ವಾಷಿಂಗ್ಟನ್: ಮಾಂಟಾನಾ ವಿಮಾನ ನಿಲ್ದಾಣದಲ್ಲಿ ರನ್ ವೇಯಲ್ಲಿ ನಿಂತಿದ್ದ ವಿಮಾನಕ್ಕೆ ಮತ್ತೊಂದು ವಿಮಾನ ಡಿಕ್ಕಿ ಹೊಡೆದ ಪರಿಣಾಮ ವಿಮಾನದಲ್ಲಿ ಭಾರಿ ಪ್ರಮಾಣ ಬೆಂಕಿ ಕಾಣಿಸಿಕೊಂಡ ಘಟನೆ ನಡೆದಿದೆ. ಇನ್ನು ಈ ಘಟನೆಯಲ್ಲಿ ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿ ಆಗಿಲ್ಲ ಎಂದು ವರದಿಯಾಗಿದೆ.
ನಾಲ್ಕು ಜನ ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ಕಿರು ವಿಮಾನ ಸಿಂಗಲ್ ಎಂಜಿನ್ ವಿಮಾನ ಆಗಿದ್ದು ಕಾಲಿಸ್ಪೆಲ್ ನಗರ ವಿಮಾನ ನಿಲ್ದಾಣದಲ್ಲಿ ಇಳಿಯುತ್ತಿತ್ತು ಆಗ ಈ ಘಟನೆ ಸಂಭವಿಸಿದೆ. ಸೊಕಾಟಾ ಟಿಬಿಎಂ 700 ಟರ್ಬೊಪ್ರೊಪ್ ವಿಮಾನವು, ನಿಲ್ದಾಣದಲ್ಲಿ ನಿಂತಿದ್ದ ಫ್ಲೈಟ್‌ಗೆ ಡಿಕ್ಕಿ ಹೊಡೆದಿದೆ.
ಕೆಳಗಿದ್ದ ವಿಮಾನದಲ್ಲಿ ಯಾರು ಪ್ರಯಾಣಿಕರು ಇರಲಿಲ್ಲ ಎಂದು ಕಾಲಿಸ್ಟೈಲ್ ಪೊಲೀಸ್ ಮುಖ್ಯಸ್ಥ ಜೋರ್ಡಾನ್ ವೆನೆಜಿಯಾ ತಿಳಿಸಿದ್ದಾರೆ. ವಿಮಾನದಿಂದ ಪೈಲಟ್ ಮತ್ತು ಮೂವರು ಪ್ರಯಾಣಿಕರು ಸುರಕ್ಷಿತವಾಗಿ ಇಳಿದಿದ್ದಾರೆ. ಅಪಘಾತದಿಂದ ಉಂಟಾದ ಬೆಂಕಿಯು ಹುಲ್ಲಿನ ಪ್ರದೇಶಕ್ಕೆ ಹರಡಿದೆ.
ಈ ಸಣ್ಣ ವಿಮಾನ ನಿಲ್ದಾಣವು ವಾಯುವ್ಯ ಮೊಂಟಾನಾದಲ್ಲಿ ಇರುವ ಸುಮಾರು 30,000 ಜನ ವಸತಿಯ ಕಾಲಿಸ್ಪೆಲ್‌ನ ದಕ್ಷಿಣದಲ್ಲಿದೆ. ಈ ವಿಮಾನವನ್ನು 2011 ರಲ್ಲಿ ನಿರ್ಮಿಸಲಾಗಿದ್ದು, ವಾಷಿಂಗ್ಟನ್‌ನ ಪುಲ್‌ಮನ್‌ನ ಮೀಟರ್ ಸ್ಕೈ ಎಲ್‌ಎಲ್‌ಸಿ ಒಡೆತನದಲ್ಲಿದೆ ಎನ್ನಲಾಗಿದೆ.
ಫೆಡರಲ್ ಏವಿಯೇಷನ್ ಅಡ್ಮಿನಿಸ್ಟ್ರೇಷನ್ (ಎಫ್‌ಎಎ) ಈ ಘಟನೆಯ ತನಿಖೆಯ ನಿಯಂತ್ರಣವನ್ನು ವಹಿಸಿಕೊಂಡಿದೆ. ಕಾಲಿಸ್ಪೆಲ್ ಸಿಟಿ ವಿಮಾನ ನಿಲ್ದಾಣವನ್ನು ತಾತ್ಕಾಲಿಕವಾಗಿ ಮುಚ್ಚಲಾಗಿದ್ದು, ತುರ್ತು ಸಿಬ್ಬಂದಿಯು ಸ್ಥಳವನ್ನು ಸುರಕ್ಷಿತಗೊಳಿಸುವ ಕಾರ್ಯದಲ್ಲಿ ತೊಡಗಿದ್ದಾರೆ. ಎಂದು ಫೆಡರಲ್ ವಿಮಾನ ಯಾನ ಆಡಳಿತ ಮಂಡಳಿ ತಿಳಿಸಿದೆ.
ಚೆನ್ನೈ ಕಾರ್ಗೋ ವಿಮಾನದಲ್ಲಿ ಬೆಂಕಿ: ಚೆನ್ನೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಂದು ಮಂಗಳವಾರ ಮಲೇಷ್ಯಾದ ಕೌಲಾಲಂಪುರದಿಂದ ಬರುತ್ತಿದ್ದ ಅಂತರ ರಾಷ್ಟ್ರೀಯ ಕಾರ್ಗೋ ವಿಮಾನದ ಎಂಜಿನ್ ಲ್ಯಾಂಡಿಂಗ್ ಸಮಯದಲ್ಲಿ ಇದ್ದಕ್ಕಿದ್ದಂತೆ ಬೆಂಕಿ ಹೊತ್ತಿ ಕೊಂಡ ಘಟನೆ ನಡೆದಿದೆ. ವಿಮಾನವು ರನ್ ವೇ ಸಮೀಪಿಸುತ್ತಿದ್ದಂತೆ, ವಿಮಾನ ಇಳಿಯುವ ಸ್ವಲ್ಪ ಸಮಯದ ಮೊದಲು ನಾಲ್ಕನೇ ಎಂಜಿನ್‌ನಲ್ಲಿ ಬೆಂಕಿಯ ಜ್ವಾಲೆ ಕಾಣಿಸಿ ಕೊಂಡಿದೆ. ಪೈಲಟ್ ಚಾಣಕ್ಷತೆಯಿಂದ ಪರಿಸ್ಥಿತಿ ನಿಯಂತ್ರಣ ಆಗಿದೆ. ತುರ್ತು ಪರಿಸ್ಥಿತಿಯಲ್ಲಿ ಯಶಸ್ವಿ ಲ್ಯಾಂಡಿಂಗ್ ಮಾಡಲಾಗಿದೆ. ಬೆಂಕಿಯನ್ನು ನಂದಿಸಲಾಗಿದೆ. ಅದೃಷ್ಟವಶಾತ್ ಈ ಘಟನೆಯಲ್ಲಿ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ ಎಂದು ಮೂಲಗಳು ತಿಳಿಸಿವೆ.
ಅಹಮದಾಬಾದ್ ವಿಮಾನ ದುರಂತ: ಜೂನ್ 12 ರಂದು ಅಹಮದಾಬಾದ್‌ನಲ್ಲಿ ನಡೆದ ಏರ್ ಇಂಡಿಯಾ ಅಪಘಾತದ ನಂತರ ವಾಯುಯಾನ ಉದ್ಯಮವು ಹೆಚ್ಚಿನ ಪರಿಶೀಲನೆಗೆ ಒಳಪಟ್ಟಿರುವ ಸಮಯದಲ್ಲಿ ಈ ಘಟನೆ ಸಂಭವಿಸಿದೆ. ಈ ಮಾರಕ ಅಪಘಾತದಲ್ಲಿ ವಿಮಾನದಲ್ಲಿದ್ದ 242 ಪ್ರಯಾಣಿಕರಲ್ಲಿ ಒಬ್ಬರನ್ನು ಹೊರತುಪಡಿಸಿ ಎಲ್ಲರೂ ಸಾವನ್ನಪ್ಪಿದರು.ಜೂನ್ 21 ರಂದು, ವಾಯುಯಾನ ಕಾವಲು ಸಂಸ್ಥೆ, ನಾಗರಿಕ ವಿಮಾನಯಾನ ನಿರ್ದೇಶನಾಲಯ (DGCA), ಇತ್ತೀಚಿನ ಸುರಕ್ಷತಾ ಲೋಪಗಳನ್ನು ಅನುಸರಿಸಿ ತನ್ನ ಮೂವರು ಉದ್ಯೋಗಿಗಳನ್ನು ವಜಾಗೊಳಿಸುವಂತೆ ಏರ್ ಇಂಡಿಯಾಗೆ ನಿರ್ದೇಶನ ನೀಡಿತ್ತು.