Home ನಮ್ಮ ಜಿಲ್ಲೆ ಬೆಳಗಾವಿ ಐಎಎಸ್ ಅಧಿಕಾರಿ ಮಹಾಂತೇಶ್ ಬೀಳಗಿ ಹುಟ್ಟೂರಿನಲ್ಲಿ ನೀರವ ಮೌನ

ಐಎಎಸ್ ಅಧಿಕಾರಿ ಮಹಾಂತೇಶ್ ಬೀಳಗಿ ಹುಟ್ಟೂರಿನಲ್ಲಿ ನೀರವ ಮೌನ

0

ಬೆಳಗಾವಿ: ಹಿರಿಯ ಐಎಎಸ್ ಅಧಿಕಾರಿ ಮಹಾಂತೇಶ್ ಬೀಳಗಿ ಮೃತಪಟ್ಟ ಹಿನ್ನೆಲೆಯಲ್ಲಿ ಹುಟ್ಟೂರು ಬೆಳಗಾವಿ ಜಿಲ್ಲೆಯ ರಾಮದುರ್ಗ ಪಟ್ಟಣದ ನವಿಪೇಟನಲ್ಲಿರುವ ಮನೆಯಲ್ಲಿ‌ ನೀರವ ಮೌನ ಆವರಿಸಿದೆ.

ಮಹಾಂತೇಶ್ ನಿವಾಸದ ಎದುರು ಜಮಾವಣೆಗೊಳ್ಳುತ್ತಿರುವ ಸಂಬಂಧಿಕರು ಸಾವಿನ ಸುದ್ದಿ ಕೇಳಿ ಮನೆಯತ್ತ ಧಾವಿಸುತ್ತಿದ್ದಾರೆ. ಮಹಾಂತೇಶ್ ಬೀಳಿಗಿಗೆ ಕಲಿಸಿದ ಗುರುಗಳು,‌ ಸ್ನೇಹಿತರು ಮಹಾಂತೇಶ್ ಬೀಳಗಿ ನೆನೆದು ಭಾವುಕರಾಗಿದ್ದಾರೆ.

ಎರಡು ಹೊತ್ತು ಊಟ ಮಾಡದಷ್ಟು ಕಡು ಬಡತನದಲ್ಲಿ ಬೆಳೆದಿದ್ದ ಮಹಾಂತೇಶ್ ಡಿಗ್ರಿವರೆಗೂ ರಾಮದುರ್ಗದಲ್ಲಿ ಓದಿ ಬಳಿಕ ಕರ್ನಾಟಕ ಯುನಿವರ್ಸಿಟಿ ಧಾರವಾಡದಲ್ಲಿ ಓದಿದರು. ತಂದೆ ಮೃತಪಟ್ಟ ಬಳಿಕ ತಾಯಿ ನಾಲ್ಕು ಜನ ಮಕ್ಕಳನ್ನ ಸಾಕಿದ್ದರು. ಕಷ್ಟ ಪಟ್ಟು ಓದಿ ಕೆಎಎಸ್‌ನಲ್ಲಿ ನಾಲ್ಕನೇ ರ್ಯಾಂಕ್ ಪಡೆದಿದ್ದ ಎಂದು ಸ್ನೇಹಿತರು ಭಾವುಕರಾಗುತ್ತ ಕಣ್ಣೀರಿಡುತ್ತಿದ್ದಾರೆ.

ಅಪಘಾತದಲ್ಲಿ ಮಹಾಂತೇಶ ಅವರ ಇಬ್ಬರು ಸಹೋದರರೂ ಕೊನೆಯುಸಿರೆಳೆದಿದ್ದಾರೆ.

NO COMMENTS

LEAVE A REPLY

Please enter your comment!
Please enter your name here

Exit mobile version