Home ತಾಜಾ ಸುದ್ದಿ ಮೋದಿಗೆ ನೈಜೀರಿಯಾದ ೨ನೇ ಅತ್ಯುನ್ನತ ಪ್ರಶಸ್ತಿ

ಮೋದಿಗೆ ನೈಜೀರಿಯಾದ ೨ನೇ ಅತ್ಯುನ್ನತ ಪ್ರಶಸ್ತಿ

0

ಅಬುಜಾ: ತ್ರಿರಾಷ್ಟ್ರ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರಿಗೆ ನೈಜೀರಿಯಾದ ಎರಡನೇ ಅತ್ಯುನ್ನತ ನಾಗರಿಕ ಪ್ರಶಸ್ತಿ ಯನ್ನು ನೀಡಿ ಸನ್ಮಾನಿಸಲಾಗಿದೆ. `ದ ಗ್ರ್ಯಾಂಡ್ ಕಮಾಂಡರ್ ಆಫ್ ದಿ ಅರ್ಡರ್ ಆಫ್ ದ ನೈಜಿರಿಯಾ’ ಪ್ರಶಸ್ತಿಯನ್ನು ಆ ದೇಶದ ಅಧ್ಯಕ್ಷ ಬೊಲಾ ಅಹ್ಮದ್ ಟಿನುಬು ಪ್ರಧಾನಿ ಮೋದಿ ಅವರಿಗೆ ನೀಡಿದ್ದಾರೆ. ೧೯೬೯ರಲ್ಲಿ ರಾಣಿ ಎಲಿಜಬೆತ್‌ಗೆ ಈ ಪ್ರಶಸ್ತಿಯನ್ನು ನೀಡಲಾಗಿತ್ತು. ಅದಾದ ನಂತರ ಈ ಪ್ರಶಸ್ತಿ ಸ್ವೀಕರಿಸುತ್ತಿರುವ ಎರಡನೇ ವಿದೇಶಿ ನಾಯಕ ನರೇಂದ್ರ ಮೋದಿ.
ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಮೋದಿ, ಭಾರತ-ನೈಜೀರಿ ಯಾದ ಬಾಂಧವ್ಯ ಸಾಮಾಜಿಕ ಹಾಗೂ ಸಾಂಸ್ಕೃತಿಕ ವೈವಿಧ್ಯತೆಯಲ್ಲಿ ಆಳವಾಗಿ ಬೇರೂರಿರುವ ಬಾಂಧವ್ಯವನ್ನು ಆಧರಿಸಿವೆ. ಎರಡೂ ದೇಶಗಳ ಅಭಿವೃದ್ಧಿಗಾಗಿ ಕೆಲಸ ಮಾಡಲು ಭಾರತ ಬದ್ಧವಾಗಿದೆ ಎಂದರು. ಮೋದಿಯವರ ಆಗಮನದಿಂದ ಪಶ್ಚಿಮ ಆಫ್ರಿಕಾದ ದೇಶವೊಂದಕ್ಕೆ ಭಾರತದ ಪ್ರಧಾನಿಯೊಬ್ಬರು ೧೭ ವರ್ಷಗಳ ನಂತರ ಕಾಲಿಟ್ಟಂತಾಗಿದೆ.

Exit mobile version