Home ಸುದ್ದಿ ದೇಶ UPI ಸೇವೆ ಸ್ಥಗಿತ? ಬಳಕೆದಾರರಿಂದ ದೂರು

UPI ಸೇವೆ ಸ್ಥಗಿತ? ಬಳಕೆದಾರರಿಂದ ದೂರು

0

ಭಾರತದಾದ್ಯಂತ ಏಕೀಕೃತ ಪಾವತಿ ವ್ಯವಸ್ಥೆ (UPI) ಯಲ್ಲಿ ಭಾರಿ ವ್ಯತ್ಯಯ ಉಂಟಾಗಿದೆ. ಈ ಕುರಿತಂತೆ ಬಳಕೆದಾರರು ಅಪೂರ್ಣ ವಹಿವಾಟುಗಳು, ಪಾವತಿಗಳು, ನಿಧಿ ವರ್ಗಾವಣೆ ಸೇರಿದಂತೆ ಹಲವು ದೂರುಗಳನ್ನು ನೀಡಿದ್ದಾರೆ.

ಅಡಚಣೆಗಳನ್ನು ಪತ್ತೆಹಚ್ಚುವ ವೆಬ್‌ಸೈಟ್ ಡೌನ್‌ಡಿಟೆಕ್ಟರ್ ಮುಖಾಂತರ ಬಳಕೆದಾರರ ದೂರುಗಳು ಸಲ್ಲಿಕೆಯಾಗಿದ್ದು, ರಾತ್ರಿ 8.30 ರ ಸುಮಾರಿಗೆ ಯುಪಿಐ ಸೇವೆಗಳು ಕಾರ್ಯನಿರ್ವಹಿಸುತ್ತಿಲ್ಲ ಎಂಬ ದೂರುಗಳು ಆರಂಭವಾಗಿದೆ.

2,147 ದೂರುಗಳು ಸಲ್ಲಿಕೆಯಾಗಿದ್ದು, ಇದರಲ್ಲಿ ಶೇ. 60 ಕ್ಕೂ ಹೆಚ್ಚು ಜನರು ಪಾವತಿಗಳನ್ನು ಮಾಡುವಾಗ ಉಂಟಾದ ಸಮಸ್ಯೆಗಳನ್ನೇ ಉಲ್ಲೇಖಿಸಿದ್ದಾರೆ. 29% ಜನರು ಹಣ ವರ್ಗಾವಣೆಯಲ್ಲಿ ಸಮಸ್ಯೆ ಆಗಿದೆ ಎಂದು ದೂರಿದ್ದಾರೆ ಮತ್ತು ಶೇ. 8 ರಷ್ಟು ಜನರು ಅಪ್ಲಿಕೇಶನ್‌ನಲ್ಲಿ ಸಮಸ್ಯೆಗಳನ್ನು ಎದುರಿಸಿದ್ದಾಗಿ ಹೇಳಿದ್ದಾರೆ.

ಈ ಕುರಿತಂತೆ ಸಾಮಾಜಿಕ ಜಾಲತಾಣಗಳಲ್ಲಿ ಯುಪಿಐ ಬಳಕೆದಾರರು ಸಮಸ್ಯೆಗಳ ಕುರಿತು ಪೋಸ್ಟ್‌ ಮಾಡಿದ್ದಾರೆ. ಈ ಪೈಕಿ ಪ್ರತಿಮ್ ದಾಸ್‌ಗುಪ್ತ ಎನ್ನುವವರು ಎಕ್ಸ್ ನಲ್ಲಿ “ಮತ್ತೊಮ್ಮೆ ಯುಪಿಐ ಸರ್ವರ್ ಡೌನ್ ಆಗಿದೆ” ಎಂದು ಬರೆದುಕೊಂಡಿದ್ದಾರೆ. ಮತ್ತೋರ್ವ ಬಳಕೆದಾರ “ಯುಪಿಐ ಸೇವೆ ಸ್ಥಗಿತ??” ಎಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ವೊಂದನ್ನು ಹಂಚಿಕೊಂಡಿದ್ದಾನೆ.

ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ ಬ್ಯಾಂಕಿನ ಗ್ರಾಹಕರೊಬ್ಬರು ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿದ್ದು, “@TheOfficialSBI ನಿಮ್ಮ UPI ಏಕೆ ಕೆಲಸ ಮಾಡುತ್ತಿಲ್ಲ ??? ನಿಮಗೆ ಅದನ್ನು ನಿರ್ವಹಿಸಲು ಸಾಧ್ಯವಾಗದಿದ್ದರೆ ದಯವಿಟ್ಟು ಅದನ್ನು ಮುಚ್ಚಿ.” ಎಂದು ಬರೆದುಕೊಂಡಿದ್ದಾರೆ.

ಇನ್ನು ಈ ಕುರಿತು ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (NPCI) ಎಕ್ಸ್‌ ನಲ್ಲಿ ಪೋಸ್ಟ್‌ ಮಾಡಿದ್ದು, “ಕೆಲವು ಬ್ಯಾಂಕ್‌ಗಳು ಆಂತರಿಕ ತಾಂತ್ರಿಕ ಸಮಸ್ಯೆಗಳನ್ನು ಹೊಂದಿರುವುದರಿಂದ ಮಧ್ಯಂತರ UPI ಸಂಪರ್ಕ ಸಮಸ್ಯೆಗಳಿಂದ ಉಂಟಾಗುವ ಅನಾನುಕೂಲತೆಗೆ ವಿಷಾದಿಸುತ್ತೇವೆ. NPCI ವ್ಯವಸ್ಥೆಗಳು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿವೆ ಮತ್ತು ತ್ವರಿತ ಪರಿಹಾರವನ್ನು ಖಚಿತಪಡಿಸಿಕೊಳ್ಳಲು ನಾವು ಈ ಬ್ಯಾಂಕುಗಳೊಂದಿಗೆ ಕೆಲಸ ಮಾಡಿದ್ದೇವೆ.” ಎಂದು ಹೇಳಿದೆ.

ಕಳೆದ ಜುಲೈನಲ್ಲಿ ಯುಪಿಐ ವಹಿವಾಟು ಅತ್ಯಧಿಕ ದಾಖಲೆ ಮಾಡಿರುವುದಾಗಿ NPCI ವರದಿ ಮಾಡಿತ್ತು. ಇದಾದ ಕೆಲ ದಿನಗಳಲ್ಲೇ ಯುಪಿಐ ನಲ್ಲಿ ಈ ಸಮಸ್ಯೆ ಉಂಟಾಗಿದೆ. ಜುಲೈನಲ್ಲಿ 25.08 ಲಕ್ಷ ಕೋಟಿ ರೂ. ಮೌಲ್ಯದ 19.47 ಶತಕೋಟಿ ವಹಿವಾಟು ದಾಖಲಾಗಿತ್ತು. ವಹಿವಾಟು ಪ್ರಮಾಣದಲ್ಲಿ ಇದೇ ಅತ್ಯಧಿಕ ಎಂದು ಹೇಳಲಾಗಿತ್ತು. ಆದರೆ ಮೌಲ್ಯದಲ್ಲಿ ಇದು ಎರಡನೇ ದಾಖಲೆ ಆಗಿದೆ ಎಂದು ಹೇಳಿತ್ತು.

ಆಗಸ್ಟ್‌ 1 ರಿಂದ NPCI ಹೊಸ UPI ಮಾರ್ಗಸೂಚಿಗಳನ್ನು ಜಾರಿಗೆ ಮಾಡಿದ್ದು, ಈ ನಿಯಮಗಳು ಬಳಕೆದಾರರಿಗೆ ಉತ್ತಮ ಸೇವೆಯನ್ನು ನೀಡುವ ಗುರಿಯನ್ನು ಹೊಂದಿದೆ ಎಂದು ಹೇಳಲಾಗಿದೆ.

NO COMMENTS

LEAVE A REPLY

Please enter your comment!
Please enter your name here

Exit mobile version