Home ತಾಜಾ ಸುದ್ದಿ ಯುದ್ದ ವಿಮಾನ ನಿರ್ಮಾಣಕ್ಕೆ ರಾಜನಾಥ್​ ಸಿಂಗ್ ಅನುಮೋದನೆ

ಯುದ್ದ ವಿಮಾನ ನಿರ್ಮಾಣಕ್ಕೆ ರಾಜನಾಥ್​ ಸಿಂಗ್ ಅನುಮೋದನೆ

0

ನವದೆಹಲಿ: ಅತ್ಯಾಧುನಿಕ ಮಧ್ಯಮ ಕ್ರಮಾಂಕದ ಯುದ್ಧ ವಿಮಾನ ಯೋಜನಾ ಮಾದರಿಗೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅನುಮೋದನೆ ನೀಡಿದ್ದಾರೆ.
ಅಡ್ವಾನ್ಸ್ಡ್ ಮೀಡಿಯಂ ಕಾಂಬ್ಯಾಟ್ ಏರ್​​ಕ್ರಾಫ್ಟ್ ಯೋಜನೆ ಅಡಿಯಲ್ಲಿ ಭಾರತವು ಅತ್ಯಾಧುನಿಕ ರಕ್ಷಣಾ ಸಾಮರ್ಥ್ಯ ಹೆಚ್ಚಿಸಿಕೊಳ್ಳಲಿದೆ. ಇದು ಸುಧಾರಿತ ಮಿಲಿಟರಿ ಸಾಮರ್ಥ್ಯ ಹೊಂದಿರುವ ಯುದ್ಧವಿಮಾನ. ಶತ್ರುವಿನ ಕ್ಷಿಪಣಿ ಅಥವಾ ಜೆಟ್ ದಾಳಿಯಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗುವಂತೆ ತೀಕ್ಷ್ಣವಾಗಿ ತಿರುಗುವ ಸಾಮರ್ಥ್ಯ ಇರಬೇಕು. ಸೂಪರ್ ಸಾನಿಕ್ ಸ್ಪೀಡ್​​ನಲ್ಲಿ ಹೋಗಬೇಕು. ವಿವಿಧ ವಿಭಾಗಗಳ ನಡುವೆ ಡಾಟಾ ಫ್ಯೂಶನ್ ಮಾಡಿ ಸಮರ್ಥವಾಗಿ ದಾಳಿ ಮಾಡಬಲ್ಲಂತಿರಬೇಕು ಎಂದು ಭಾವಿಸಲಾಗಿದೆ. ಈ ಮಾದರಿ ಭಾರತದ ದೇಶೀಯ ರಕ್ಷಣಾ ಸಾಮರ್ಥ್ಯಗಳನ್ನು ವಿಸ್ತರಿಸುವ ಹಾಗೂ ಸದೃಢವಾದ , ದೇಶೀಯ ವೈಮಾನಿಕ ವಲಯದ ಕೈಗಾರಿಕಾ ವ್ಯವಸ್ಥೆಯನ್ನು ಉತ್ತೇಜಿಸುವ ಗುರಿಯನ್ನು ಹೊಂದಿದೆ ಎಂದಿದ್ದಾರೆ.

Exit mobile version