ಕನ್ನಡ ಚಲನ ಚಿತ್ರದಲ್ಲಿ ‘ಮನಸಾರೆ’, ‘ಪಂಚರಂಗಿ’, ‘ಲೈಫು ಇಷ್ಟೇನೆ’ ‘ಲೂಸಿಯಾ’ ಅಂತಹ ಸಿನಿಮಾಗಳ ಮೂಲಕ ನಟನೆ ಹಾಗೂ ನಿರ್ದೇಶನ ಮತ್ತು ಬರಹಗಾರರಾಗಿ ಹೆಸರು ಮಾಡಿರುವ ನಟ ಪವನ್ ಕುಮಾರ್ ಸದ್ದಿಲ್ಲದೆ ‘ಶೋಧ’ ಎಂಬ ವೆಬ್ ಸೀರಿಸ್‌ನಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಈ ಸೀರಿಸ್‌ನ ಪಸ್ಟ್ ಲುಕ್ ಅನಾವರಣಗೊಂಡಿದ್ದು ಈ ಸರಣಿಯು OTT ಮೂಲಕ ಈ ಸರಣಿ ಪ್ರಸಾರವಾಗಲಿದೆ.
ಕಾರ್ತಿಕ್ ಗೌಡ ಹಾಗೂ ಯೋಗಿ ಜಿ ಗೌಡ ನೇತೃತ್ವದ ಕೆಆರ್‌ಜಿ ಸ್ಟುಡಿಯೋಸ್ ವೆಬ್ ಸಿರೀಸ್ ನಿರ್ಮಾಣಕ್ಕಿಳಿದಿದ್ದು ಝೀ ತಂಡದ ಜೊತೆ ಕೈ ಜೋಡಿಸಿ ಶೋಧ ಎಂಬ ವೆಬ್ ಸೀರಿಸ್ ಆಗಸ್ಟ್ 22 ರಂದು Z5 ನಲ್ಲಿ ಪ್ರಥಮ ಪ್ರದರ್ಶನಗೊಳ್ಳಲಿದೆ. ಈ ಮೂಲಕ ಕನ್ನಡ ಸಿನಿ ಪ್ರೇಕ್ಷಕರಿಗೆ ವೆಬ್ ಸರಣಿಗಳನ್ನು ಉಣಬಡಿಸುವ ತವಕದಲ್ಲಿದೆ. ಈ ಸರಣಿ ಮೂಲಕ ವೆಬ್ ಸಿರೀಸ್ಗೆ ‘ಕೆಆರ್‌ಜಿ ಸ್ಟುಡಿಯೋಸ್’ ಬಂಡವಾಳ ಹೂಡಿಕೆ ಮಾಡಿದ್ದು. ಆರ್ಕೆಸ್ಟ್ರಾ ಮೈಸೂರು ಚಿತ್ರನಿರ್ಮಾಪಕ ಸುನೀಲ್ ಮೈಸೂರು ನಿರ್ದೇಶಿಸಿದ್ದಾರೆ.
ಶೋಧ ವೆಬ್ ಸರಣಿ ಬಗ್ಗೆ ಮಾತನಾಡಿದ ನಟ : ಶೋಧದಲ್ಲಿ ನಟಿಸುವುದು ನನಗೆ ಸಂಪೂರ್ಣವಾಗಿ ಹೊಸ ಪ್ರಯಾಣವಾಗಿದೆ. ಬರವಣಿಗೆ ಮತ್ತು ನಿರ್ದೇಶನದಿಂದ ಬಂದ ನಂತರ, ಕ್ಯಾಮೆರಾ ಮುಂದೆ ಹೆಜ್ಜೆ ಹಾಕುವುದು ಭಾವನೆಗಳನ್ನು ಹೊಸ ರೀತಿಯಲ್ಲಿ ಅನ್ವೇಷಿಸಲು ನನಗೆ ಸವಾಲು ಹಾಕಿದೆ” ಎಂದು ಅಭಿಪ್ರಾಯ ಹಂಚಿಕೊಂಡಿದ್ದಾರೆ. ಇನ್ನು ಶೋಧ ಚಿತ್ರದಲ್ಲಿ ನಟ ಪವನ್ ಕುಮಾರ್ ಸರಣಿಯ ಮುಖ್ಯ ಪಾತ್ರಧಾರಿಯಾಗಿ ಮಾತ್ರವಲ್ಲದೆ, ಸ್ಕ್ರಿಪ್ಟ್ ನಲ್ಲಿ ಸಹ ಸೇವೆ ಸಲ್ಲಿಸುತ್ತಿದ್ದಾರೆ.
” ಶೋಧ ಒಂದು ಥ್ರಿಲ್ಲರ್ ಸಿನಿಮಾವಾಗಿದ್ದು, ಇದನ್ನು ಮಿನಿ-ಕಂತುಗಳ ಮೂಲಕ ವೆಬ್ ಸರಣಿ ಮಾದರಿಯಲ್ಲಿ ವಿನ್ಯಾಸಗೊಳಿಸಲಾಗಿದೆ ಎಂದು ಕಾರ್ತಿಕ್ ಗೌಡ ಹೇಳಿದ್ದಾರೆ. “ಕನ್ನಡ ಪ್ರೇಕ್ಷಕರು ಬಹುಕಾಲದಿಂದ ಗುಣಮಟ್ಟದ ವೆಬ್ ವಿಷಯಕ್ಕಾಗಿ ಕಾಯುತ್ತಿದ್ದಾರೆ. ಅಯ್ಯನ ಮನೆ Zee5 ನಲ್ಲಿ ಉತ್ತಮ ಪ್ರದರ್ಶನ ನೀಡುತ್ತಿರುವುದರಿಂದ, ನಾವು ಆ ವೇಗವನ್ನು ಮುಂದುವರಿಸಲು ಬಯಸಿದ್ದೇವೆ. ಝಿ5 ವಿಕ್ಷಕರಿಗಾಗಿ ಈಗಾಗಲೇ 8 ರಿಂದ 10 ಕನ್ನಡ ವೆಬ್ ಮೂಲಗಳನ್ನು ಸಿದ್ಧಪಡಿಸಿದೆ ಈ ಸರಣಿಯಲ್ಲಿ ಶೋಧ ಮೊದಲು ಬಿಡುಗಡೆ ಆಗಲಿದೆ ಎಂದಿದ್ದಾರೆ.
ಈ ಮೊದಲು ‘ಜೀ5’ ಒಟಿಟಿಯಲ್ಲಿ ಬಿಡುಗಡೆ ಆದ ‘ಅಯ್ಯನ ಮನೆ’ ಸೂಪರ್ ಸಕ್ಸಸ್ ಕಂಡಿತ್ತು. ಅದರ ಯಶಸ್ಸಿನ ನಂತರ ಬರುತ್ತಿರುವ ಮತ್ತೊಂದು ವೆಬ್ ಸರಣಿಯೇ ‘ಶೋಧ’. ಸದಾ ವಿಭಿನ್ನ ಕಥಾ ಹಂದರದ ಮೂಲಕ ಕುತೂಹಲಕಾರಿ ಚಿತ್ರಗಳನ್ನು ನೀಡಿದ್ದ ಪವನ್ ಚಿತ್ರರಂಗದಲ್ಲಿ ಹಲವು ವಿಬಿನ್ನ ಪಾತ್ರಗಳಲ್ಲಿ ನಟಿಸಿ ಖ್ಯಾತಿ ಪಡೆದಿದ್ದ ಪವನ ಕನ್ನಡ ವೆಬ್ ಸರಣಿಗೆ ಅವರ ಎಂಟ್ರಿ ಇದೇ ಮೊದಲಾದರು ಸಹ ಇದಕ್ಕೂ ಮುನ್ನ ಬೇರೆ ಭಾಷೆಯಲ್ಲಿ ಕೈಚಳಕ ತೋರಿಸಿದ್ದಾರೆ ಲೈಲಾ ಎನ್ನುವ ಹಿಂದಿ ಹಾಗೂ ಕುಡಿ ಎಡಮೈತೆ ಎನ್ನುವ ತೆಲುಗು ವೆಬ್ ಸೀರಿಸ್‌ಗಳನ್ನು ಸಹ ನಿರ್ದೇಶನ ಮಾಡಿದ್ದಾರೆ.