Home News ರೈತ ಹೋರಾಟಗಾರರಿಗೆ ರೈಲ್ವೆ ಇಲಾಖೆಯಿಂದ ನೋಟಿಸ್

ರೈತ ಹೋರಾಟಗಾರರಿಗೆ ರೈಲ್ವೆ ಇಲಾಖೆಯಿಂದ ನೋಟಿಸ್

ಧಾರವಾಡ(ನವಲಗುಂದ): ೨೦೧೫ ರಲ್ಲಿ ರೈಲು ತಡೆ ನಡೆಸಿದ್ದ ಸಂದರ್ಭದಲ್ಲಿ ಸಾರ್ವಜನಿಕ ಆಸ್ತಿಗೆ ಹಾನಿ ಮಾಡಿದ ಆರೋಪದ ಮೇಲೆ ನವಲಗುಂದ ರೈತ ಹೋರಾಟಗಾರರಿಗೆ ರೈಲ್ವೆ ಇಲಾಖೆಯಿಂದ ಈಗ ನೋಟಿಸ್ ನೀಡಲಾಗಿದೆ.
೨೦೧೫ರಲ್ಲಿ ಕೇಂದ್ರ ಸರಕಾರದ ಗಮನ ಸೆಳೆಯಲು ಶಿಶುವಿನಹಳ್ಳಿಯಲ್ಲಿ ರೈಲು ತಡೆಯನ್ನು ಮಾಡಲಾಗಿತ್ತು. ಇದಕ್ಕೆ ಸಂಬಂಧಿಸಿದಂತೆ ಈಗ ನೋಟಿಸ್ ಬಂದಿದ್ದು. ನನ್ನನ್ನು ಸೇರಿ 7 ಜನ ಹೋರಾಟಗಾರರಿಗೆ ನೋಟಿಸ್ ಜಾರಿ ಮಾಡಲಾಗಿದೆ. ಹೋರಾಟಗಾರರ ಮೇಲೆ ನೋಟಿಸ್ ಜಾರಿ ಮಾಡಿದ್ದು ಎಷ್ಟು ಸರಿ ಎಂದು ರೈತ ಹೋರಾಟ ಒಕ್ಕೂಟದ ಅಧ್ಯಕ್ಷ ಲೋಕನಾಥ ಹೆಬಸೂರು ಪ್ರಶ್ನಿಸಿದ್ದಾರೆ.
ಇದು ಮಹದಾಯಿ ಕಳಸಾ ಬಂಡೂರಿ ಹೋರಾಟ ಹತ್ತಿಕ್ಕುವ ಹುನ್ನಾರ ಎಂದು ಆಪಾದಿದರು. ಭರಮಪ್ಪ ಕಾತರಕಿ, ಆರ್.ಎಂ.ನಾಯ್ಕರ, ದಿ.ವೆಂಕಣ್ಣ ಕೋನರಡ್ಡಿ, ಸುಭಾಶಚಂದ್ರಗೌಡ ಪಾಟೀಲ, ಹನುಮಂತಗೌಡ ಪಾಟೀಲ, ಕುತುಬ್ದೀನ್ ಖಾಜಿ ಅವರಿಗೆ ನೋಟಿಸ್ ಜಾರಿ ಮಾಡಲಾಗಿದ್ದು, ಸರಕಾರದ ಕ್ರಮವನ್ನು ನಾವು ಖಂಡಿಸಿದ್ದಾರೆ.

Exit mobile version