ಐ ಟಿ ಜಗತ್ತಿನಲ್ಲಿ ಉತ್ಸಾಹ ಸೃಷ್ಠಿಸಿರುವ Microsoft Copilot ಈ ಬಾರಿ ಬೃಹತ್ ಅಪ್ಡೇಟ್‌ಗಳೊಂದಿಗೆ ಎಲ್ಲರ ಗಮನಸೆಳೆದಿದೆ. ಮೈಕ್ರೋಸಾಫ್ಟ್ ತನ್ನ AI ಸಹಾಯಕ ಕೊಪಿಲಟ್‌ನಲ್ಲಿ ಪ್ರಮುಖ ನವೀಕರಣವನ್ನು ಬಿಡುಗಡೆ ಮಾಡಿದ್ದು. ಇದು AI ಅನ್ನು ಹೆಚ್ಚು ವೈಯಕ್ತಿಕ, ಸಹಾಯಕ ಮತ್ತು ಮಾನವ ಕೇಂದ್ರಿತವಾಗಿಸಲು ವಿನ್ಯಾಸಗೊಳಿಸಲಾದ 12 ಹೊಸ ವೈಶಿಷ್ಟ್ಯಗಳನ್ನು ಪರಿಚಯಿಸುತ್ತದೆ.
Copilot ಈಗ Edge ಬ್ರೌಸರ್, Word, Excel, Teams, Outlook ಮೊದಲಾದ Microsoft 365 ಅಪ್ಲಿಕೇಶನ್‌ಗಳಲ್ಲಿ ನೇರವಾಗಿ ಕಾರ್ಯನಿರ್ವಹಿಸುತ್ತದೆ. Word ನಲ್ಲಿ ಲೇಖನ ಬರೆಯುವಾಗ “ಈ ಪ್ಯಾರಾಗ್ರಾಫ್ ಅನ್ನು ಪುನರ್‌ರಚಿಸು” ಎಂದು Copilot ಗೆ ಹೇಳಿದರೆ, ಅದು ತಕ್ಷಣವೇ ವೃತ್ತಿಪರ ಶೈಲಿಯಲ್ಲಿ ಬದಲಾಯಿಸುತ್ತದೆ.
Copilot ಈಗ “Mico” ಎಂಬ ದೃಶ್ಯಾವತಾರವನ್ನು ಹೊಂದಿದೆ — ಇದು Microsoft ಮತ್ತು Copilot ಎಂಬ ಪದಗಳ ಸಂಕ್ಷಿಪ್ತ ರೂಪ. Mico ಬಳಕೆದಾರರ ಭಾವನೆಗಳಿಗೆ ಪ್ರತಿಕ್ರಿಯಿಸುವಂತೆ ಮುಖಭಾವ ಮತ್ತು ಬಣ್ಣ ಬದಲಾಯಿಸುತ್ತಾ, ನೈಸರ್ಗಿಕ ಸಂಭಾಷಣೆಯ ಅನುಭವವನ್ನು ನೀಡುತ್ತದೆ. “Mico” ಎಂಬ ಆನಿಮೇಟೆಡ್ ಮುಖವೊಂದನ್ನು ಹೊಂದಿದೆ, ಇದು ಭಾವನೆಗಳನ್ನು ವ್ಯಕ್ತಪಡಿಸುತ್ತದೆ.
Microsoft Edge ಬ್ರೌಸರ್ ಮತ್ತು Microsoft 365 ಹಾಗೂ Edge ಅಪ್ಲಿಕೇಶನ್‌ಗಳಲ್ಲಿ ಇನ್ನಷ್ಟು ಆಳವಾಗಿ ಏಕೀಕೃತವಾಗಿದೆ, ಇದರಿಂದ ನಿಮ್ಮ ದಿನನಿತ್ಯದ ಕೆಲಸಗಳು ಹೆಚ್ಚು ಪರಿಣಾಮಕಾರಿಯಾಗಿ ಸಾಗುತ್ತವೆ. 32 ಜನರವರೆಗೆ ಸೇರಿ AI-ಚಾಟ್‌ಅಲ್ಲಿನ ಸಹ-ಚರ್ಚೆ ಮಾಡಬಹುದಾಗಿದೆ.
ಹೊಸ ಅಪಡೆಟ್ ಕುರಿತಂತೆ Microsoft AI ಕೇವಲ ಯಂತ್ರವಲ್ಲ, ಬಳಕೆದಾರರ ಪ್ರತಿಭೆಯನ್ನು ಎತ್ತಿಹಿಡಿಯುವ ಸಹಕಾರಿಯಾಗಬೇಕು ಎಂದಿದೆ.
