Home ಸುದ್ದಿ ದೇಶ ಸಿಜೆಐ ಆದ ಮೊದಲ ದಿನವೇ 17 ಕೇಸ್ ವಿಚಾರಣೆ ಮಾಡಿದ ಕಾಂತ್

ಸಿಜೆಐ ಆದ ಮೊದಲ ದಿನವೇ 17 ಕೇಸ್ ವಿಚಾರಣೆ ಮಾಡಿದ ಕಾಂತ್

0

ನವದೆಹಲಿ: ಸುಪ್ರೀಂಕೋರ್ಟ್ ಪ್ರಮಾಣವಚನ ಮುಖ್ಯನ್ಯಾಯಮೂರ್ತಿಯಾಗಿ ಸ್ವೀಕರಿಸಿದ ದಿನವೇ ನ್ಯಾಯಮೂರ್ತಿ ಸೂರ್ಯಕಾಂತ್ ಅವರು ಎರಡು ಗಂಟೆಗಳ ಕಾಲ 17 ಪ್ರಕರಣಗಳ ವಿಚಾರಣೆ ನಡೆಸಿದ್ದು ಒಂದು ಪ್ರಕರಣದ ತೀರ್ಪನ್ನೂ ಪ್ರಕಟಿಸಿದ್ದು ವಿಶೇಷವಾಗಿತ್ತು.

ರಾಷ್ಟ್ರಪತಿ ಭವನದಲ್ಲಿ ಸೋಮವಾರ ದೇವರ ಹೆಸರಿನಲ್ಲಿ ಹಿಂದಿ ಭಾಷೆಯಲ್ಲಿ ನೂತನ ಸಿಜೆಐಯಾಗಿ ಪ್ರಮಾಣವಚನ ಸ್ವೀಕರಿಸಿದ ಅವರು, ತುಸು ಸಮಯದ ನಂತರ 53ನೇ ಸಿಜೆಐಯಾಗಿಯೂ ಅಧಿಕಾರ ವಹಿಸಿಕೊಂಡರು.

ಆನಂತರ ಮುಖ್ಯ ನ್ಯಾಯಮೂರ್ತಿಯಾಗಿ ಸುಪ್ರೀಂಕೋರ್ಟ್‌ಗೆ ಆಗಮಿಸಿದ ಅವರು, ನ್ಯಾಯಾಲಯದ ಆವರಣದಲ್ಲಿರುವ ಮಹಾತ್ಮಾ ಗಾಂಧಿ ಹಾಗೂ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆಗಳಿಗೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದರು.

ಮೊದಲ ತೀರ್ಪು ಪ್ರಕಟ: ಆ ಬಳಿಕ ನ್ಯಾಯಾಲಯದ ಪಾರಂಪರಿಕಾ ಕೊಠಡಿಯಲ್ಲಿ ನ್ಯಾಯಮೂರ್ತಿಗಳಾದ ೯ಗಳಾದ ಜೋಯ್ಯಲ್ಯ ಬಾಗ್ನಿ ಹಾಗೂ ಆತುಲ್ ಎನ್ ಚಂರ್ದೂಕ್ರ ಅವರನ್ನೊಳಗೊಂಡ ಮೂವರು ನ್ಯಾಯಾಧೀಶರ ಪೀಠದ ಅಧ್ಯಕ್ಷತೆಯನ್ನೂ ವಹಿಸಿದರು.

ಮಧ್ಯಾಹ್ನ ವೇಳೆಗೆ ವಿಚಾರಣೆ ಆರಂಭವಾಗುತ್ತಿದ್ದಂತೆಯೇ ಖಾಸಗಿ ಸಂಸ್ಥೆಯ ವಿರುದ್ಧ ಹಿಮಾಚಲ ಪ್ರದೇಶ ಸರ್ಕಾರ ಸಲ್ಲಿಸಿದ್ದ ಅರ್ಜಿ ಕುರಿತು ತೀರ್ಪನ್ನೂ ಪ್ರಕಟಿಸಿದರು. ಈ ಸಂದರ್ಭದಲ್ಲಿ ವಕೀಲರುಗಳೂ ಒಳಗೊಂಡಂತೆ ನ್ಯಾಯಾಂಗದ ಹಲವು ಗಣ್ಯರು ಅವರನ್ನು ಅಭಿನಂದಿಸಿದರು.

ತುರ್ತು ವಿಚಾರಣೆಗೆ ಲಿಖಿತ ಚೀಟಿ ಸಲ್ಲಿಕೆ ಕಡ್ಡಾಯ: ಇದೇ ಸಂದರ್ಭದಲ್ಲಿ ತುರ್ತು ಪಟ್ಟಿಗೆ ವಿನಂತಿ ಸಲ್ಲಿಸುವುದಕ್ಕೆ ಸಂಬಂಧಿಸಿದ ನ್ಯಾಯಾಲಯದ ನಿಯಮದಲ್ಲೂ ತುಸು ಬದಲಾವಣೆ ಮಾಡಿದರು. ಅಸಾಧಾರಣ ಸಂದರ್ಭಗಳನ್ನು ಹೊರತುಪಡಿಸಿ ತುರ್ತುಪಟ್ಟಿಗೆ ವಿನಂತಿಗಳನ್ನು ಮೌಖಿಕ ಉಲ್ಲೇಖದ ಬದಲಿಗೆ ಲಿಖಿತವಾಗಿ ಉಲ್ಲೇಖಿಸುವ ಚೀಟಿ ಮೂಲಕ ನೀಡಬೇಕೆಂದು ಆದೇಶಿಸಿದರು.

ನೀವು ಯಾವುದೇ ತುರ್ತು ಪ್ರಸ್ತಾವ ಹೊಂದಿದ್ದರೆ ತುರ್ತು ಕಾರಣದೊಂದಿಗೆ ನಿಮ್ಮ ಪ್ರಸ್ತಾಪದ ಚೀಟಿಯನ್ನು ನೀಡಿದ್ದಲ್ಲಿ ರಿಜಿಸ್ಟ್ರಾ‌ರ್ ಅದನ್ನು ಪರಿಶೀಲಿಸುತ್ತಾರೆ. ಆ ವಿಷಯಗಳಲ್ಲಿ ತುರ್ತು ಅಂಶಗಳಿದ್ದರೆ ಮಾತ್ರ ಪೀಠ ಕೈಗೊಳ್ಳುತ್ತದೆ ಎಂದರು.

ಸಾಮಾನ್ಯವಾಗಿ ತುರ್ತು ವಿಚಾರಣೆ ಮಾಡಬೇಕಾದ ಸಂದರ್ಭದಲ್ಲಿ ಅಂತಹ ಪ್ರಕರಣಗಳನ್ನು ವಕೀಲರು ಸಿಜೆಐ ಮುಂದೆ ಪ್ರಸ್ತಾಪ ಮಾಡುತ್ತಾರೆ. ಆದರೆ, ಸಂಜೀವ ಖನ್ನಾ ಸಿಜೆಐ ಆಗಿದ್ದಾಗ ತುರ್ತುಪಟ್ಟಿಗೆ ಸೇರ್ಪಡೆ ಮಾಡುವ ಪ್ರಕರಣಗಳನ್ನು ಮೌಖಿಕವಾಗಿ ಪ್ರಸ್ತಾಪ ಮಾಡುವ ಪರಿಪಾಠವನ್ನು ನಿಲ್ಲಿಸಿದ್ದರು. ಆದರೆ ನ್ಯಾಯಮೂರ್ತಿ ಬಿ.ಆರ್ ಗವಾಯಿ ಸಿಜೆಐ ಆದಾಗ ತುರ್ತು ಪ್ರಕರಣಗಳನ್ನು ಮೌಖಿಕವಾಗಿ ಪ್ರಸ್ತಾಪ ಮಾಡುವ ಪರಿಪಾಠವನ್ನು ಮತ್ತೆ ಜಾರಿಗೆ ತಂದರು.

NO COMMENTS

LEAVE A REPLY

Please enter your comment!
Please enter your name here

Exit mobile version