Home ನಮ್ಮ ಜಿಲ್ಲೆ ಹಾವೇರಿ ವಂಶವೃಕ್ಷ ಪೂರೈಸಲು ಲಂಚಕ್ಕೆ ಬೇಡಿಕೆ: ಉಪತಹಸೀಲ್ದಾರ ಲೋಕಾ ಬಲೆಗೆ

ವಂಶವೃಕ್ಷ ಪೂರೈಸಲು ಲಂಚಕ್ಕೆ ಬೇಡಿಕೆ: ಉಪತಹಸೀಲ್ದಾರ ಲೋಕಾ ಬಲೆಗೆ

0

ಹಾವೇರಿ: ವಂಶವೃಕ್ಷ ಪೂರೈಸಲು ಲಂಚಕ್ಕೆ ಬೇಡಿಕೆ ಇಟ್ಟು ಮುಂಗಡವಾಗಿ 2ಸಾವಿರ ರೂ., ಹಣವನ್ನು ಸ್ವೀಕರಿಸುತ್ತಿದ್ದ ನಾಡ ಕಚೇರಿಯ ಉಪ ತಹಸೀಲ್ದಾರ್ ಹಾಗೂ ಕಂಪ್ಯೂಟರ್ ಆಪರೇಟರ್ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿರುವ ಘಟನೆ ನಡೆದಿದೆ.

ಹಾನಗಲ್ಲ ತಾಲೂಕು ಬಮ್ಮನಹಳ್ಳಿಯ ನಾಡಕಚೇರಿ ಉಪ ತಹಸೀಲ್ದಾರ ನಾಗರಾಜ ಸೂರ್ಯವಂಶಿ ಹಾಗೂ ಕಂಪ್ಯೂಟರ್ ಆಪರೇಟರ್ ಕಿರಣ್ ಮುದಕಣ್ಣನವರ ಬಂಧಿಸಲಾಗಿದೆ. ದೂರುದಾರ ಹಾನಗಲ್ಲ ತಾಲೂಕು ಯಳವಟ್ಟಿಯ ಗಂಗಾಧರ ಕ್ಯಾತನಕೇರಿ ಎಂಬುವವರು ತಮ್ಮ ಸಂಬಂಧಿಕರಾದ ದಯಾನಂದ ರುದ್ರಪ್ಪ ಯಲಿಗಾರ ಅವರ ವಂಶವೃಕ್ಷ ಪಡೆಯಲು ಬಮ್ಮನಹಳ್ಳಿ ನಾಡಕಚೇರಿಯಲ್ಲಿ ಅರ್ಜಿ ಸಲ್ಲಿಸಿದ್ದಾಗ, ಆಪಾದಿತರು ಮೊದಲಿಗೆ 15 ಸಾವಿರ ರೂ.,ಗೆ ಬೇಡಿಕೆ ಇಟ್ಟು, ಮುಂಗಡವಾಗಿ 2000 ರೂ., ಲಂಚವನ್ನು ಪಡೆಯುತ್ತಿದ್ದಾಗ ಲೋಕಾಯುಕ್ತ ಅಧಿಕಾರಿಗಳು ಯಶಸ್ವಿಯಾಗಿ ಟ್ರಾಯಪ್ ಮಾಡಿದ್ದಾರೆ.

ಈ ಕುರಿತು ಹೆಚ್ಚಿನ ತನಿಖೆ ಮುಂದುವರೆಸಿದ್ದಾರೆ. ದಾವಣಗೆರಿ ಕರ್ನಾಟಕ ಲೋಕಾಯುಕ್ತ ಪೊಲೀಸ್ ಅಧೀಕ್ಷಕ ಎಂ.ಎಸ್ ಕೌಲಾಪುರೆ ಮಾರ್ಗದರ್ಶನದಲ್ಲಿ ಕಾರ್ಯಾಚರಣೆ ಕೈಗೊಳ್ಳಲಾಗಿತ್ತು. ಲೋಕಾಯುಕ್ತ ಡಿವೈಎಸ್‌ಪಿ ಮಧುಸೂದನ ಸಿ. ನೇತೃತ್ವದಲ್ಲಿ ತನಿಖಾಧಿಕಾರಿ ಪೊಲೀಸ್ ನಿರೀಕ್ಷಕ ವಿಶ್ವನಾಥ ಕಬ್ಬೂರಿ, ದಾದಾವಲಿ ಕೆ.ಎಚ್., ಸೇರಿದಂತೆ ಸಿಬ್ಬಂದಿ ವರ್ಗದವರು ಭಾಗಿಯಾಗಿದ್ದರು.

NO COMMENTS

LEAVE A REPLY

Please enter your comment!
Please enter your name here

Exit mobile version