Home ಸಿನಿ ಮಿಲ್ಸ್ Raj B Shetty : ‘ಕರಾವಳಿ’ಯಲ್ಲಿ ಮಹಾವೀರನಾದ ರಾಜ್ ಬಿ ಶೆಟ್ಟಿ

Raj B Shetty : ‘ಕರಾವಳಿ’ಯಲ್ಲಿ ಮಹಾವೀರನಾದ ರಾಜ್ ಬಿ ಶೆಟ್ಟಿ

0

‘ಸು ಫ್ರಂ ಸೋ’ ಚಿತ್ರದಲ್ಲಿ ಕರುಣಾಕರ ಗುರೂಜಿಯಾಗಿ ಅಭಿಮಾನಿಗಳಿಗೆ ತಮ್ಮ ನಟನೆಯ ಮೂಲಕ ರಸದೌತಣ ಉಣಬಡಿಸಿದ್ದ ರಾಜ್ ಬಿ ಶೆಟ್ಟಿ, ಪ್ರಜ್ವಲ್‌ ದೇವರಾಜ್‌ ಅಭಿನಯದ ‘ಕರಾವಳಿ’ ಚಿತ್ರದಲ್ಲಿ ವಿಶೇಷ ಮಹತ್ವದ ಪಾತ್ರದಲ್ಲಿ ನಟಿಸುತ್ತಿದ್ದಾರೆ.

ಈ ಚಿತ್ರದ ಪೋಸ್ಟ್‌ರ ಬಿಡುಗಡೆಗೊಂಡಿದ್ದು ಸಾಮಾಜಿಕ ಜಾಲತಾಣದಲ್ಲಿ ಸಂಚಲನ ಮೂಡಿಸಿದೆ. ‘ಅಂಬಿ ನಿಂಗೆ ವಯಸ್ಸಾಯ್ತೋ’ ಖ್ಯಾತಿಯ ಗುರುದತ್‌ ಗಾಣಿಗ ನಿರ್ದೇಶನ ಕರಾವಳಿ ಚಿತ್ರದ ರಾಜ್‌ ಬಿ ಶೆಟ್ಟಿ ಪಾತ್ರದ ಫಸ್ಟ್‌ ಲುಕ್ ಇದೀಗ ಬಿಡುಗಡೆಯಾಗಿದೆ.

‘ಒಂದು ಮೊಟ್ಟೆಯ ಕಥೆ’ಯಿಂದ ಹಿಡಿದು ‘ಸು ಫ್ರಂ ಸೋ’ ಚಿತ್ರದವರೆಗೂ ರಾಜ್ ಬಿ ಶೆಟ್ಟಿ ವಿಭಿನ್ನ ಪಾತ್ರದ ಮೂಲಕ ಅಭಿಮಾನಿಗಳಿಗೆ ಇಷ್ಟವಾಗುತ್ತಿದ್ದಾರೆ. ‘ಕರವಾಳಿ’ ಚಿತ್ರದಲ್ಲಿ ಮಾವೀರನಾಗಿ ರಾಜ್ ಶೆಟ್ಟಿ ಕಾಣಿಸಿಕೊಳ್ಳುತ್ತಿದ್ದಾರೆ ಎಂಬ ಸುದ್ದಿ.

ಪ್ರಜ್ವಲ್ ದೇವರಾಜ್ ನಾಯಕನಾಗಿ ಕಾಣಿಸಿಕೊಳ್ಳುತ್ತಿರುವ ‘ಕರಾವಳಿ’ ಸಿನಿಮಾಗೆ ರಾಜ್ ಬಿ ಶೆಟ್ಟಿ ಎಂಟ್ರಿ ಕೊಟ್ಟಿದ್ದಾರೆ. ಶೆಟ್ಟರ ಎಂಟ್ರಿ ಇಂದ ಚಿತ್ರದ ಮೇಲಿನ ನಿರೀಕ್ಷೆ ದುಪ್ಪಟ್ಟಾಗಿದೆ. ಸದ್ಯ ರಾಜ್ ಬಿ ಶೆಟ್ಟಿ ಪಾತ್ರ ಪರಿಚಯದ ಟೀಸರ್ ರಿಲೀಸ್ ಆಗಿದೆ.

‘ಸು ಫ್ರಂ ಸೋ’ ಭಾರೀ ಜನಪ್ರಿಯತೆ ಪಡೆದ ಬೆನ್ನಲ್ಲಿಯೇ ಈ ಚಿತ್ರದ ಪೋಸ್ಟರ್‌ ಬಿಡುಗಡೆಯಾಗಿದೆ. ರಾಜ್ ಶೆಟ್ಟಿ ಲುಕ್ ಆಕರ್ಷಕವಾಗಿದ್ದು, ಯಾವ ಪಾತ್ರ? ಎನ್ನುವ ಕುರಿತು ಚಿತ್ರತಂಡ ಸುಳಿವು ಬಿಟ್ಟುಕೊಟ್ಟಿಲ್ಲ. ಎರಡು ಕೋಣಗಳ ನಡುವೆ ನಿಂತು ದಿಟ್ಟಿಸಿ ನೋಡುತ್ತಿರುವ ರಾಜ್ ಕೈಯಲ್ಲಿ ಪಂಜು ಹಿಡಿದು ಕಾಣಿಸಿಕೊಂಡಿದ್ದಾರೆ.

ಕಂಬಳ ಓಡಿಸುವ ಓಟಗಾರ, ಕಂಬಳ ನಡೆಸುವ ಕುಟುಂಬದ ಮಹಾವೀರನ ಪಾತ್ರ ಇರಬಹುದು ಎಂಬುದು ಚಿತ್ರ ರಸಿಕರ ಅನಿಸಿಕೆ ಆಗಿದೆ. ಈಗಾಗಲೇ ಚಿತ್ರತಂಡ ಬಿಡುಗಡೆ ಮಾಡಿರುವ ಪೋಸ್ಟರ್ ಮತ್ತು ಟೀಸರ್ ಸಿಕ್ಕಾಪಟ್ಟೆ ಗಮನ ಸೆಳೆದಿದ್ದು, ಇದೀಗ ರಾಜ್ ಶೆಟ್ಟಿ ಪೋಸ್ಟ್ ಮೂಲಕ ಮತ್ತಷ್ಟು ಸದ್ದು ಮಾಡಿದೆ.

‘ಕರಾವಳಿ’ಯಲ್ಲಿ ನಟ ಮಿತ್ರ ಸಹ ಪ್ರಮುಖ ಪಾತ್ರದಲ್ಲಿದ್ದಾರೆ. ಹಾಗೆಯೇ ಕನ್ನಡ ಕಿರುತೆರೆಯ ಪ್ರಖ್ಯಾತ ನಿರ್ದೇಶಕರಾ ರಮೇಶ್ ಇಂದಿರಾ ಪಾತ್ರ ಕೂಡ ಸಿಕ್ಕಾಪಟ್ಟೆ ಪವರ್‌ ಫುಲ್ ಆಗಿದೆ. ನಾಯಕಿಯಾಗಿ ಸಂಪದಾ ಕಾಣಿಸಿಕೊಂಡಿದ್ದಾರೆ.

ಸಿನಿಮಾದ ಶೀರ್ಷಿಕೆಯಂತೆಯೇ ಕರಾವಳಿ ಸುತ್ತಮುತ್ತ ಚಿತ್ರೀಕರಣವಾಗಿದೆ. ಗುರುದತ್ ಗಾಣಿಗ ನಿರ್ದೇಶನದ ಜೊತೆಗೆ ಏಕೆ ಫಿಲ್ಮಂ ಅಸೋಸಿಯೇಷನ್‌ನಲ್ಲಿ ಗಾಣಿಗ ಫಿಲಂಸ್ ಅಡಿಯಲ್ಲಿ ಚಿತ್ರ ನಿರ್ಮಾಣವಾಗುತ್ತಿದೆ.

ಈ ಚಿತ್ರದ ಕಥಾನಕವು ಮನುಷ್ಯ ಹಾಗೂ ಪ್ರಾಣಿ ಮಧ್ಯೆ ನಡೆಯುವ ಸಂಘರ್ಷದ ಕತೆಯನ್ನು ಒಳಗೊಂಡಿರುವ ಸಿನಿಮಾವಾಗಿದೆ. ನಟ ಪ್ರಜ್ವಲ್‌ ದೇವರಾಜ್‌ ವಿಶಿಷ್ಟ ಗೆಟಪ್‌ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ಇನ್ನು ‘ಕರಾವಳಿ’ ಭಾಗದ ಕತೆಗೆ ಕರಾವಳಿಯ ಪ್ರಮುಖ ನಟರೊಬ್ಬರು ಜೊತೆಯಾಗಿರುವುದು ಈ ಚಿತ್ರಕ್ಕೆ ಪೂರ್ಣತೆ ತಂದಿದೆ ಎಂದು ಗುರುದತ್‌ ಗಾಣಿಗ ಹೇಳಿದ್ದಾರೆ. ರಾಜ್ ಬಿ ಶೆಟ್ಟರು ಈ ಚಿತ್ರದ ಕತೆಯಿಂದಲೇ ಈ ಸಿನಿಮಾ ಒಪ್ಪಿಕೊಂಡಿದ್ದಾರೆ. ಈ ಪಾತ್ರ ಪ್ರೇಕ್ಷಕರಿಗೆ ಅಚ್ಚರಿ ನೀಡಲಿದೆ ಎಂದು ಹೇಳಿದ್ದಾರೆ.

ಹಳ್ಳಿ ಸೊಗಡಿನ ಹಿನ್ನಲೆಯಲ್ಲಿ ಮೂಡಿಬಂದಿರುವ ಈ ಸಿನಿಮಾಕ್ಕೆ ಸಚಿನ್‌ ಬಸೂರು ಸಂಗೀತ ಸಂಯೋಜನೆ ಮಾಡಿದ್ದು, ಅಭಿಮನ್ಯು ಸದಾನಂದನ್ ಕ್ಯಾಮೆರಾ ಕೈಚಳಕವಿದೆ.

NO COMMENTS

LEAVE A REPLY

Please enter your comment!
Please enter your name here

Exit mobile version