Home ನಮ್ಮ ಜಿಲ್ಲೆ ದಾವಣಗೆರೆ ಕೋಡಿಹಳ್ಳಿ ವಿರುದ್ಧ ಕಪ್ಪುಪಟ್ಟಿ ಪ್ರದರ್ಶಿಸಿದ ರೈತರು

ಕೋಡಿಹಳ್ಳಿ ವಿರುದ್ಧ ಕಪ್ಪುಪಟ್ಟಿ ಪ್ರದರ್ಶಿಸಿದ ರೈತರು

0

ದಾವಣಗೆರೆ: ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ ವಿರುದ್ಧ ರೈತ ಸಂಘ ಹೆಚ್.ಆರ್ ಬಸವರಾಜಪ್ಪ ಬಣದ ಕೆಲ ರೈತರು ಕೈಗೆ ಕಪ್ಪುಪಟ್ಟಿ ಧರಿಸಿ, ಧಿಕ್ಕಾರ ಕೂಗಿದ ಘಟನೆ ಗುರುವಾರ ನಗರದ ಎಪಿಎಂಸಿ ಆವರಣದಲ್ಲಿ ನಡೆದಿದ್ದು, ಎರಡೂ ಬಣದ ರೈತರ ನಡುವೆ ವಾಗ್ವಾದ ತೀವ್ರಗೊಂಡು, ಕೈ ಕೈ ಮಿಲಾಯಿಸುವ ಹಂತಕ್ಕೂ ತಲುಪಿತ್ತು.
ಈ ಸಂದರ್ಭದಲ್ಲಿ ಎರಡೂ ಬಣದ ರೈತರ ನಡುವೆ ತೀವ್ರ ವಾಗ್ವಾದ ನಡೆದು, ಪರಿಸ್ಥಿತಿ ತಾರಕಕ್ಕೇರುವ ಹಂತ ತಲುಪುತ್ತಿದ್ದಂತೆ ಪೊಲೀಸರು ಮಧ್ಯೆ ಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಿದರು.
ಗುರುವಾರ ರೈತರ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಒತ್ತಾಯಿಸಿ ಕೋಡಿಹಳ್ಳಿ ಚಂದ್ರಶೇಖರ್ ನೇತೃತ್ವದಲ್ಲಿ ರೈತ ಸಂಘದ ರಾಜ್ಯ ಸಮಿತಿ ಸಭೆ ಹಾಗೂ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲು ಕೋಡಿಹಳ್ಳಿ ನಗರಕ್ಕೆ ಆಗಮಿಸಿದ್ದಾರೆಂಬ ಸುದ್ದಿ ತಿಳಿದ ಮತ್ತೊಂದು ರೈತ ಸಂಘದ (ಹೆಚ್.ಆರ್. ಬಸವರಾಜಪ್ಪ ಬಣ) ಕೆಲ ರೈತ ಸದಸ್ಯರು, ಎಪಿಎಂಸಿ ಆವರಣಕ್ಕೆ ಬಂದು, ಕೋಡಿಹಳ್ಳಿ ಹಣ ಲೂಟಿ ಹೊಡಿದಿದ್ದಾರೆ ಎಂದು ಆರೋಪಿಸಿ ಅವರ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

Exit mobile version