Home ನಮ್ಮ ಜಿಲ್ಲೆ ಮಾನಸಿಕ ಅಸ್ವಸ್ಥೆ ಕೆರೆಗೆ ಬಿದ್ದು ಸಾವು

ಮಾನಸಿಕ ಅಸ್ವಸ್ಥೆ ಕೆರೆಗೆ ಬಿದ್ದು ಸಾವು

0

ರಬಕವಿ-ಬನಹಟ್ಟಿ: ಸಿಜೇರಿಯನ್‌ದಿಂದ ಮೂರು ಮಕ್ಕಳನ್ನು ಹೆತ್ತಿದ್ದ ಮಹಿಳೆಯೋರ್ವಳು ಖಿನ್ನತೆಗೊಳಗಾಗಿ ರಬಕವಿ-ಬನಹಟ್ಟಿ ತಾಲೂಕಿನ ಹೊಸೂರಿನ ಶಾಂತಿ ನಗರಕ್ಕೆ ತೆರಳುವ ಮಧ್ಯದ ಹಳ್ಳದಲ್ಲಿ ಬಿದ್ದು ಸಾವನ್ನಪ್ಪಿರುವ ಘಟನೆ ರವಿವಾರ ಬೆಳಗ್ಗೆ ನಡೆದಿದೆ.
ಮೃತಳನ್ನು ಜ್ಯೋತಿ ಮಲ್ಲಪ್ಪ ಕುಂಬಾರ(೩೦) ಎಂದು ಗುರುತಿಸಲಾಗಿದೆ. ವಿಷಯ ತಿಳಿದ ಪೊಲೀಸರು ಸ್ಥಳಕ್ಕೆ ಆಗಮಿಸಿ ಶವವನ್ನು ಹಳ್ಳದಿಂದ ಮೇಲೆತ್ತಿ ತಂದಾಗ ಮೃತಳ ಗುರುತು ಪತ್ತೆಯಾಗಿದೆ. ಈಕೆ ಕಳೆದೆರಡು ದಿನಗಳಿಂದ ತೀವ್ರ ಮಾನಸಿಕ ಅಸ್ವಸ್ಥಳಾಗಿದ್ದಳು. ರವಿವಾರ ನಸುಕಿನ ಜಾವ ಮನೆಯಿಂದ ಹೊರ ಬಂದವಳು ಹಳ್ಳದಲ್ಲಿ ಬಿದ್ದು ಸಾವನ್ನಪ್ಪಿದ್ದಾರೆಂದು ದೂರಿನಲ್ಲಿ ದಾಖಲಾಗಿದೆ. ಈ ಕುರಿತು ಬನಹಟ್ಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Exit mobile version