Home ಸುದ್ದಿ ದೇಶ UGC ಆದೇಶ: ನಿಗದಿತ ವೇಳೆಗೆ ಪರೀಕ್ಷೆ – ಪ್ರಮಾಣಪತ್ರ ಕಡ್ಡಾಯ!

UGC ಆದೇಶ: ನಿಗದಿತ ವೇಳೆಗೆ ಪರೀಕ್ಷೆ – ಪ್ರಮಾಣಪತ್ರ ಕಡ್ಡಾಯ!

0

ದೇಶದ ಉನ್ನತ ಶಿಕ್ಷಣ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಮಹತ್ವದ ಹಾಗೂ ಕಟ್ಟುನಿಟ್ಟಿನ ಸೂಚನೆಯನ್ನು ವಿಶ್ವವಿದ್ಯಾಲಯ ಧನಸಹಾಯ ಆಯೋಗ (UGC) ಹೊರಡಿಸಿದೆ. ದೇಶದ ಎಲ್ಲ ವಿಶ್ವವಿದ್ಯಾಲಯಗಳು ಮತ್ತು ಉನ್ನತ ಶಿಕ್ಷಣ ಸಂಸ್ಥೆಗಳು ನಿಗದಿತ ಸಮಯದಲ್ಲಿ ಪರೀಕ್ಷೆಗಳನ್ನು ನಡೆಸುವುದು – ಫಲಿತಾಂಶಗಳನ್ನು ಪ್ರಕಟಿಸುವುದು – ಅಂತಿಮ ಪದವಿ ಪ್ರಮಾಣಪತ್ರಗಳನ್ನು ತ್ವರಿತವಾಗಿ ನೀಡುವುದು ಕಡ್ಡಾಯ ಎಂದು ಯುಜಿಸಿ ಸ್ಪಷ್ಟ ನಿರ್ದೇಶನ ನೀಡಿದೆ.

ಪರೀಕ್ಷೆ – ಫಲಿತಾಂಶ – ಪ್ರಮಾಣಪತ್ರ – ವಿಳಂಬಕ್ಕೆ ಅವಕಾಶವಿಲ್ಲ: ಯುಜಿಸಿಯ ಪ್ರಕಾರ, ಪದವಿ ಪ್ರಮಾಣಪತ್ರ ನೀಡುವಲ್ಲಿ ಅನವಶ್ಯಕ ವಿಳಂಬ ಮಾಡಿದಲ್ಲಿ ವಿದ್ಯಾರ್ಥಿಗಳಿಗೆ ಉದ್ಯೋಗಾವಕಾಶಗಳು ಕೈತಪ್ಪುವ ಸಾಧ್ಯತೆ ಹೆಚ್ಚಾಗುತ್ತದೆ. ಇದು ಅವರ ಭವಿಷ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ಎಂಬ ಕಳವಳವನ್ನು ಆಯೋಗ ವ್ಯಕ್ತಪಡಿಸಿದೆ.

ಶೈಕ್ಷಣಿಕ ಕ್ಯಾಲೆಂಡರ್ ಪ್ರಕಾರ ಪರೀಕ್ಷೆ ಹಾಗೂ ಫಲಿತಾಂಶಗಳು ಸಮಯಕ್ಕೆ ಆಗುವುದು ವಿದ್ಯಾರ್ಥಿಗಳ ಮೂಲಭೂತ ಹಕ್ಕು ಎಂದು ಯುಜಿಸಿ ಹೇಳಿದೆ.

180 ದಿನಗಳ ಒಳಗೆ ಪ್ರಮಾಣಪತ್ರ ನೀಡಲೇಬೇಕು: ಯುಜಿಸಿ ಹೊಸ ಆದೇಶದ ಪ್ರಮುಖ ಅಂಶದಲ್ಲಿ ಫಲಿತಾಂಶ ಪ್ರಕಟಿಸಿದ ನಂತರ 180 ದಿನಗಳೊಳಗಾಗಿ (ಅಂದರೆ 6 ತಿಂಗಳೊಳಗೆ) ವಿದ್ಯಾರ್ಥಿಗಳಿಗೆ ಪದವಿ ಪ್ರಮಾಣಪತ್ರ ನೀಡುವುದು ಕಡ್ಡಾಯ. ಈ ಗಡುವನ್ನು ಮೀರುವುದನ್ನು ಯುಜಿಸಿ ಗಂಭೀರವಾಗಿ ಪರಿಗಣಿಸಲಿದೆ ಎಂದು ತಿಳಿಸಿದೆ.

ದಂಡನಾತ್ಮಕ ಕ್ರಮ ಕೈಗೊಳ್ಳಲು UGC ಸಿದ್ಧ: ಯಾವುದೇ ವಿಶ್ವವಿದ್ಯಾಲಯ ಅಥವಾ ಸ್ವಾಯತ್ತ ಕಾಲೇಜು ಈ ನಿಯಮಗಳನ್ನು ಪಾಲಿಸದಿದ್ದಲ್ಲಿ ದಂಡನಾತ್ಮಕ ಕ್ರಮ, ಮಾನ್ಯತೆ ಪರಿಶೀಲನೆ, ನಿಧಿ ನಿಲುಗಡೆ, ಮುಂತಾದ ಕ್ರಮಗಳನ್ನು ಜಾರಿಗೊಳಿಸಲು ಯುಜಿಸಿ ಅಧಿಕಾರ ಹೊಂದಿದೆ ಎಂದು ಎಚ್ಚರಿಕೆ ನೀಡಿದೆ.

ಶಿಕ್ಷಣ ಸಂಸ್ಥೆಗಳ ಅನಿಯಮಿತ ಕೆಲಸದ ಶೈಲಿ, ಅನವಶ್ಯಕ ವಿಳಂಬ, ಮತ್ತು ಶೈಕ್ಷಣಿಕ ವೇಳಾಪಟ್ಟಿಯ ಅಸಮರ್ಪಕ ನಿರ್ವಹಣೆಯ ವಿರುದ್ಧ ಇದು ರಾಷ್ಟ್ರಮಟ್ಟದ ಕಠಿಣ ಸಂದೇಶವೆಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

NO COMMENTS

LEAVE A REPLY

Please enter your comment!
Please enter your name here

Exit mobile version