Home ನಮ್ಮ ಜಿಲ್ಲೆ PDO ವಿರುದ್ಧ ಗ್ರಾಮಸ್ಥರ ಪ್ರತಿಭಟನೆ

PDO ವಿರುದ್ಧ ಗ್ರಾಮಸ್ಥರ ಪ್ರತಿಭಟನೆ

0

ಇಳಕಲ್: ತಾಲೂಕಿನ ಹಿರೇಸಿಂಗನಗುತ್ತಿ ಗ್ರಾಮದಲ್ಲಿ ಪಂಚಾಯತಿ ಗ್ರಾಮಾಭಿವೃದ್ಧಿ ಅಧಿಕಾರಿಯ ವಿರುದ್ಧ ಗ್ರಾಮಸ್ಥರು ದೊಡ್ಡ ಪ್ರಮಾಣದಲ್ಲಿ ಪ್ರತಿಭಟನೆಯನ್ನು ರವಿವಾರ ನಡೆಸಿದರು.

ಅಧಿಕಾರಿ ಸರಿಯಾಗಿ ಗ್ರಾಮದ ಪಂಚಾಯತಿ ಕಾರ್ಯಾಲಯಕ್ಕೆ ಆಗಮಿಸದೇ ಜನರಿಗೆ ತೊಂದರೆ ಕೊಡುತ್ತಾರೆ ನರೇಗಾ ಯೋಜನೆಯಡಿ ದುಡಿದ ಕಾರ್ಮಿಕರಿಗೆ ಕೂಲಿ ಕೊಡುವಲ್ಲಿ ಸತಾಯಿಸುವದು ಗ್ರಾಮಸ್ಥರ ಕೆಲಸಗಳನ್ನು ಮಾಡಲು ಮೀನಾಮೇಷ ಎಣಿಸುವದು ಹೀಗೆ ತೊಂದರೆ ಕೊಡುವ ಅಧಿಕಾರಿಯ ವಿರುದ್ಧ ಹರಿಹಾಯ್ದರು ‌ ಪ್ರತಿಭಟನೆಯಲ್ಲಿ ಗ್ರಾಮಸ್ಥರಾದ ದೊಡ್ಡಬಸವ ಹಿರೇಗೌಡರ ಸಿಖಂದರ ಕಲ್ಲಗುಡಿ ಪಂಚಯ್ಯ ಹಿರೇಮಠ ವಿನೋದ ಹೇರೂರ ಅಮರಯ್ಯ ಪತ್ರಿ ಮುತ್ತಯ್ಯ ಪತ್ರಿ ನರೇಗಾ ಕೆಲಸಗಾರರಾದ ಮಹಾಂತೇಶ ಭಂಗಿ ಅಂಬರೀಶ್ ಬಳೊಳಿ ಬಸಪ್ಪ ತೊಂಡಿಹಾಳ ಲಕ್ಷ್ಮಣ ಭಾವಿಕಟ್ಟಿ ಶಾಂತಮ್ಮ ಮೇರಾಖೋರ ಮಲ್ಲಮ್ಮ ಭಂಗಿ‌ ಮತ್ತಿತರರು ಉಪಸ್ಥಿತರಿದ್ದರು. ಇಳಕಲ್ ಗ್ರಾಮೀಣ ಪೋಲಿಸ್ ಠಾಣೆಯ ಪೋಲಿಸರು ಬಿಗಿ ಪೋಲಿಸ್ ಬಂದೋಬಸ್ತ್ ಮಾಡಿದ್ದರು.

Exit mobile version