Home ತಾಜಾ ಸುದ್ದಿ ಶ್ರೀಲಂಕಾಕ್ಕೆ ಮರಳಿದ ರಾಜೀವ್ ಹಂತಕರು

ಶ್ರೀಲಂಕಾಕ್ಕೆ ಮರಳಿದ ರಾಜೀವ್ ಹಂತಕರು

0

ಚೆನ್ನೈ: ದೇಶದ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹತ್ಯೆ ಪ್ರಕರಣದ ಮೂವರು ಮಾಜಿ ಅಪರಾಧಿಗಳು ಬುಧವಾರ ತಮ್ಮ ತಾಯ್ನಾಡಾದ ಶ್ರೀಲಂಕಾಕ್ಕೆ ಮರಳಿದ್ದಾರೆ. ಮುರುಗನ್ ಅಲಿಯಾಸ್ ಶ್ರೀಹರನ್, ಜಯಕುಮಾರ್ ಹಾಗೂ ರಾಬರ್ಟ್ ಪಾಯಸ್ ಶ್ರೀಲಂಕಾಕ್ಕೆ ತೆರಳಿದ ಮಾಜಿ ಅಪರಾಧಿಗಳು. ೨೦೨೨ರ ನವೆಂಬರ್‌ನಲ್ಲಿ ಸುಪ್ರೀಂಕೋರ್ಟ್ ಈ ಪ್ರಕರಣದ ಏಳು ಅಪರಾಧಿಗಳನ್ನು ಬಿಡುಗಡೆ ಮಾಡಿತ್ತು. ಅವರಲ್ಲಿ ಈ ಮೂವರೂ ಸೇರಿದ್ದಾರೆ. ಜೈಲಿನಿಂದ ಬಿಡುಗಡೆಯಾದ ನಂತರ ತಿರುಚಿರಾಪಳ್ಳಿಯ ವಿಶೇಷ ಶಿಬಿರದಲ್ಲಿದ್ದರು. ಚೆನ್ನೈಯಲ್ಲಿರುವ ಶ್ರೀಲಂಕಾ ಹೈಕಮಿಷನ್ ಅವರಿಗೆ ಪ್ರಯಾಣ ದಾಖಲೆಯನ್ನೂ ನೀಡಿತ್ತು. ಪ್ರಕರಣದಲ್ಲಿ ಶಿಕ್ಷೆಗೊಳಗಾದವರಲ್ಲಿ ಸಂತನ್ ಎಂಬಾತ ಇತ್ತೀಚೆಗೆ ಮೃತಪಟ್ಟಿದ್ದ. ಎಲ್ಲಾ ಏಳು ಅಪರಾಧಿಗಳು ೩೦ ವರ್ಷಗಳ ಕಾಲ ಜೈಲು ಶಿಕ್ಷೆ ಅನುಭವಿಸಿದ್ದರು.

Exit mobile version