Home ನಮ್ಮ ಜಿಲ್ಲೆ ಧಾರವಾಡ ಸೋನಿಯಾ ಅವರೊಂದಿಗೂ ಏಕವಚನದಲ್ಲೇ ಮಾತಾಡ್ತೀರಾ: ಜೋಶಿ

ಸೋನಿಯಾ ಅವರೊಂದಿಗೂ ಏಕವಚನದಲ್ಲೇ ಮಾತಾಡ್ತೀರಾ: ಜೋಶಿ

0

ಹುಬ್ಬಳ್ಳಿ: ಪ್ರಧಾನ ಮಂತ್ರಿ, ರಾಷ್ಟ್ರಪತಿಗೆ ಹಾಗೂ ಪೊಲೀಸ್ ಅಧಿಕಾರಿಗಳಿಗೆ ಏಕವಚನದಲ್ಲಿ ಮಾತನಾಡುವ ಸಿದ್ದರಾಮಯ್ಯ, ಸೋನಿಯಾ ಗಾಂಧಿ ಅವರೊಟ್ಟಿಗೂ ಏಕವಚನದಲ್ಲೇ ಮಾತನಾಡುತ್ತಾರಾ ಎಂದು ಪ್ರಶ್ನಿಸಿದ ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಸೋನಿಯಾ ಅವರೊಂದಿಗೆ ಏಕವಚನದಲ್ಲಿ ಮಾತನಾಡಿದ ಮರುಕ್ಷಣವೇ ಸಿದ್ದರಾಮಯ್ಯ ಸಿಎಂ ಸ್ಥಾನದಿಂದ ಕೆಳಗಿಳಿಯಬೇಕಾಗುತ್ತದೆ ಎಂದರು.

ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಾರ್ವಜನಿಕ ಜೀವನದಲ್ಲಿರುವವರು ಅದರಲ್ಲೂ ಎರಡೆರಡು ಬಾರಿ ಸಿಎಂ, ಪಕ್ಷದ ನಾಯಕರಾದವರು ನಾಲಿಗೆಯ ಮೇಲೆ ಹಿಡಿತ ಇಟ್ಟುಕೊಳ್ಳಬೇಕು. ಅವರಿಗಿಂತ ಕೆಟ್ಟ ಭಾಷೆ ಬಳಸಲು ನಮಗೂ ಬರುತ್ತದೆ. ಆದರೆ, ಅದು ನಮ್ಮ ಸಂಸ್ಕೃತಿಯಲ್ಲ. ಇದೇ ಕಾರಣಕ್ಕೆ ದೇಶದ ಜನ ಕಾಂಗ್ರೆಸ್ ಪಕ್ಷವನ್ನು ಮೂಲೆಗುಂಪು ಮಾಡಿದ್ದಾರೆ. ಇನ್ನಾದರೂ ಇವರು ನಡುವಳಿಕೆ ಸುಧಾರಿಸಿಕೊಳ್ಳದಿದ್ದರೆ ಅಡ್ರೆಸ್ ಇಲ್ಲದಂತೆ ಆಗುತ್ತಾರೆ ಎಂದು ಟೀಕಿಸಿದರು.

ರಾಜ್ಯದ ಅಭಿವೃದ್ಧಿಯ ಬಗ್ಗೆ ಪ್ರಶ್ನಿಸಿದಾಗ ನೇರವಾಗಿ ಕೇಂದ್ರ ಸರ್ಕಾರದ ಕಡೆಗೆ ಬೊಟ್ಟು ಮಾಡುವ ಕಾಂಗ್ರೆಸ್ ನಾಯಕರು, 2004-2014ರ ವರೆಗೆ ಕೇಂದ್ರದಲ್ಲಿದ್ದ ಕಾಂಗ್ರೆಸ್, ರಾಜ್ಯಕ್ಕೆ ಕೇವಲ 81,795 ಕೋಟಿ ರೂ. ಅನುದಾನ ನೀಡಿತ್ತು. ಆದರೆ, 2014-2024ರ ವರೆಗೆ ನಮ್ಮ ಸರ್ಕಾರ ರಾಜ್ಯಕ್ಕೆ 2.93 ಲಕ್ಷ ಸಾವಿರ ಕೋಟಿ ಅನುದಾನ ನೀಡಿದೆ.

ಅವರ ಅವಧಿಗೆ ಹೋಲಿಸಿದರೆ ಶೇ. 273ರಷ್ಟು ಹೆಚ್ಚು ಅನುದಾನ ಒದಗಿಸಿದೆ ಎಂಬುದನ್ನು ನೆನಪಿನಲ್ಲಿಟ್ಟುಕೊಳ್ಳಬೇಕು. ರಾಜ್ಯದ ರಸ್ತೆಯಗಳಲ್ಲಿನ ತಗ್ಗು-ಗುಂಡಿಗಳನ್ನು ಮುಚ್ಚಿಸಲಾಗದ ನಿರ್ಲಜ್ಜ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಕೇಂದ್ರ ಸರ್ಕಾರದ ಬಗ್ಗೆ ಮಾತನಾಡುವ ಯೋಗ್ಯತೆ ಇಲ್ಲ ಎಂದು ಕಿಡಿ ಕಾರಿದರು.

ಕಾಂಗ್ರೆಸ್ ಪಕ್ಷದವರಿಗೆ ಯಾವುದೇ ಉದ್ಯೋಗ ಇಲ್ಲ. ಕೇವಲ ಟೀಕೆ, ಟಿಪ್ಪಣೆ ಮಾಡುವುದೇ ಅವರ ಉದ್ಯೋಗ. ಕೆ.ಎನ್. ರಾಜಣ್ಣ ಹೇಳೀದಂತೆ ನವೆಂಬರ್ ಕ್ರಾಂತಿ ಆಗಲಿದೆ. ಕಾಂಗ್ರೆಸ್ ಪಕ್ಷದಲ್ಲಿ ಏನೂ ಸರಿಯಾಗಿಲ್ಲ. ಆಡಳಿತಾತ್ಮಕವಾಗಿ ಅಧೋಗತಿಗೆ ಇಳಿದಿರುವ ರಾಜ್ಯ ಸರ್ಕಾರಕ್ಕೆ ರಾಜಕೀಯ ಅಸ್ಥಿತರೆ ಎದುರಾಗಿದೆ ಎಂದು ತಿಳಿಸಿದರು.

NO COMMENTS

LEAVE A REPLY

Please enter your comment!
Please enter your name here

Exit mobile version