ನವದೆಹಲಿ: ಜೈವಿಕ ಇಂಧನಗಳು ಮತ್ತು ಹಸಿರು ಹೈಡ್ರೋಜನ್ ಉತ್ಪಾದನೆ ಮತ್ತು ಬಳಕೆಯನ್ನು ಹೆಚ್ಚಿಸಿದರೆ ಭಾರತ ಇಂಧನ ರಫ್ತು ಮಾಡುವ ರಾಷ್ಟ್ರವಾಗಬಹುದು ಎಂದು ಇತ್ತಿಚೆಗೆ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಹೇಳಿದ್ದರು. ಆದರೆ ಈ ಸುದ್ದಿಗೆ ಇಂಬು ನಿಡುವಂತೆ ಭಾರತಿಯ ರೈಲು ಇಲಾಖೆ ಭಾರತದ ಮೊದಲ ಹೈಡ್ರೋಜನ್ ಚಾಲಿತ ರೈಲನ್ನು ಆರಂಭಿಸಲು ಭಾರತೀಯ ರೈಲ್ವೆ ಸಜ್ಜಾಗಿದೆ ಎಂದು ರೈಲ್ವೆ ಸಚಿವೆ ಅಶ್ವಿನಿ ವೈಷ್ಣವ್ ತಿಳಿಸಿದ್ದಾರೆ. ಈ ಹೈಡ್ರೋಜನ್ ರೈಲು ಮೂಲಕ ಡ್ರೋಜನ್ ತಂತ್ರಜ್ಞಾನದಿಂದ ಚಾಲಿತ ರೈಲುಗಳನ್ನು ನಿಯೋಜಿಸುವ ಜಾಗತಿಕವಾಗಿ ಐದನೇ ರಾಷ್ಟ್ರವಾಗಲು ಭಾರತ ಸಜ್ಜಾಗಿದೆ.
ಭಾರತ ಹೈಡ್ರೋಜನ್ ಚಾಲಿತ ರೈಲು ಹೊಂದಿದ ಐದನೇ ರಾಷ್ಟ್ರ: ಭಾರತೀಯ ರೈಲ್ವೆಯು ಡೀಸೆಲ್ ಎಲೆಕ್ಟ್ರಿಕ್ ಮಲ್ಟಿಪಲ್ ಯೂನಿಟ್ (DEMU) ರೇಕ್‌ನ ಮಾರ್ಪಾಡು ಒಳಗೊಂಡ ಪೈಲಟ್ ಕಾರ್ಯಕ್ರಮದ ಮೂಲಕ ಭಾರತದ ಮೊದಲ ಹೈಡ್ರೋಜನ್ ರೈಲನ್ನು ರಚಿಸಲು ಒಂದು ನವೀನ ಯೋಜನೆಯನ್ನು ಪ್ರಾರಂಭಿಸಿದೆ. ಜರ್ಮನಿ, ಫ್ರಾನ್ಸ್, ಸ್ವೀಡನ್ ಮತ್ತು ಚೀನಾ ಜೊತೆಗೆ ಹೈಡ್ರೋಜನ್ ತಂತ್ರಜ್ಞಾನದಿಂದ ಚಾಲಿತ ರೈಲುಗಳನ್ನು ನಿಯೋಜಿಸುವ ಜಾಗತಿಕವಾಗಿ ಐದನೇ ರಾಷ್ಟ್ರವಾಗಲು ಭಾರತ ಸಜ್ಜಾಗಿದೆ.
2023 ರಲ್ಲಿ ಘೋಷಣೆ: ಕೆಲ ವರ್ಷಗಳ ಹಿಂದೆ 2023 ರಲ್ಲಿ, ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಭಾರತದಲ್ಲಿ ಹೈಡ್ರೋಜನ್ ಚಾಲಿತ ರೈಲುಗಳನ್ನು ಪರಿಚಯಿಸುವ ಯೋಜನೆಯನ್ನು ಘೋಷಿಸಿದ್ದರು. ಆದರೆ ಈ ಕುರಿತಂತೆ ಇಂದು ಸಾಮಾಜಿಕ ಜಾಲತಾಣದಲ್ಲಿ ಮೊದಲ ಹೈಡ್ರೋಜನ್ ಚಾಲಿತ ರೈಲಿನ ದೃಶ್ಯವನ್ನು ಹಂಚಿಕೊಂಡಿದ್ದಾರೆ. ಭಾರತೀಯ ರೈಲ್ವೆ ಇತ್ತೀಚೆಗೆ ಚೆನ್ನೈನ ಇಂಟಿಗ್ರಲ್ ಕೋಚ್ ಫ್ಯಾಕ್ಟರಿಯಲ್ಲಿ (ಐಸಿಎಫ್) ತನ್ನ ಮೊದಲ ಹೈಡ್ರೋಜನ್ ಚಾಲಿತ ರೈಲು ಕೋಚ್‌ನ ಪರೀಕ್ಷೆಯನ್ನು ಪೂರ್ಣಗೊಳಿಸಿತು.
ಇತ್ತಿಚೆಗೆ ರಾಜ್ಯಸಭೆಯಲ್ಲಿ ಅಶ್ವಿನ್ ವೈಷ್ಣವ್ ಹೈಡ್ರೋಜನ್ ರೈಲಿನ ಕುರಿತಂತೆ ಯೋಜನೆಗಳ ವಿವರವನ್ನು ವಿವರಿಸಿದ್ದರು. ಭಾರತವು 1,200 HP ಹೈಡ್ರೋಜನ್ ರೈಲನ್ನು ಅಭಿವೃದ್ಧಿ ಪಡಿಸುತ್ತಿದೆ. ಇದು ಭಾರತವನ್ನು ಹೈಡ್ರೋಜನ್ ಚಾಲಿತ ರೈಲು ತಂತ್ರಜ್ಞಾನದಲ್ಲಿ ಮುಂಚೂಣಿಗೆ ತರಲಿದೆ. ‘ಹೈಡ್ರೋಜನ್ ಫಾರ್ ಹೆರಿಟೇಜ್’ ಅಡಿಯಲ್ಲಿ 35 ಹೈಡ್ರೋಜನ್ ರೈಲುಗಳ ತಯಾರಿಕೆಗೆ ಚಿಂತನೆ ನಡೆದಿದೆ.
ಈ ಯೋಜನೆಯು ನಿರ್ವಹಣಾ ಉದ್ದೇಶಗಳಿಗಾಗಿ ಐದು ಹೈಡ್ರೋಜನ್ ಇಂಧನ ಕೋಶ ಆಧಾರಿತ ಟವರ್ ಅಭಿವೃದ್ಧಿಯನ್ನು ಸಹ ಒಳಗೊಂಡಿದೆ, ಪ್ರತಿ ಘಟಕವು 10 ಕೋಟಿ ರೂ.ಗಳ ಬೆಲೆಯನ್ನು ಹೊಂದಿದೆ. ರೈಲು ಕಾರ್ಯಾಚರಣೆಗಳನ್ನು ಬೆಂಬಲಿಸಲು ಹೈಡ್ರೋಜನ್ ಉತ್ಪಾದನೆ, ಸಂಗ್ರಹಣೆ ಮತ್ತು ವಿತರಣೆಗೆ ಸಮಗ್ರ ಸೌಲಭ್ಯ ಸೇರಿದಂತೆ ಮೂಲ ಸೌಕರ್ಯವನ್ನು ಬೆಂಬಲಿಸುವ ಯೋಜನೆಗಳನ್ನು ಸಚಿವರು ವಿವರಿಸಿದ್ದರು.
ಪರಿಸರ ಸ್ನೇಹಿ ಸಾರಿಗೆ: ಭಾರತವು ಹೈಡ್ರೋಜನ್ ಚಾಲಿತ ರೈಲುಗಳೊಂದಿಗೆ ಪರಿಸರ ಸ್ನೇಹಿ ಸಾರಿಗೆಯತ್ತ ಮಹತ್ವದ ಹೆಜ್ಜೆ ಇಟ್ಟಿದೆ. ಭಾರತೀಯ ರೈಲ್ವೆ ಇತ್ತೀಚೆಗೆ ಚೆನ್ನೈನ ಇಂಟಿಗ್ರಲ್ ಕೋಚ್ ಫ್ಯಾಕ್ಟರಿಯಲ್ಲಿ (ಐಸಿಎಫ್) ತನ್ನ ಮೊದಲ ಹೈಡ್ರೋಜನ್ ಚಾಲಿತ ರೈಲು ಕೋಚ್‌ನ ಪರೀಕ್ಷೆಯನ್ನು ಪೂರ್ಣ ಗೊಳಿಸಿತ್ತು. ‘ನಮೋ ಗ್ರೀನ್ ರೈಲ್’ ಎಂದು ಹೆಸರಿಸಲಾದ ರೈಲು ಹರಿಯಾಣದ ಜಿಂದ್ ಮತ್ತು ಸೋನಿ ಪತ್ ಅನ್ನು ಸಂಪರ್ಕಿಸುವ ಮಾರ್ಗದಲ್ಲಿ ಮೊದಲ ಹೈಡ್ರೋಜನ್ ಚಾಲಿತ ರೈಲು ಸೇವೆ ಕಾರ್ಯ ನಿರ್ವಹಿಸಲಿದೆ.