Home ಸುದ್ದಿ ದೇಶ ದೆಹಲಿ: ಕೆಂಪುಕೋಟೆಯಲ್ಲಿ 1 ಕೋಟಿ ಮೌಲ್ಯದ ಕಲಶ ಕದ್ದವನ ಬಂಧನ

ದೆಹಲಿ: ಕೆಂಪುಕೋಟೆಯಲ್ಲಿ 1 ಕೋಟಿ ಮೌಲ್ಯದ ಕಲಶ ಕದ್ದವನ ಬಂಧನ

0

ದೆಹಲಿ: ಐತಿಹಾಸಿಕ ಕೆಂಪುಕೋಟೆಯ ಆವರಣದಲ್ಲಿ ನಡೆದ ಜೈನ ಸಮುದಾಯದ ಮಹತ್ವದ ಧಾರ್ಮಿಕ ಕಾರ್ಯಕ್ರಮದಲ್ಲಿ 1.5 ಕೋಟಿ ರೂಪಾಯಿ ಮೌಲ್ಯದ ಎರಡು ಚಿನ್ನದ ಕಲಶ (Golden Kalash) ಕಳವು ಪ್ರಕರಣ ಬೆಳಕಿಗೆ ಬಂದು, ಉತ್ತರ ಪ್ರದೇಶದ ಅಪರಾಧ ವಿಭಾಗದ ಪೊಲೀಸರು ಆರೋಪಿ ಭೂಷಣ್ ವರ್ಮಾನನ್ನು ಬಂಧಿಸಿದ್ದಾರೆ.

ಮಾಹಿತಿ ಪ್ರಕಾರ, ಜೈನ್ ಸಮುದಾಯದ ವಿಶೇಷ ಧಾರ್ಮಿಕ ಸಮಾರಂಭದಲ್ಲಿ ವಜ್ರ, ರತ್ನಗಳಿಂದ ಅಲಂಕರಿಸಲ್ಪಟ್ಟ ಎರಡು ಅಮೂಲ್ಯ ಕಲಶಗಳನ್ನು ಧಾರ್ಮಿಕ ವೇದಿಕೆಯ ಮೇಲಿಟ್ಟು ಪೂಜಾ ಕಾರ್ಯಕ್ರಮ ನಡೆಯುತ್ತಿತ್ತು. ಇದೇ ಸಂದರ್ಭದಲ್ಲಿ ಆರೋಪಿಯು ೀದರ ಸದುಪಯೋಗ ಪಡೆದು ಕಲಶಗಳನ್ನು ಕಳವುಮಾಡಿ ಪರಾರಿಯಾಗಿದ್ದ. ಈ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದ್ದವು. ಮತ್ತು ಸಾಮಾಜಿಕ ಜಾಲತಾಣದಲ್ಲಿ ಈ ದೃಶ್ಯಗಳು ವೈರಲ್ ಆಗಿತ್ತು. ಇದೀಗ ಪೊಲೀಸರು ಆರೋಪಿಯನ್ನು ಬಂಧಿಸಿ, ಬಿಎನ್‌ಎಸ್ ಸೆಕ್ಷನ್ 303 (2)ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ

ಕಾರ್ಯಕ್ರಮ ಆಯೋಜಕರು ಮತ್ತು ಜೈನ್ ಸಮುದಾಯದ ಮುಖಂಡರು ತಕ್ಷಣವೇ ಪೊಲೀಸರಿಗೆ ದೂರು ದಾಖಲಿಸಿದ್ದು, ವಿಶೇಷ ತನಿಖಾ ತಂಡವನ್ನು ರಚಿಸಿ ಸುಳಿವು ಹಿಡಿಯಲು ಶೋಧ ಕಾರ್ಯಾಚರಣೆ ಆರಂಭಿಸಲಾಯಿತು. ಹಾಪುರ್‌ನ ನಿವಾಸಿ ಎಂದು ಗುರುತಿಸಲ್ಪಟ್ಟ ಭೂಷಣ್ ವರ್ಮಾವನ್ನು ಪೊಲೀಸರು ಪತ್ತೆಹಚ್ಚಿ ಬಂಧಿಸಿದ್ದಾರೆ. ಬಂಧಿತನಿಂದ ಹೆಚ್ಚಿನ ಮಾಹಿತಿ ಪಡೆಯಲು ಪೊಲೀಸರು ಮುಂದಿನ ತನಿಖೆ ನಡೆಸುತ್ತಿದ್ದು, ಕಳವುಗಾದ ಕಲಶಗಳನ್ನು ಪತ್ತೆಹಚ್ಚುವ ಪ್ರಯತ್ನಗಳು ಮುಂದುವರಿದಿವೆ.

NO COMMENTS

LEAVE A REPLY

Please enter your comment!
Please enter your name here

Exit mobile version