ಹುಬ್ಬಳ್ಳಿ: ಹಳೆ ಜಗಳದ ಸಂದಾನಕ್ಕೆ ಸೇರಿದಾಗ ಮತ್ತೇ ಜಗಳ ನಡೆದು ಓರ್ವನಿಗೆ ನಾಲ್ವರು ಸೇರಿ ಚಾಕುವಿನಿಂದ ಇರಿದ ಘಟನೆ ನಗರದ ಬೆಂಡಿಗೇರಿ ಪೊಲೀಸ್ ಠಾಣೆ ವ್ತಾಪ್ತಿಯಲ್ಲಿ ನಡೆದಿದೆ.
ಘಟನೆಯಲ್ಲಿ ನಗರದ ಅಲ್ತಾಫ್ ಎಂಬಾತ ಗಾಯಗೊಂಡಿದ್ದು, ಕೆಎಂಸಿಆರ್‌ಐನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅಲ್ತಾಫ್ ಮತ್ತು ಜಾವೇದ ಎಂಬುವರ ನಡುವೆ ಹಿಂದೆ ಜಗಳ ನಡೆದಿದೆ. ಆ ಕುರಿತು ಸಂದಾನ ಮಾಡಿಕೊಳ್ಳಲು ಯಲ್ಲಾಪುರ ಓಣಿಯಲ್ಲಿ ಸೇರಿದ್ದರು.
ಈ ವೇಳೆ ಮತ್ತೇ ಜಗಳ ನಡೆದು, ಅಲ್ತಾಫ್ ಎಂಬುವನಿಗೆ ಬಲ ಪಕ್ಕೆ ಸೇರಿದಂತೆ ವಿವಿಧೆಡೆ ಚಾಕುವಿನಿಂದ ಇರಿದಿದ್ದು, ತೀವ್ರವಾಗಿ ಗಾಯಗೊಂಡಿದ್ದಾನೆ. ಬೆಂಡಿಗೇರಿ ಠಾಣೆ ಪೊಲೀಸರು ಪರಿಶೀಲನೆ ನಡೆಸಿದ್ದಾರೆ.