Home ತಾಜಾ ಸುದ್ದಿ ಬಾಗಲಕೋಟೆಯಲ್ಲಿ ಆಲಿಕಲ್ಲು ಸಹಿತ ಮಳೆ

ಬಾಗಲಕೋಟೆಯಲ್ಲಿ ಆಲಿಕಲ್ಲು ಸಹಿತ ಮಳೆ

0

ಬಾಗಲಕೋಟೆ: ಶುಕ್ರವಾರ ರಾತ್ರಿ ಜಿಲ್ಲೆಯ ಹಲವೆಡೆ ಗಾಳಿ ಸಹಿತ ಆಲಿಕಲ್ಲು ಮಳೆ ಬಿದ್ದಿದೆ‌. ಜಿಲ್ಲಾ ಕೇಂದ್ರ ಬಾಗಲಕೋಟೆ, ಕಲಾದಗಿ, ಇಳಕಲ್ಲ ಸೇರಿ ಹಲವೆಡೆ ಭಾರೀ ಗಾಳಿ ಸಹಿತ ಮಳೆ ಆಗಿದೆ.
ರಾತ್ರಿ 8.30ರ ಹೊತ್ತಿಗೆ ಜೋರಾಗಿ ಗಾಳಿ ಬೀಸಲು ಆರಂಭಿಸಿತು. 9ಕ್ಕೆ ಆಲಿಕಲ್ಲು ಸಹಿತ ಜೋರಾದ ಮಳೆ ಶುರುವಾಯಿತು. ರಾತ್ರಿ ಕೆಲಸ ಮುಗಿಸಿಕೊಂಡು ಮನೆಗೆ ಹೋಗುತ್ತಿದ್ದ ಜನಕ್ಕೆ ಟಂಟಂ ಸೇರಿ ವಾಹನಗಳು ಸಿಗದೆ ಪರದಾಡುವಂತೆ ಆಯಿತು.
ಆಲಿಕಲ್ಲು ಮಳೆ ಆಗಿರುವುದರಿಂದ ತೋಟಗಾರಿಕೆ ಬೆಳೆಗಾರರು ಆತಂಕಕ್ಕೆ ಒಳಗಾಗಿದ್ದು, ಸದ್ಯ ಮಳೆಯಿಂದ ಯಾವುದೇ ಹಾನಿಯಾಗಿರುವ ಬಗ್ಗೆ ವರದಿ ಆಗಿಲ್ಲ.

Exit mobile version