ಬೆಳಗಾವಿ: ರಾಜ್ಯದ ಮುಂದಿನ ನಾಯಕತ್ವ ಕುರಿತು ರಾಜಕೀಯ ವಲಯದಲ್ಲಿ ಚರ್ಚೆಗಳು ಜೋರಾಗಿರುವ ನಡುವೆಯೇ ಮಾಜಿ ಸಚಿವ ಮತ್ತು ಗೋಕಾಕದ ಬಲಾಢ್ಯ ಶಾಸಕ ರಮೇಶ್ ಜಾರಕಿಹೊಳಿ ತಾವು ಮುಖ್ಯಮಂತ್ರಿಯಾಗುವ ಸಾಧ್ಯತೆ ಕುರಿತು ಸ್ಪಷ್ಟ ಸುಳಿವು ನೀಡಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ರಾಜ್ಯದ ಹಿತದೃಷ್ಟಿಯಿಂದ ಯಾರು ಸಿಎಂ ಆಗಬೇಕು ಎಂಬುದರ ಬಗ್ಗೆ ಹಲವರು ಮಾತಾಡ್ತಾರೆ. ಆದರೆ 2028ಕ್ಕೆ ಸಮಯ ಬಂದರೆ ನಾನೇ ಸಿಎಂ ಆಗೋಣ… ಸಮಯ ಬಂದಾಗ ಆಗೋಣ” ಎಂದು ನೇರವಾಗಿ ಹೇಳಿದರು.
ಬಿಜೆಪಿಯಲ್ಲಿ ನಾನು–ಅಶೋಕ ಇಬ್ಬರೇ ಹಿರಿಯರು: ಪಕ್ಷದ ಹಿರಿಯತ್ವದ ಬಗ್ಗೆ ಮಾತನಾಡಿದ ಅವರು, “ಬಿಜೆಪಿಯಲ್ಲಿ ನಾನು ಮತ್ತು ಆರ್. ಅಶೋಕ ನಾವಿಬ್ಬರೇ ಹಿರಿಯರು. ನಾವು ಏಳು ಬಾರಿ ಶಾಸಕರಾಗಿ ಗೆದ್ದಿದ್ದೇವೆ. ಉಳಿದವರಿಗಿಂತ ಅನುಭವವೂ ಹೆಚ್ಚು” ಎಂದು ಆತ್ಮವಿಶ್ವಾಸ ವ್ಯಕ್ತಪಡಿಸಿದರು.
ಸಿಎಂ ಆಗ್ತೀನಿ ಅಂತಾ ಮಾಧ್ಯಮಕ್ಕೆ ಹೇಳಿದ್ರೆ ಆಗೋದಿಲ್ಲ: ಶಾಸಕರಿಗೆ ಒಳಾಂಗಣ ರಾಜಕೀಯದ ಹಿನ್ನೆಲೆ ಏನೆಂಬ ಪ್ರಶ್ನೆಗೆ ಜಾರಕಿಹೊಳಿ ನಗುತ್ತಾ, “ಹೌದು, ನಾನು ಸಿಎಂ ಆಗ್ತೀನಿ ಅಂತಾ ಮಾಧ್ಯಮಕ್ಕೆ ಹೇಳಿದ್ರೆ ಆಗೋದಿಲ್ಲ. ಸಮಯ ಬಂದರೆ ನೋಡ್ತೀವಿ” ಎಂದು ಹೇಳಿದರು.
