ ಮದುವೆ ಮಾಡಿದ್ದ ಶಾಂತಾ ಮದುವೆ ಮುಂಚಿಗಿಂತ ನಂತರ ವರಸೆ ಬದಲಿಸಿದ್ದರು. ಗಣೇಶ್ ಜೊತೆ ಹೆಚ್ಚು ಒಡನಾಟ ಹೊಂದಿದ್ದಳು.
ಇದು ಶಾಂತ ನಡವಳಿಕೆ ಬಗ್ಗೆ ಮಗಳಿಗೆ ಅನುಮಾನ ಬಂದಿತ್ತು. ಅಷ್ಟರಲ್ಲಿ ಗಣೇಶ್ ಮತ್ತು ಶಾಂತ ಪರಾರಿಯಾಗಿದ್ದಾರೆ. ಪತಿ ಹಾಗೂ ತಾಯಿ ಹುಡುಕಿಕೊಂಡುವಂತೆ ಮಗಳು ಚನ್ನಗಿರಿ ಪೊಲೀಸರಿಗೆ ದೂರು ನೀಡಿದ್ದಾರೆ.
ಅಕ್ರಮ ಸಂಬಂಧ ಬೆಳಕಿಗೆ ಬಂದಿತ್ತು
ಮದುವೆಯಾದ 15 ದಿನಕ್ಕೆ ಗಣೇಶ್ ತನ್ನ ಮಲ ಅತ್ತೆ ಶಾಂತಾ ಜೊತೆ ಅಕ್ರಮ ಸಂಬಂಧ ಹೊಂದಿರುವುದು ಬೆಳಕಿಗೆ ಬಂದಿತ್ತು. ಗಣೇಶ್ ಮೊಬೈಲ್‌ನಲ್ಲಿ ಮಲತಾಯಿ ಶಾಂತಾ ಕಳಿಸಿದ್ದ ಅಶ್ಲೀಲ ಮೆಸೇಜ್‌ಗಳನ್ನು ಮಗಳು ಹೇಮಾ ನೋಡಿದ್ದರು. ಕೂಡಲೇ ತನ್ನ ತಂದೆಗೆ ಈ ಮೆಸೇಜ್‌ಗಳನ್ನು ತೋರಿಸಿದ್ದಾಳೆ. ಈ ವಿಚಾರ ತಿಳಿಯುತ್ತಿದ್ದಂತೆ ಹಣ, ಆಭರಣ ತೆಗೆದುಕೊಂಡು ಅಳಿಯನ ಜೊತೆ ಅತ್ತೆ ಪರಾರಿಯಾಗಿದ್ದಾಳೆ.