ಹುಬ್ಬಳ್ಳಿ: ಹುಬ್ಬಳ್ಳಿಯ ಶ್ರೀ ಸಿದ್ಧಾರೂಢ ಸ್ವಾಮಿ ರೈಲ್ವೆ ನಿಲ್ದಾಣದ ಪ್ಲಾಟ್ ಫಾರ್ಮ್‌ನಲ್ಲಿ ಅಂದಾಜು 11 ಲಕ್ಷ ರೂ ಮೊತ್ತದ 11 ಕೆ.ಜಿ ಗಾಂಜಾ ಪತ್ತೆಯಾಗಿದೆ. ಶನಿವಾರ ಪ್ಲಾಟ್ ಫಾರ್ಮ್ ನಲ್ಲಿ ರೈಲ್ವೆ ಸುರಕ್ಷಾ ದಳದ ಅಧಿಕಾರಿಗಳು ಮತ್ತು ಸಿಬ್ಬಂದಿ ಪರಿಶೀಲನೆ ನಡೆಸಿದ ವೇಳೆ ವಾರಸುದಾರರಿಲ್ಲದ ಒಂದು ದೊಡ್ಡ ಬ್ಯಾಗ್ ಕಂಡಿದೆ.
ಅದನ್ನು ಬಿಚ್ಚಿ ಪರಿಶೀಲನೆ ನಡೆಸಿದಾಗ 10 ಬಂಡಲ್ ನಲ್ಲಿ 11 ಕೆಜಿ ಇರುವುದು ಪತ್ತೆಯಾಗಿದೆ. ವಶಕ್ಕೆ ಪಡೆದ ಆರ್ ಪಿ ಎಫ್ ಅಧಿಕಾರಿಗಳು ಧಾರವಾಡ ಜಿಲ್ಲಾ ಅಬಕಾರಿ ಇನ್ ಸ್ಪೆಕ್ಟರ್ ಗೆ ಹಸ್ತಾಂತರಿಸಿದ್ದಾರೆ. ಅಬಕಾರಿ ಇನ್ ಸ್ಪೆಕ್ಟರ್ ದೂರು ದಾಖಲಿಸಿಕೊಂಡಿದ್ದಾರೆ.
ಪತ್ತೆ ಮಾಡಿದ ತಂಡ : ಈ ಅಪಾರ ಮೊತ್ತದ ಗಾಂಜಾವನ್ನು ಆರ್ ಪಿ ಎಫ್ ನ ಎಸ್ ಐ ಅಭಿಷೇಕರೆಡ್ಡಿ, ಎಎಸ್ ಐ ಎಂ.ಜಿ. ನಾಯಕ, ಹೆಡ್ ಕಾನ್ ಸ್ಟೇಬಲ್ ಎಂ. ಗೋಪಾಲ್, ಕಾನ್ ಸ್ಟೇಬಲ್ ಗಳಾದ ಸಿ.ವಿ ಬಂಗಾರಿ, ಎಸ್.ಎಂ ರಫಿ, ಆರ್ ಪಿಎಫ್ ಶ್ವಾನ ದಳದ ಹೆಡ್ ಕಾನ್ ಸ್ಟೇಬಲ್ ಗಳಾದ ಎಚ್.ಎಫ್ ಕಕಣಿ, ಎಚ್ಎಂ. ಚವ್ಹಾಣ ಅವರನ್ನೊಳಗೊಂಡ ತಂಡವು ಪತ್ತೆ ಮಾಡಿದೆ.