Home ತಾಜಾ ಸುದ್ದಿ ಅಲ್ಲು ವಿರುದ್ಧದ ದೂರು ಹಿಂದಕ್ಕೆ

ಅಲ್ಲು ವಿರುದ್ಧದ ದೂರು ಹಿಂದಕ್ಕೆ

0

ಹೈದರಾಬಾದ್: ಇಲ್ಲಿನ ಚಿತ್ರಮಂದಿರವೊಂದರಲ್ಲಿ ನಡೆದ ಪುಷ್ಪ-೨ ಚಿತ್ರದ ಪ್ರೀಮಿಯರ್ ಶೋ ವೇಳೆ ನೂಕುನುಗ್ಗಲು ಉಂಟಾದಾಗ ಸಾವನ್ನಪ್ಪಿದ ಮಹಿಳೆಯ ಪತಿ ಭಾಸ್ಕರ್, ಚಿತ್ರದ ನಾಯಕ ಅಲ್ಲು ಅರ್ಜುನ್ ಅವರನ್ನು ದುರಂತಕ್ಕೆ ಹೊಣೆಗಾರರನ್ನಾಗಿ ಮಾಡುವುದಿಲ್ಲ ಎಂದಿದ್ದಾರೆ. ಜತೆಗೆ ಪ್ರಕರಣವನ್ನು ಹಿಂದಕ್ಕೆ ಪಡೆಯಲು ಸಿದ್ದ ಎಂದು ಹೇಳಿರುವುದು ಅಚ್ಚರಿ ಮೂಡಿಸಿದೆ. ಅಲ್ಲು ಅರ್ಜುನ್ ಬಂಧನದ ವಿಷಯ ಕೂಡ ತಿಳಿದಿಲ್ಲ. ಟಿವಿಗಳಲ್ಲಿ ನೋಡಿ ತಿಳಿದುಕೊಂಡೆ. ಅರ್ಜುನ್ ಅವರು ಪ್ರೀಮಿಯರ್ ಶೋಗೆ ಬಂದಿದ್ದರಲ್ಲಿ ತಪ್ಪೇನಿಲ್ಲ ಎಂದು ಹೇಳಿದ್ದಾರೆ.

Exit mobile version