Home ಸುದ್ದಿ ದೇಶ ವೀರರಾಣಿ ಕಿತ್ತೂರು ಚೆನ್ನಮ್ಮ: 200 ರೂಪಾಯಿಯ ಸ್ಮಾರಕ ನಾಣ್ಯ ಬಿಡುಗಡೆ

ವೀರರಾಣಿ ಕಿತ್ತೂರು ಚೆನ್ನಮ್ಮ: 200 ರೂಪಾಯಿಯ ಸ್ಮಾರಕ ನಾಣ್ಯ ಬಿಡುಗಡೆ

0

ನವದೆಹಲಿ: ವೀರರಾಣಿ ಕಿತ್ತೂರು ಚೆನ್ನಮ್ಮ ಅವರ ಅಸಾಧಾರಣ ಶೌರ್ಯ ಮತ್ತು ಸ್ವಾತಂತ್ರ್ಯ ಹೋರಾಟವನ್ನು ಸ್ಮರಿಸಲು ನವದೆಹಲಿಯ ಸಿರಿ ಫೋರ್ಟ್ ಸಭಾಂಗಣದಲ್ಲಿ ವೀರರಾಣಿ ಕಿತ್ತೂರು ಚೆನ್ನಮ್ಮ ವಿಜಯೋತ್ಸವದ ದ್ವಿಶತಮಾನೋತ್ಸವ ಸಮಾರಂಭ ಭವ್ಯವಾಗಿ ನಡೆಯಿತು.

ಭಾರತ ಸರ್ಕಾರದ ಸಂಸ್ಕೃತಿ ಸಚಿವಾಲಯ ಹಾಗೂ ದೆಹಲಿ ಕನ್ನಡ ಸಂಘದ ಸಂಯುಕ್ತಾಶ್ರಯದಲ್ಲಿ ಆಯೋಜಿಸಲಾದ ಈ ಸಮಾರಂಭದಲ್ಲಿ ಕೇಂದ್ರ ಸಂಸ್ಕೃತಿ ಮತ್ತು ಪ್ರವಾಸೋಧ್ಯಮ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಅವರು 200 ರೂಪಾಯಿಯ ಸ್ಮಾರಕ ನಾಣ್ಯವನ್ನು ಬಿಡುಗಡೆ ಮಾಡಿದರು.

ಈ ಮಹತ್ವದ ಕ್ಷಣವು ಪಂಚಮಸಾಲಿ ಜಗದ್ಗುರು ಪೀಠದ ವಚನಾನಂದ ಮಹಾಸ್ವಾಮಿ ಅವರ ದಿವ್ಯ ಸಾನಿಧ್ಯದಲ್ಲಿ ನೆರವೇರಿತು. ಈ ಸಂದರ್ಭದಲ್ಲಿ ರಾಜ್ಯಸಭಾ ಸದಸ್ಯ ನಾರಾಯಣರಾವ್ ಬಾಂಢಗೆ, ಹಾಗೂ ದೆಹಲಿ ಕನ್ನಡ ಸಂಘದ ಅಧ್ಯಕ್ಷ ಸಿ.ಎಂ. ನಾಗರಾಜ ಉಪಸ್ಥಿತರಿದ್ದರು.

ಸಮಾರಂಭದಲ್ಲಿ ಚೆನ್ನಮ್ಮ ಅವರ ಶೌರ್ಯಗಾಥೆ, ಸಾಮಾಜಿಕ ನ್ಯಾಯದ ಪರ ಹೋರಾಟ ಮತ್ತು ಭಾರತೀಯ ಮಹಿಳಾ ಧೈರ್ಯದ ಸಂಕೇತವಾಗಿ ಅವರ ಪಾತ್ರವನ್ನು ಕುರಿತಂತೆ ಹಲವು ವಕ್ತಾರರು ಮಾತನಾಡಿದರು. ಈ ನಾಣ್ಯದ ಬಿಡುಗಡೆ ಮೂಲಕ ವೀರರಾಣಿ ಕಿತ್ತೂರು ಚೆನ್ನಮ್ಮ ಅವರ ಹೆಸರು ಮತ್ತೊಮ್ಮೆ ಭಾರತದ ಸಂಸ್ಕೃತಿ ಪರಂಪರೆಯಲ್ಲಿ ಅಚ್ಚಳಿಯದ ಗುರುತು ಮೂಡಿಸಿದೆ.

ಸ್ಮಾರಕ ನಾಣ್ಯದ ಹಿಂಭಾಗದಲ್ಲಿ ಕಿತ್ತೂರು ಚೆನ್ನಮ್ಮ ಅವರ ಚಿತ್ರ ಹಾಗೂ “200th Anniversary of Victory Celebration of Kittur Rani Chennamma” ಎಂಬ ಬರಹ ಕೆತ್ತಲಾಗಿದೆ

NO COMMENTS

LEAVE A REPLY

Please enter your comment!
Please enter your name here

Exit mobile version