Home ಸುದ್ದಿ ದೇಶ ಹಳಿತಪ್ಪಿದ ಎಲ್‌ಪಿಜಿ ತುಂಬಿದ ಗೂಡ್ಸ್ ರೈಲಿನ ಬೋಗಿಗಳು

ಹಳಿತಪ್ಪಿದ ಎಲ್‌ಪಿಜಿ ತುಂಬಿದ ಗೂಡ್ಸ್ ರೈಲಿನ ಬೋಗಿಗಳು

0

ಮಂಗಳವಾರ ತಡರಾತ್ರಿ ಜಬಲ್‌ಪುರ ರೈಲ್ವೆ ಯಾರ್ಡ್‌ನಲ್ಲಿ ಗೂಡ್ಸ್ ರೈಲಿನ ಎರಡು ಬೋಗಿಗಳು ಹಳಿತಪ್ಪಿದವು, ಸುಮಾರು 1 ಗಂಟೆಗಳ ನಂತರ ರೈಲ್ವೆ ಸಿಬ್ಬಂದಿ ಅದನ್ನು ಹಳಿ ಮೇಲೆ ತಂದು ಗಮ್ಯಸ್ಥಾನದ ಕಡೆಗೆ ಕಳುಹಿಸಿದ್ದಾರೆ. ಘಟನೆಯಲ್ಲಿ ಯಾವುದೇ ಪ್ರಾಣ ಹಾನಿಯಾಗಿಲ್ಲ.
ಜಬಲ್‌ಪುರದ ಗ್ಯಾಸ್ ಫ್ಯಾಕ್ಟರಿಯೊಳಗೆ ಮಂಗಳವಾರ ರಾತ್ರಿ ಎಲ್‌ಪಿಜಿ ಸಾಗಿಸುತ್ತಿದ್ದ ಗೂಡ್ಸ್ ರೈಲಿನ ಎರಡು ಬೋಗಿಗಳು ಹಳಿತಪ್ಪಿವೆ ಎಂದು ಪಶ್ಚಿಮ ಮಧ್ಯ ರೈಲ್ವೆಯ ಸಿಪಿಆರ್‌ಒ ತಿಳಿಸಿದ್ದಾರೆ. ಇದರಿಂದಾಗಿ ಯಾವುದೇ ಮುಖ್ಯ ಮಾರ್ಗದ ಚಲನೆಗೆ ತೊಂದರೆಯಾಗಲಿಲ್ಲ. ಮುಖ್ಯ ಮಾರ್ಗದಲ್ಲಿ ರೈಲು ಸಂಚಾರ ಸಾಮಾನ್ಯವಾಗಿದೆ ಎಂದಿದ್ದಾರೆ. ಬೆಳಗ್ಗೆ ಅಧಿಕಾರಿಗಳ ಸಮ್ಮುಖದಲ್ಲಿ ದುರಸ್ಥಿ ಕಾರ್ಯ ಆರಂಭವಾಯಿತು ಎಂದಿದ್ದಾರೆ.

Exit mobile version