Home ನಮ್ಮ ಜಿಲ್ಲೆ ಕಾಂಗ್ರೆಸ್ ರಿವರ್ಸ್ ಗೇರ್ ಸರ್ಕಾರ

ಕಾಂಗ್ರೆಸ್ ರಿವರ್ಸ್ ಗೇರ್ ಸರ್ಕಾರ

0

ಬಾಗಲಕೋಟೆ: ರಾಜ್ಯದಲ್ಲಿ ಯಾವುದೇ ಕಾರಣಕ್ಕೂ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳಿಗೆ ಮಣೆ ಹಾಕಬೇಡಿ. ಈಗಾಗಲೇ ಕಾಂಗ್ರೆಸ್ ರಿವರ್ಸ್ ಗೇರ್‌ನಲ್ಲಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಗುಡುಗಿದರು.
ಬಾಗಲಕೋಟೆ ಜಿಲ್ಲೆಯ ತೇರದಾಳ ವಿಧಾನಸಭಾ ಕ್ಷೇತ್ರದ ರಬಕವಿಯ ಚಿಕ್ಕೋಡಿ ಕ್ರೀಡಾಂಗಣದಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಕಾಂಗ್ರೆಸ್ ಪಿಎಫ್‌ಐ ನಿಷೇಧ ಮಾಡುವ ಜರೂರವಿಲ್ಲವೆಂದು ಮತಬ್ಯಾಂಕ್ ಸಲುವಾಗಿ ಏನೆಲ್ಲ ಮಾಡುವ ಕೀಳುಮಟ್ಟದ್ದಾಗಿದೆ.
ಮುಸ್ಲಿಂ ಮೀಸಲಾತಿ ಕಡಿಮೆ ಮಾಡಿದೆಯಾದರೆ ಪರಿಶಿಷ್ಟ ಜಾತಿ, ಪಂಗಡ, ಲಿಂಗಾಯತ ಹಾಗೂ ಒಕ್ಕಲಿಗರಿಗೆ ಮೀಸಲಾತಿ ಕಲ್ಪಿಸಿದ್ದು ತಪ್ಪೇ? ರಾಜ್ಯದಲ್ಲಿ ಬಿಎಸ್‌ವೈ ಹಾಗೂ ಬೊಮ್ಮಾಯಿ ನೇತೃತ್ವದಲ್ಲಿ ಅಭಿವೃದ್ಧಿ ಪರ್ವವಾಗಿದೆ. ಪೂರ್ಣ ಪ್ರಮಾಣದ ಬಹುಮತ ಕರ್ನಾಟಕದಲ್ಲಿ ರಚನೆಯಾಗುವ ಮೂಲಕ, ಡಬಲ್ ಎಂಜಿನ್ ಸರ್ಕಾರ ಮತ್ತೇ ನಡೆಯಲಿದೆ ಎಂದು ಶಾ ವಿಶ್ವಾಸ ವ್ಯಕ್ತಪಡಿಸಿದರು.
ಅಲ್ಲಂಪ್ರಭು, ಬಸವಣ್ಣನವರ ಪುಣ್ಯದ ನಾಡಾಗಿದ್ದು, ಜೀವನ ಪೂರ್ತಿ ವಚನಗಳನ್ನು ಹೇಳುತ್ತ ಮಾನವ ಕುಲಕ್ಕೆ ಮಾರ್ಗದರ್ಶಕರಾಗಿದ್ದಾರೆ. ಇಂಥವರ ಸ್ಮರಣೆಯಲ್ಲಿ ಸದಾ ಬಿಜೆಪಿ ಪಕ್ಷವಿದ್ದು, ಕೇವಲ ರಾಜಕಾರಣಕ್ಕಾಗಿ ಪಕ್ಷವಲ್ಲ ಜೊತೆಗೆ ಸಂಸ್ಕೃತಿ, ರಾಷ್ಟ್ರಪ್ರೇಮ ಧ್ಯೇಯವಾಗಿದೆ ಎಂದರು.

Exit mobile version