Home ಸುದ್ದಿ ದೇಶ ಮತ ಕಳ್ಳತನ ಆರೋಪ: ರಾಹುಲ್‌ಗೆ ಚುನಾವಣಾ ಆಯೋಗ ಸವಾಲು

ಮತ ಕಳ್ಳತನ ಆರೋಪ: ರಾಹುಲ್‌ಗೆ ಚುನಾವಣಾ ಆಯೋಗ ಸವಾಲು

0

ನವದೆಹಲಿ: ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್‌ ಗಾಂಧಿ 2024ರ ಲೋಕಸಭೆ ಚುನಾವಣೆಯಲ್ಲಿ ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳ ವಿಧಾನಸಭಾ ಕ್ಷೇತ್ರಗಳಲ್ಲಿ ಹೇಗೆ ಮತ ಕಳ್ಳತನ ನಡೆದಿದೆ ಎಂದು ವಿವರ ನೀಡಿದ್ದಾರೆ. ಕರ್ನಾಟಕ ರಾಜ್ಯ ಚುನಾವಣಾ ಆಯೋಗ ಆರೋಪಕ್ಕೆ ಪ್ರತಿಕ್ರಿಯಿಸಿದ್ದು, ರಾಹುಲ್ ಗಾಂಧಿಗೆ ಲಿಖಿತ ಪತ್ರದ ಮೂಲಕ ಸವಾಲು ಹಾಕಿದೆ.

ರಾಹುಲ್ ಗಾಂಧಿಗೆ ಬರೆದಿರುವ ಪತ್ರದಲ್ಲಿ, “ಚುನಾವಣೆಗಳ ನಡವಳಿಕೆಗೆ ಸಂಬಂಧಿಸಿದಂತೆ, ಚುನಾವಣಾ ಫಲಿತಾಂಶಗಳನ್ನು ಹೈಕೋರ್ಟ್‌ನಲ್ಲಿ ಚುನಾವಣಾ ಅರ್ಜಿಯ ಮೂಲಕ ಮಾತ್ರ ಪ್ರಶ್ನಿಸಬಹುದು” ಎಂದು ಹೇಳಿದೆ.

ಇಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ಪ್ಯಾರಾ 3ರಲ್ಲಿ ಉಲ್ಲೇಖಿಸಲಾದ ಮತದಾರರ ಪಟ್ಟಿಯಲ್ಲಿ ಅನರ್ಹ ಮತದಾರರ ಸೇರ್ಪಡೆ ಮತ್ತು ಅರ್ಹ ಮತದಾರರನ್ನು ಹೊರಗಿಡುವ ಬಗ್ಗೆ ನೀವು ಪ್ರಸ್ತಾಪಿಸಿದ್ದೀರಿ ಎಂದು ತಿಳಿದುಬಂದಿದೆ.

ಮತದಾರರ ನೋಂದಣಿ ನಿಯಮಗಳು, 1960 ರ ನಿಯಮ 20(3) (b) ಅಡಿಯಲ್ಲಿ ಲಗತ್ತಿಸಲಾದ ಘೋಷಣೆ/ ಪ್ರಮಾಣವಚನಕ್ಕೆ ಸಹಿ ಹಾಕಿ, ಅಂತಹ ಮತದಾರರ ಹೆಸರು(ಗಳ) ಜೊತೆಗೆ ಹಿಂದಿರುಗಿಸಲು ವಿನಂತಿಸಲಾಗಿದೆ. ಇದರಿಂದ ಅಗತ್ಯ ಪ್ರಕ್ರಿಯೆಗಳು ಆರಂಭಿಸಿಬಹುದು ಎಂದು ಹೇಳಲಾಗಿದೆ.

1960 ರ ಮತದಾರರ ನೋಂದಣಿ ನಿಯಮಗಳ ನಿಯಮ 20(3) (b) ಪ್ರಕಾರ, ಯಾವುದೇ ವ್ಯಕ್ತಿ ಸಲ್ಲಿಸಿದ ಸಾಕ್ಷ್ಯವನ್ನು ಪ್ರಮಾಣವಚನದ ಮೇಲೆ ನೀಡಬೇಕೆಂದು ನೋಂದಣಿ ಅಧಿಕಾರಿ ಕೋರಬಹುದು ಎಂದು ಚುನಾವಣಾ ಅಧಿಕಾರಿಗಳು ತಿಳಿಸಿದ್ದಾರೆ.

ಸಂಸತ್ ಸದಸ್ಯರಾದ ರಾಹುಲ್ ಗಾಂಧಿ ಎಂಬ ನಾನು, 1960 ರ ಮತದಾರರ ನೋಂದಣಿ ನಿಯಮಗಳ ನಿಯಮ 20 ರ ಅಡಿಯಲ್ಲಿ ನಾನು ಮಾಡಲಿರುವ ಹೇಳಿಕೆಯನ್ನು ಈ ಮೂಲಕ ಶ್ರದ್ಧಾಪೂರ್ವಕವಾಗಿ ದೃಢೀಕರಿಸುತ್ತೇನೆ ಮತ್ತು ಪ್ರಮಾಣವಚನ ಸ್ವೀಕರಿಸುತ್ತೇನೆ. ನನ್ನ ಜ್ಞಾನ ಮತ್ತು ನಂಬಿಕೆಯ ಮಟ್ಟಿಗೆ ಸತ್ಯವಾಗಿದೆ ಎಂದು ಇದರೊಂದಿಗೆ, ಸಹಿ ಮಾಡಿದ ಆಕ್ಷೇಪಣೆ ಪ್ರಮಾಣಪತ್ರ ಸಲ್ಲಿಸುವಂತೆ ರಾಹುಲ್ ಗಾಂಧಿಗೆ ಸೂಚನೆ ಕೊಟ್ಟಿದ್ದಾರೆ.

ಅದರಲ್ಲಿ ಮತದಾರರ ಪಟ್ಟಿಗೆ ಸಂಬಂಧಿಸಿದಂತೆ ಸುಳ್ಳು ಘೋಷಣೆ ಮಾಡುವುದು 1950 ರ ಆರ್‌ಪಿ ಕಾಯ್ದೆಯ ಸೆಕ್ಷನ್ 31 ರ ಅಡಿಯಲ್ಲಿ ಶಿಕ್ಷಾರ್ಹ ಎಂದು ನನಗೆ ತಿಳಿದಿದೆ. ಸುಳ್ಳು ಸಾಕ್ಷ್ಯ ನೀಡುವುದು ಭಾರತೀಯ ನ್ಯಾಯ ಸಂಹಿತಾ, 2023 ರ ಸೆಕ್ಷನ್ 227 ರ ಅಡಿಯಲ್ಲಿ ಶಿಕ್ಷಾರ್ಹ ಎಂದು ನಾನು ಅರ್ಥಮಾಡಿಕೊಂಡಿದ್ದೇನೆ.

ನಾನು ಈ ಕ್ಷೇತ್ರದ ಮತದಾರರಲ್ಲದಿದ್ದರೂ/ನಾನು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ವೈಯಕ್ತಿಕ ಜ್ಞಾನವನ್ನು ಹೊಂದಿದ್ದೇನೆ ಮತ್ತು ಈ ಹೇಳಿಕೆಯನ್ನು ಸ್ವಯಂಪ್ರೇರಣೆಯಿಂದ ನೀಡುತ್ತಿದ್ದೇನೆ ಎಂದು ನಾನು ಘೋಷಿಸುತ್ತೇನೆ ಎಂದು ರಾಹುಲ್ ಗಾಂಧಿ ಮತದಾರರ ಪಟ್ಟಿಯಲ್ಲಿನ ಅಕ್ರಮಗಳ ಕುರಿತು ಪ್ರಮಾಣವಚನ ಸ್ವೀಕರಿಸಿ, ಘೋಷಣಾ ಪತ್ರ ಸಲ್ಲಿಸಬೇಕು. ಇದು ಸಾಧ್ಯವಾಗಲಿಲ್ಲ ಎಂದಾದರೆ, ತಾವು ಕಟ್ಟಿರುವ ಸುಳ್ಳು ಕಥೆಯ ಸಾಕ್ಷ್ಯವನ್ನು ಹಿಂಪಡೆಯಬೇಕು ಎಂದು ಚುನಾವಣಾ ಆಯೋಗ ಸವಾಲು ಹಾಕಿದೆ.

NO COMMENTS

LEAVE A REPLY

Please enter your comment!
Please enter your name here

Exit mobile version