ಬೆೆಳಗಾವಿ: ಕೆಲಸದ ವಿಷಯಕ್ಕೆ ತಮ್ಮನೇ ಅಣ್ಣನನ್ನು ಹತ್ಯೆಗೈದಿರುವ ಘಟನೆ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಹಟ್ಟಿ ಆಲೂರಿನಲ್ಲಿ ನಡೆದಿದೆ.
ರಾಯಪ್ಪ ಸುರೇಶ್ ಕಮತಿ (೨೮) ಕೊಲೆಯಾದ ವ್ಯಕ್ತಿ. ಬಸವರಾಜ್ ಕಮತಿ (೨೪) ಅಣ್ಣನನ್ನೇ ಕೊಂದ ತಮ್ಮ. ಬಸವರಾಜ್ ಕಮತಿ ಕುವೈತ್ ನ್ಯಾಷನಲ್ ಪೆಟ್ರೋಲಿಯಂ ಕಂಪನಿಯಲ್ಲಿ ವಾಲ್ ಆಪರೇಟರ್ ಆಗಿ ಕೆಲಸ ಮಾಡುತ್ತಿದ್ದ. ರಜೆ ಮೇಲೆ ತನ್ನ ಊರಾದ ಹಟ್ಟಿ ಆಲೂರಿಗೆ ತೆರಳಿದ್ದ.
ಈ ವೇಳೆ ಅಣ್ಣ ರಾಯಪ್ಪ ಕಮತಿ, ಬಸವರಾಜ್‌ಗೆ ಮತ್ತೆ ಕೆಲಸಕ್ಕೆ ಹೋಗಲು ಬಿಡದೇ ತನ್ನೊಂದಿಗೆ ಕುರಿ ಕಾಯಲು ಬಾ ಎಂದು ಕರೆಯುತ್ತಿದ್ದ. ಅಲ್ಲದೇ ಪ್ರತಿದಿನ ಕುರಿದೊಡ್ಡಿಯಲ್ಲಿ ಮಲಗಲು ಹೇಳುತ್ತಿದ್ದನಂತೆ. ಇದೇ ಕಾರಣಕ್ಕೆ ಸಹೋದರರ ನಡುವೆ ಗಲಾಟೆ ನಡೆದಿತ್ತು. ಇದರಿಂದ ಬೇಸತ್ತ ಬಸವರಾಜ್ ಅಣ್ಣನನ್ನೇ ಕೊಲ್ಲಲು ಪ್ಲಾನ್ ಮಾಡಿದ್ದಾನೆ.
ಅಣ್ಣ ಮರದ ಕೆಳಗೆ ಮೊಬೈಲ್‌ನಲ್ಲಿ ರೀಲ್ಸ್ ನೋಡುತ್ತ ಕುಳಿತಿದ್ದನ್ನು ಕಂಡು ರಾಯಪ್ಪನ ಮುಖಕ್ಕೆ ಖಾರದ ಪುಡಿ ಎರಚಿ, ತಲೆಯ ಮೇಲೆ, ಮುಖದ ಮೇಲೆ ಕಲ್ಲಿನಿಂದ ಜಜ್ಜಿ ಹತ್ಯೆ ಮಾಡಿದ್ದಾನೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸಿ ಆರೋಪಿ ಬಸವರಾಜ್‌ನನ್ನು ಬಂಧಿಸಿದ್ದಾರೆ. ವಿಚಾರಣೆ ವೇಳೆ ಬಸವರಾಜ್ ಅಣ್ಣನನ್ನು ತಾನೇ ಕೊಂದಿದ್ದಾಗಿ ತಪ್ಪೊಪ್ಪಿಕೊಂಡಿದ್ದಾನೆ ಎನ್ನಲಾಗಿದೆ.