ಗಂಗಾವತಿ: ತಾಲೂಕಿನ ಅಂಜನಾದ್ರಿ ಬೆಟ್ಟದ ಆಂಜನೇಯ ದೇವಸ್ಥಾನಕ್ಕೆ ಜಿಲ್ಲಾಧಿಕಾರಿ ಸುರೇಶ ಇಟ್ನಾಳ ಭೇಟಿ ನೀಡಿದ್ದಾಗ ಧಾರ್ಮಿಕ ದತ್ತಿ ಇಲಾಖೆಯ ಅರ್ಚಕರು ಪೂಜೆ ಸಲ್ಲಿಸಿದ್ದು, ಇದರಿಂದಾಗಿ ನ್ಯಾಯಾಂಗ ನಿಂದನೆ ಮಾಡಲಾಗಿದೆ ಎಂದು ಅರ್ಚಕ ವಿದ್ಯಾದಾಸ್ ಬಾಬಾ ಆರೋಪಿಸಿದ್ದು, ಗೊಂದಲ ಮುಂದುವರೆದಿದೆ.
ರವಿವಾರ ಜಿಲ್ಲಾಧಿಕಾರಿಗಳು ದೇವಸ್ಥಾನಕ್ಕೆ ಭೆಟ್ಟಿ ನೀಡಿದಾಗ ಅರ್ಚಕ ವಿದ್ಯಾದಾಸ್ ಬಾಬಾ ಮಂಗಳಾರತಿ ಮಾಡಲಿಲ್ಲ. ಇದರಿಂದಾಗಿ ಧಾರ್ಮಿಕ ದತ್ತಿ ಇಲಾಖೆಯ ಅರ್ಚಕರು ಮಂಗಳಾರತಿ ಮಾಡಿದ್ದಕ್ಕೆ ಕೋಪಗೊಂಡ ಅರ್ಚಕ ಕಡೆಯವರು ಕೋರ್ಟ್ ಆದೇಶ ಉಲ್ಲಂಘನೆಯಾಗಿದೆ ಎಂದು ಪ್ರತಿಭಟನೆ ಮಾಡಿದ್ದಾರೆ. ಆದರೆ ಇದನ್ನು ಅಧಿಕಾರಿ ಮೂಲಗಳು ಅಲ್ಲಗಳೆದಿದ್ದು ಜಿಲ್ಲಾಡಳಿತ ಮತ್ತು ಅರ್ಚಕ ಬಾಬಾ ನಡುವಿನ ಕಿತ್ತಾಟದಿಂದಾಗಿ ಭಕ್ತರಿಗೆ ಮಂಗಳಾರತಿ ಸರಿಯಾಗಿ ಸಿಗುತ್ತಿಲ್ಲ ಎನ್ನಲಾಗಿದೆ.