Home ಸುದ್ದಿ ರಾಜ್ಯ ಜ್ಞಾನ ಭಾರತಮ್ ಮಿಶನ್: ರಾಜ್ಯ ಮುಖ್ಯ ಸಂಚಾಲಕರಾಗಿ ಡಾ.ಬಿ. ಗೋಪಾಲಾಚಾರ್ಯ

ಜ್ಞಾನ ಭಾರತಮ್ ಮಿಶನ್: ರಾಜ್ಯ ಮುಖ್ಯ ಸಂಚಾಲಕರಾಗಿ ಡಾ.ಬಿ. ಗೋಪಾಲಾಚಾರ್ಯ

0

ನವದೆಹಲಿ/ಬೆಂಗಳೂರು: ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಮಹತ್ವಾಕಾಂಕ್ಷೆಯ ‘ಜ್ಞಾನ ಭಾರತಮ್ ಮಿಶನ್’ ಯೋಜನೆಗೆ ಕರ್ನಾಟಕ ರಾಜ್ಯ ಮುಖ್ಯಸಂಚಾಲಕರಾಗಿ ವಾದಿರಾಜ ಸಂಶೋಧನ ಪ್ರತಿಷ್ಠಾನದ ನಿರ್ದೇಶಕರಾದ ಡಾ. ಬಿ. ಗೋಪಾಲಾಚಾರ್ಯರು ಆಯ್ಕೆಯಾಗಿದ್ದಾರೆ. ಈ ಆಯ್ಕೆ ರಾಜ್ಯಕ್ಕೆ ದೊರೆತಿರುವ ಗೌರವ ಎಂದು ವಿದ್ವಾಂಸರು ತಿಳಿಸಿದ್ದಾರೆ.

ಪ್ರಧಾನಿ ಮೋದಿ ಅವರು ನವೆಂಬರ್ 12 ರಂದು ದೆಹಲಿ ವಿಜ್ಞಾನ ಭವನದಲ್ಲಿ ಈ ಬೃಹದಾಕಾರದ ಮಿಷನ್‌ಗೆ ಅಧಿಕೃತ ಚಾಲನೆ ನೀಡಿದ್ದರು. ದೇಶದ ಜ್ಞಾನ ಪರಂಪರೆಯನ್ನು ಸಂರಕ್ಷಿಸುವ ಮಹೋದ್ದೇಶ ಹೊಂದಿರುವ ಈ ಯೋಜನೆ ಸಂಸ್ಕೃತಿ ಮಂತ್ರಾಲಯದ ಅಧೀನದಲ್ಲಿ ಜಾರಿಗೊಳ್ಳುತ್ತಿದೆ.

ದೇಶ–ವಿದೇಶಗಳ ಒಂದು ಕೋಟಿ ಹಸ್ತಪ್ರತಿಗಳ ಡಿಜಿಟಲೀಕರಣ ಗುರಿ: ‘ಜ್ಞಾನ ಭಾರತಮ್ ಮಿಶನ್‌’ ಅಡಿ ದೇಶದ ವಿವಿಧ ಭಾಗಗಳಲ್ಲಿ, ಸೇರಿದಂತೆ ವಿದೇಶಗಳಲ್ಲಿ ಹರಡಿಕೊಂಡಿರುವ ಸುಮಾರು ಒಂದು ಕೋಟಿ ಹಸ್ತಪ್ರತಿಗಳನ್ನು ಡಿಜಿಟಲೀಕರಿಸುವುದೇ ಮುಖ್ಯ ಉದ್ದೇಶ.
ಇದು ತಾಂತ್ರಿಕ, ಆರ್ಥಿಕವಾಗಿ ಬಹು ವೆಚ್ಚದ ಯೋಜನೆಯಾಗಿದ್ದು, ಭಾರತೀಯ ಜ್ಞಾನ ಸಂಗ್ರಹವನ್ನು ಭವಿಷ್ಯದ ಪೀಳಿಗೆಗಳಿಗೆ ಸುರಕ್ಷಿತವಾಗಿ ಸಂರಕ್ಷಿಸುವ ಕಾರ್ಯವಾಗಿದೆ.

ರಾಜ್ಯಗಳಿಗೆ ಮುಖ್ಯಸಂಚಾಲಕರ ನೇಮಕ—ಕರ್ನಾಟಕಕ್ಕೆ ಗೋಪಾಲಾಚಾರ್ಯರ ಗೌರವ: ಈ ಮಹತ್ವದ ಯೋಜನೆಗಾಗಿ ಪ್ರತಿಯೊಂದು ರಾಜ್ಯಕ್ಕೂ ಮುಖ್ಯ ಸಂಚಾಲಕರನ್ನು ನೇಮಕ ಮಾಡಲಾಗುತ್ತಿದೆ. ಅದರ ಭಾಗವಾಗಿ, ಕರ್ನಾಟಕ ರಾಜ್ಯದ ಮುಖ್ಯಸಂಚಾಲಕರಾಗಿ ಡಾ. ಬಿ. ಗೋಪಾಲಾಚಾರ್ಯರನ್ನು ಆಯ್ಕೆ ಮಾಡಲಾಗಿದೆ.

ಡಾ. ಗೋಪಾಲಾಚಾರ್ಯರು ಹಸ್ತಪ್ರತಿ ಸಂಶೋಧನೆ ಮತ್ತು ಸಂರಕ್ಷಣಾ ಕ್ಷೇತ್ರದಲ್ಲಿ ದೀರ್ಘ ಅನುಭವ ಹೊಂದಿದ್ದು, ವಾದಿರಾಜ ಸಂಶೋಧನ ಪ್ರತಿಷ್ಠಾನದ ಮೂಲಕ ಅನೇಕ ಪುರಾತನ ಗ್ರಂಥಗಳ ಪುನರುದ್ಧಾರ ಮತ್ತು ಸಂಪಾದನಾ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ.

ಕರ್ನಾಟಕದ ಹಸ್ತಪ್ರತಿ ಸಂರಕ್ಷಣೆಗೆ ಹೊಸ ಚೈತನ್ಯ: ಈ ನೇಮಕದೊಂದಿಗೆ ಕರ್ನಾಟಕದ ಹಸ್ತಪ್ರತಿ ಸಂಗ್ರಹಗಳನ್ನು ಗುರುತಿಸುವುದು, ಡಿಜಿಟಲ್ ದಾಖಲಾತಿ ಮಾಡುವುದು, ಸಂರಕ್ಷಣಾ ಕೇಂದ್ರಗಳ ಚಟುವಟಿಕೆಯನ್ನು ಮಾರ್ಗದರ್ಶಿಸುವುದು, ಕೇಂದ್ರ ಮಿಷನ್‌ನೊಂದಿಗೆ ಸಂಯೋಜನೆ ಮಾಡುವುದು ಸೇರಿದಂತೆ ಹಲವು ಪ್ರಮುಖ ಜವಾಬ್ದಾರಿಗಳು ಗೋಪಾಲಾಚಾರ್ಯರ ಮೇಲೆ ಬಂದಿದೆ.

ರಾಜ್ಯದ ಪುರಾತನ ಗ್ರಂಥಗಳು, ಮಠ–ಮಠಾಧೀಶರ ಸಂಗ್ರಹಗಳು, ವಿಶ್ವವಿದ್ಯಾಲಯಗಳ ಹಸ್ತಪ್ರತಿ ಕೇಂದ್ರಗಳು, ಖಾಸಗಿ ಸಂಗ್ರಹಗಳು ಇವುಗಳನ್ನು ದೇಶದ ಡಿಜಿಟಲ್ ಜ್ಞಾನ ಭಂಡಾರಕ್ಕೆ ಸೇರಿಸಲು ಈ ಮಿಷನ್ ಮಹತ್ತರ ಕಾರ್ಯಸಾಧನೆಗಾಗಲಿದೆ.

NO COMMENTS

LEAVE A REPLY

Please enter your comment!
Please enter your name here

Exit mobile version