ಬೆಂಗಳೂರು: ಬೆಂಗಳೂರು ಮತ್ತು ಬೆಳಗಾವಿ ನಡುವೆ ವಂದೇ ಭಾರತ್ ರೈಲು ಸಂಚಾರಕ್ಕೆ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಲಿದ್ದಾರೆ. ಉಭಯ ನಗರಗಳ ನಡುವೆ ರೈಲು ಸಂಖ್ಯೆ 26751, 26752 ಸಂಚಾರವನ್ನು ನಡೆಸಲಿದೆ. ವಾರದ 6 ದಿನ ಈ ರೈಲು ಸಂಚಾರ ಮಾಡಲಿದ್ದು, ವೇಳಾಪಟ್ಟಿ, ದರಪಟ್ಟಿ ಬಿಡುಗಡೆಯಾಗಿದೆ.
ಕೆಎಸ್ಆರ್ ಬೆಂಗಳೂರು-ಬೆಳಗಾವಿ ನಡುವೆ ವಂದೇ ಭಾರತ್ ರೈಲು ಸಂಚಾರವನ್ನು ನಡೆಸಲಿದೆ. ಈಗಾಗಲೇ ರೈಲಿನ ವೇಳಾಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. ಜನರು ಪ್ರಯಾಣ ದರ ಎಷ್ಟು? ಎಂದು ಪ್ರಶ್ನಿಸಿದ್ದರು.
ಈಗ ಬೆಂಗಳೂರು-ಬೆಳಗಾವಿ ನಡುವಿನ ವಂದೇ ಭಾರತ್ ರೈಲಿನ ಪ್ರಯಾಣ ದರ ಘೋಷಣೆಯಾಗಿದೆ. ಆಗಸ್ಟ್ 10ರಂದು ಈ ರೈಲು ಸೇವೆಗೆ ಚಾಲನೆ ಸಿಗಲಿದ್ದು, ಆ.11ರಿಂದ ರೈಲುಗಳ ಸಂಚಾರ ಪ್ರಾರಂಭವಾಗಲಿದೆ.
ಬೆಂಗಳೂರು-ಬೆಳಗಾವಿ ಪ್ರಯಾಣ ದರ: ವಂದೇ ಭಾರತ್ ರೈಲಿನಲ್ಲಿ ಚೇರ್‌ಕಾರ್ ಮತ್ತು ಎಕ್ಸಿಕ್ಯುಟಿವ್ ಚೇರ್ ಕಾರ್ ಎಂಬ ಎರಡು ಮಾದರಿ ಸೀಟಿನ ವ್ಯವಸ್ಥೆ ಇದೆ. ಇವುಗಳ ದರಗಳಲ್ಲಿ ವ್ಯತ್ಯಾಸವಿರಲಿದೆ.
- ಬೆಂಗಳೂರು-ಬೆಳಗಾವಿ ಚೇರ್‌ಕಾರ್ 1,118 ರೂ.ಗಳು. ಎಕ್ಸಿಕ್ಯುಟಿವ್ ಚೇರ್ ಕಾರ್ 2,279 ರೂ.ಗಳು.
- ಬೆಂಗಳೂರು-ಧಾರವಾಡ ಚೇರ್‌ಕಾರ್ 914 ರೂ.ಗಳು. ಎಕ್ಸಿಕ್ಯುಟಿವ್ ಚೇರ್ ಕಾರ್ 1863 ರೂ.
- ಬೆಂಗಳೂರು-ಹುಬ್ಬಳ್ಳಿ ಚೇರ್‌ಕಾರ್ 885 ರೂ.ಗಳು. ಎಕ್ಸಿಕ್ಯುಟಿವ್ ಚೇರ್ ಕಾರ್ 1802 ರೂ.
- ಬೆಂಗಳೂರು-ಹಾವೇರಿ ಚೇರ್‌ಕಾರ್ 778 ರೂ.ಗಳು. ಎಕ್ಸಿಕ್ಯುಟಿವ್ ಚೇರ್ ಕಾರ್ 1588 ರೂ.
- ಬೆಂಗಳೂರು-ದಾವಣಗೆರೆ ಚೇರ್‌ಕಾರ್ 676 ರೂ. ಎಕ್ಸಿಕ್ಯುಟಿವ್ ಚೇರ್ ಕಾರ್ 1379 ರೂ.
- ಬೆಂಗಳೂರು-ತುಮಕೂರು ಚೇರ್‌ಕಾರ್ 298 ರೂ.ಗಳು. ಎಕ್ಸಿಕ್ಯುಟಿವ್ ಚೇರ್ ಕಾರ್ 615 ರೂ.
- ಕೆಎಸ್‌ಆರ್ ಬೆಂಗಳೂರು-ಯಶವಂತಪುರ 242 ರೂ.ಗಳು. ಎಕ್ಸಿಕ್ಯುಟಿವ್ ಚೇರ್ ಕಾರ್ 503 ರೂ.
ಬೆಳಗಾವಿ-ಕೆಎಸ್ಆರ್ ಬೆಂಗಳೂರು ನಡುವೆ (26751). ಕೆಎಸ್ಆರ್ ಬೆಂಗಳೂರು ಬೆಳಗಾವಿ ನಡುವೆ (26752) ಸಂಖ್ಯೆಯ ರೈಲು ಸಂಚಾರ ನಡೆಸಲಿದೆ. ಬುಧವಾರ ಹೊರತುಪಡಿಸಿ ವಾರದ 6 ದಿನ ರೈಲು ಸಂಚಾರ. ಬೆಂಗಳೂರು ನಗರದ ಮೆಜೆಸ್ಟಿಕ್ (ಕೆಎಸ್ಆರ್ ಬೆಂಗಳೂರು) ನಿಲ್ದಾಣದಿಂದ ಹೊರಡುವ ರೈಲು ಯಶವಂತಪುರ, ತುಮಕೂರು, ದಾವಣಗೆರೆ, ಹಾವೇರಿ, ಹುಬ್ಬಳ್ಳಿ, ಧಾರವಾಡದಲ್ಲಿ ನಿಲುಗಡೆ ಹೊಂದಿದೆ.
ನಿಲ್ದಾಣಗಳ ವೇಳಾಪಟ್ಟಿ: ಬೆಳಗಾವಿ-ಕೆಎಸ್ಆರ್ ಬೆಂಗಳೂರು ರೈಲು ಬೆಳಗಾವಿಯಿಂದ ಬೆಳಗ್ಗೆ 5.20ಕ್ಕೆ ಹೊರಟು 7.08/ 7.10 ಧಾರವಾಡ, 7.30/ 7.35 ಎಸ್‌ಎಸ್‌ಎಸ್ ಹುಬ್ಬಳ್ಳಿ, 8.35/ 8.37 ಹಾವೇರಿ, 9.25/ 9.27 ದಾವಣಗೆರೆ, 12.15/ 12.17 ತುಮಕೂರು, 13.03/ 13.05 ಯಶವಂತಪುರ ಹಾಗೂ 13.50 ಕೆಎಸ್ಆರ್ ಬೆಂಗಳೂರು ನಿಲ್ದಾಣ ತಲುಪಲಿದೆ.
ಕೆಎಸ್ಆರ್ ಬೆಂಗಳೂರು-ಬೆಳಗಾವಿ ನಡುವಿನ ರೈಲು ಕೆಎಸ್ಆರ್ ಬೆಂಗಳೂರು ನಿಲ್ದಾಣದಿಂದ ಮಧ್ಯಾಹ್ನ 14.20ಕ್ಕೆ ಹೊರಡಲಿದೆ. ಯಶವಂತಪುರ 14.28/ 14.30, ತುಮಕೂರು 15.03/ 15.05, ದಾವಣಗೆರೆ 17.48/ 17.50, ಹಾವೇರಿ 18.48/ 18.50, ಎಸ್‌ಎಸ್‌ಎಸ್ ಹುಬ್ಬಳ್ಳಿ 20/20.05, ಧಾರವಾಡ 20.25/ 20.27 ಮತ್ತು ಬೆಳಗಾವಿಗೆ 22.40ಕ್ಕೆ ತಲುಪಲಿದೆ.