Home ನಮ್ಮ ಜಿಲ್ಲೆ ಆಡುತ್ತಾ ಅಸುನೀಗಿದ ಕಂದಮ್ಮಗಳು

ಆಡುತ್ತಾ ಅಸುನೀಗಿದ ಕಂದಮ್ಮಗಳು

0

ಬೆಳಗಾವಿ: ನಿರ್ಮಾಣ ಹಂತದಲ್ಲಿರುವ ಕಟ್ಟಡದ ನೀರಿನ ಸಂಪಿಗೆ ಬಿದ್ದು ಪುಟ್ಟ ಕಂದಮ್ಮಗಳು ಸಾವನ್ನಪ್ಪಿದ ಘಟನೆ ನಡೆದಿದೆ.
ಸೋಮವಾರ ಮಧ್ಯಾಹ್ನ ಸೌದತ್ತಿ ನಗರ ಗುರ್ಲ್ ಹೊಸೂರು ವಾರ್ಡಿನ ನಿರ್ಮಾಣ ಹಂತದಲ್ಲಿರುವ ವಾಲ್ಮೀಕಿ ಭವನ ಕಟ್ಟಡದ ನೀರು ಸಂಗ್ರಹ ಮಾಡುವ ಸಂಪಿನಲ್ಲಿ ಮಕ್ಕಳ ಶವ ಪತ್ತೆಯಾಗಿದೆ. ಮೃತರನ್ನು ಇಲ್ಲಿನ ಪ್ರಗತಿ ಪೂರ್ವ ಪ್ರಾಥಮಿಕ ಮತ್ತು ಪ್ರಾಥಮಿಕ ಖಾಸಗಿ ಶಾಲೆಯ ನರ್ಸರಿ ಓದುತ್ತಿರುವ
ಶ್ಲೋಕ ಶಂಭುಲಿಂಗಪ್ಪ ಗುಡಿ,(೪) ಹಾಗೂ ಚಿದಾನಂದ ಪ್ರಕಾಶ ಸಾಲುಂಕೆ (೪) ಎಂದು ಗುರುತಿಸಲಾಗಿದ್ದು, ಆಟವಾಡುತ್ತಾ ಹೋಗಿ ಆಕಸ್ಮಿಕವಾಗಿ ನೀರು ತುಂಬಿರುವ ಸಂಪಿನಲ್ಲಿ ಬಿದ್ದು ಮೃತ ಹೊಂದಿರುವುದಾಗಿ ತಿಳಿದುಬಂದಿದ್ದು, ಸ್ಥಳಕ್ಕೆ ಪೊಲೀಸರು ಧಾವಿಸಿ ಬಂದು ಈ ಕುರಿತು ಮುಂದಿನ ಕ್ರಮ ಕೈಗೊಂಡಿದ್ದಾರೆ.

Exit mobile version