Home ನಮ್ಮ ಜಿಲ್ಲೆ ಕಾಂಗ್ರೆಸ್ ಹೊರತು ಬೇರೆ ಬೆಂಬಲಿಸಲ್ಲ

ಕಾಂಗ್ರೆಸ್ ಹೊರತು ಬೇರೆ ಬೆಂಬಲಿಸಲ್ಲ

0

ಬನಹಟ್ಟಿ: ಈಚೆಗೆ ಬನಹಟ್ಟಿಯಲ್ಲಿ ನಡೆದ ಹಟಗಾರ ಸಮಾಜದ ಬೃಹತ್ ಸಭೆಯಲ್ಲಿ ಪಕ್ಷಾತೀತವಾಗಿ ಸೇರಿದ್ದ ರಾಜಕೀಯ ಸಭೆಯಲ್ಲಿ ಬಿಜೆಪಿ ಪಕ್ಷದಿಂದ ತೇರದಾಳ ವಿಧಾನಸಭಾ ಕ್ಷೇತ್ರದಿಂದ ನೇಕಾರ ಮುಖಂಡ ರಾಜೇಂದ್ರ ಅಂಬಲಿಯವರಿಗೆ ಪಕ್ಷ ಬಿಟ್ಟು ಬೆಂಬಲಿಸುವುದಾಗಿ ಹೇಳಿದ್ದ ಕಾಂಗ್ರೆಸ್ ಪಕ್ಷದ ನಗರ ಬ್ಲಾಕ್ ಅಧ್ಯಕ್ಷ ರಾಜು ಭದ್ರನ್ನವರ ಇದೀಗ ಕಾಂಗ್ರೆಸ್ ಪಕ್ಷ ಹೊರತುಪಡಿಸಿ ಬೇರೆ ಪಕ್ಷದಿಂದ ಸಮುದಾಯದಿಂದ ಕಣಕ್ಕಿಳಿದರೂ ಬೆಂಬಲಿಸುವ ಪ್ರಮೇಯವೇಯಿಲ್ಲವೆಂದು ಸ್ಪಷ್ಟಪಡಿಸಿದರು. ಕಾಂಗ್ರೆಸ್ ಪಕ್ಷದಿಂದಲೂ ನೇಕಾರ ಸಮುದಾಯದಿಂದ ಕಣಕ್ಕಿಳಿಯುವಲ್ಲಿ ಆಕಾಂಕ್ಷಿಯಾಗಿದ್ದಾರೆ. ಅಲ್ಲದೆ ಕಾಂಗ್ರೆಸ್ ಹೈಕಮಾಂಡ್ ತೇರದಾಳದಲ್ಲಿ ಯಾರಿಗೆ ಅನುಮತಿ ನೀಡುವುದೋ ಅವರಿಗೆ ಬೆಂಬಲಿಸುವುದಾಗಿ ತಿಳಿಸಿದರು.

Exit mobile version