Home ನಮ್ಮ ಜಿಲ್ಲೆ ಹಾವೇರಿ ಹಾವೇರಿ: ಬಕೆಟ್‌ನಲ್ಲಿ ಮುಳುಗಿ ಮಗು ಸಾವು…!

ಹಾವೇರಿ: ಬಕೆಟ್‌ನಲ್ಲಿ ಮುಳುಗಿ ಮಗು ಸಾವು…!

0

ಹಾವೇರಿ: ಮನೆಯ ಮುಂದೆ ಆಡುತ್ತಿದ್ದ ಒಂದು ವರ್ಷದ ಮಗು ನೀರಿನ ಬಕೆಟ್‌ನಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ಇಲ್ಲಿನ ಶಿವಬಸವ ನಗರದಲ್ಲಿ ನಡೆದಿದೆ.

ದಕ್ಷಿತ ರವಿ ಯಳಂಬಲ್ಲಿಮಠ ಎಂಬ ಒಂದು ವರ್ಷ ಎರಡು ತಿಂಗಳು ಮಗು ರವಿವಾರ ಬೆಳಗ್ಗೆ ಮನೆಯ ಮುಂದೆ ಆಡುತ್ತಿದ್ದಾಗ ನೀರು ತುಂಬಿಸಿಟ್ಟಿದ್ದ ಬಕೆಟ್‌ನೊಳಗೆ ಆಕಸ್ಮಿಕವಾಗಿ ತಲೆ ಕೆಳಗಾಗಿ ನೀರಿನಲ್ಲಿ ಮುಳುಗಿದ್ದಾನೆ. ತಕ್ಷಣ ಗಮನಿಸಿದ ಪಾಲಕರು ನೋಡಿದಾಗ ಮಗು ಪ್ರಜ್ಞೆ ತಪ್ಪಿದೆ. ತಕ್ಷಣ ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಆದರೆ, ಚಿಕಿತ್ಸೆ ಫಲಿಸದೇ ಗುರುವಾರ ರಾತ್ರಿ ಮೃತಪಟ್ಟಿದ್ದಾನೆ ಎಂದು ಮೃತನ ತಂದೆ ರವಿ ಯಳಂಬ್ಲಿಮಠ ಶಹರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

NO COMMENTS

LEAVE A REPLY

Please enter your comment!
Please enter your name here

Exit mobile version