Home ಸಿನಿ ಮಿಲ್ಸ್ ಹೋಳಿ ಸಂಭ್ರಮದಲ್ಲಿ ‘ಟಾಕ್ಸಿಕ್’ ಮೊದಲ ಹಾಡು – ‘ತಬಾಹಿ’

ಹೋಳಿ ಸಂಭ್ರಮದಲ್ಲಿ ‘ಟಾಕ್ಸಿಕ್’ ಮೊದಲ ಹಾಡು – ‘ತಬಾಹಿ’

0
ಹೋಳಿ ಸಂಭ್ರಮದಲ್ಲಿ ‘ಟಾಕ್ಸಿಕ್’ ಮೊದಲ ಹಾಡು – ‘ತಬಾಹಿ’

ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್‌ ಅಭಿನಯದ ಬಹುನಿರೀಕ್ಷಿತ ‘ಟಾಕ್ಸಿಕ್’ ಚಿತ್ರದ ಮೊದಲ ಹಾಡು ‘ತಬಾಹಿ’ ಬಿಡುಗಡೆಗೊಂಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ. ‘ತಬಾಹಿ’ ಎಂಬ ಈ ಹಾಡು ರೊಮ್ಯಾಂಟಿಕ್ ಮೆಲೊಡಿಯಾಗಿ ಮೂಡಿ ಬಂದಿದ್ದು, ಯಶ್ ಹಾಗೂ ಕಿಯಾರಾ ಅಡ್ವಾಣಿ ಅವರ ಜೋಡಿ ಪ್ರೇಕ್ಷಕರ ಗಮನ ಸೆಳೆಯುತ್ತಿದೆ. ಸದ್ಯ ಲಿರಿಕಲ್ ಆಡಿಯೋ ಆವೃತ್ತಿ ಮಾತ್ರ ಬಿಡುಗಡೆಯಾಗಿದ್ದು, ವಿಡಿಯೋ ಸಾಂಗ್ ಕೂಡ ಶೀಘ್ರದಲ್ಲೇ ಬಿಡುಗಡೆಗೊಳ್ಳಬೇಕೆಂದು ಅಭಿಮಾನಿಗಳು ಆಗ್ರಹ ವ್ಯಕ್ತಪಡಿಸಿದ್ದಾರೆ.

‘ತಬಾಹಿ’ ಪದದ ಅರ್ಥವೇನು?: ‘ತಬಾಹಿ’ ಎಂಬುದು ಹಿಂದಿ ಹಾಗೂ ಉರ್ದು ಭಾಷೆಯಲ್ಲಿ ವ್ಯಾಪಕವಾಗಿ ಬಳಕೆಯಲ್ಲಿರುವ ಪದ. ಇದರ ಅರ್ಥ ‘ನಾಶ’, ‘ವಿನಾಶ’, ‘ವಿಪತ್ತು’ ಎಂಬುದಾಗಿದೆ. ಈ ಭಾವನಾತ್ಮಕ ಅಂಶವನ್ನು ಹಾಡಿನಲ್ಲಿ ಸೊಗಸಾಗಿ ಮೂಡಿಸಲಾಗಿದೆ.

ಇದನ್ನೂ ಓದಿ: CM ಬದಲಾವಣೆ ಗೊಂದಲಕ್ಕೆ ಹೈಕಮಾಂಡ್ ಸ್ಪಷ್ಟನೆ ಅಗತ್ಯ: ಸತೀಶ್ ಜಾರಕಿಹೊಳಿ

4 ನಿಮಿಷ 26 ಸೆಕೆಂಡ್ ಅವಧಿಯ ಈ ಹಾಡಿನಲ್ಲಿ ಸಂಗೀತದ ಅಬ್ಬರ ಜೋರಾಗಿದೆ. ಹಾಡಿಗೆ ವಿಶಾಲ್ ಮಿಶ್ರಾ ಸಂಗೀತ ಸಂಯೋಜನೆ ಮಾಡಿ ಹಾಡಿದ್ದಾರೆ. ಈ ಹಾಡಿಗೆ ಯೋಗರಾಜ್ ಭಟ್ ಸಾಹಿತ್ಯ ರಚಿಸಿದ್ದಾರೆ. ಹೋಳಿ ಹಬ್ಬದ ಸಂಭ್ರಮದ ನಡುವೆ ಬಿಡುಗಡೆಯಾದ ಈ ಹಾಡು ಅಭಿಮಾನಿಗಳ ಪ್ಲೇಲಿಸ್ಟ್‌ನಲ್ಲಿ ಸ್ಥಾನ ಪಡೆದಿದೆ.

ಚಿತ್ರದಲ್ಲಿನ ತಾರಾ ಬಳಗ: ‘ಟಾಕ್ಸಿಕ್’ ಚಿತ್ರವನ್ನು ಗೀತು ಮೋಹನ್ ದಾಸ್ ನಿರ್ದೇಶಿಸಿದ್ದಾರೆ. ಈ ಚಿತ್ರದಲ್ಲಿ ನಯನತಾರಾ, ರುಕ್ಮಿಣಿ ವಸಂತ್, ಹಾಗೂ ಕಿಯಾರಾ ಅಡ್ವಾಣಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಚಿತ್ರದಲ್ಲಿ ಒಟ್ಟು ಆರು ಹಾಡುಗಳಿದ್ದು, ಐವರು ಸಂಗೀತ ಸಂಯೋಜಕರು ಕೆಲಸ ಮಾಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಇದನ್ನೂ ಓದಿ: ಕೆಡಿಪಿ ಸಭೆಯಲ್ಲಿ ಗದ್ದಲ: ಸಭೆಯಿಂದ ಹೊರನಡೆದ ಶಾಸಕ ಸತೀಶ್ ಸೈಲ್

ಚಿತ್ರದ ಬಹುತೇಕ ಕೆಲಸ ಪೂರ್ಣಗೊಂಡಿದ್ದು, ಸೆನ್ಸಾರ್ ಪ್ರಕ್ರಿಯೆ ಶೀಘ್ರದಲ್ಲೇ ಪೂರ್ಣಗೊಳ್ಳಲಿದೆ ಎಂದು ಮೂಲಗಳು ತಿಳಿಸಿವೆ. ಮಾರ್ಚ್ 19 ರಂದು ಸಿನಿಮಾ ಬಿಡುಗಡೆಯಾಗಲಿದ್ದು, ಮೊದಲ ದಿನದ ಬಾಕ್ಸ್ ಆಫೀಸ್ ಕಲೆಕ್ಷನ್ ಬಗ್ಗೆ ಈಗಾಗಲೇ ಭಾರೀ ನಿರೀಕ್ಷೆ ವ್ಯಕ್ತವಾಗಿದೆ. ನಿರ್ಮಾಪಕರು ಶೀಘ್ರದಲ್ಲೇ ‘ತಬಾಹಿ’ ವಿಡಿಯೋ ಸಾಂಗ್ ಬಿಡುಗಡೆ ಮಾಡುವ ಸೂಚನೆ ನೀಡಿದ್ದಾರೆ.